ಕೌಶಲ್ಯಾಧಾರಿತ ಸಾವಯವ ಕೃಷಿಕ ತರಬೇತಿ ಉದ್ಘಾಟನೆ

0
19

ಕಲಬುರಗಿ: ಕೃಷಿ ವಿಜ್ಞಾನ ಕೇಂದ್ರ, ರದ್ದೇವಾಡ್ಗಿಯಲ್ಲಿ ಕೌಶಲ್ಯಾಧಾರಿತ ಸಾವಯವ ಕೃಷಿಕ ತರಬೇತಿ ಉದ್ಘಾಟನ ಸಮಾರಂಭ ಹಮ್ಮಿಕೊಳ್ಳಲಾಯಿತು. ಪ್ರಾರಂಭದಲ್ಲಿ ಡಾ. ಮಲ್ಲಪ್ಪ, ವಿಜ್ಞಾನಿ (ಬೇಸಾಯಶಾಸ್ತ್ರ) ರವರು ಅತಿಥಿ ಗಣ್ಯರನ್ನು ವೇದಿಕೆಗೆ ಸ್ವಾಗತಿಸಿದರು ಹಾಗೂ ಕಾರ್ಯಕ್ರಮದ ನಿರೂಪಣೆ ಮಾಡಿದರು.

ಡಾ. ಚೇತನ್ ಟಿ, ವಿಜ್ಞಾನಿ (ತೋಟಗಾರಿಕೆ) ರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ 25 ದಿನಗಳ ಕೌಶಲ್ಯಾಧಾರಿತ ಸಾವಯವ ಕೃಷಿಕ ತರಬೇತಿಯ ಮಹತ್ವ ಮತ್ತು ಉದ್ದೇಶ ಕುರಿತು ವಿವರಿಸಿದರು.

Contact Your\'s Advertisement; 9902492681

ತದನಂತರ ವೇದಿಕೆ ಗಣ್ಯರು ಮತ್ತು ರೈತರು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ ಡಾ. ಶಿವಶಂಕರ ಎನ್., ವಿಸ್ತರಣಾ ನಿರ್ದೇಶಕರು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ರವರು ಕಾರ್ಯಕ್ರಮ ಕುರಿತು ಪ್ರಸುತ್ತ ಸನ್ನಿವೇಶದಲ್ಲಿ ಸಾವಯವ ಕೃಷಿಯ ಮಹತ್ವ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆಯ ಬಗ್ಗೆ ತಮ್ಮ ಉದ್ಘಾಟನ ಭಾಷಣದಲ್ಲಿ ಸಂಕ್ಷಿಪ್ತವಾಗಿ ವಿವರಿಸಿದರು.

ತರಬೇತಿ ತೆಗೆದುಕೊಳ್ಳುವ ರೈತರು ಕೌಶಲ್ಯಾಧಾರಿತ ಸಾವಯವ ಕೃಷಿಕ ತರಬೇತಿ ಅನುಭವ ಪಡೆದು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಬೇಕೆಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಎಮ್.ಜಿ. ಪಾಟೀಲ, ವಿಶ್ರಾಂತ ಕುಲಪತಿಗಳು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ರವರು ಸಲಹೆ ನೀಡಿದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ. ಶರಣಗೌಡ ಪಾಟೀಲ, ಹಿ.ಸ.ತೋ.ನಿ, ತೋಟಗಾರಿಕೆ ಇಲಾಖೆ (ಜಿ.ಪಂ), ಜೇವರ್ಗಿ ರವರು ತಮ್ಮ ಅತಿಥಿ ಭಾಷಣದಲ್ಲಿ ರೈತರಿಗೆ ತೋಟಗಾರಿಕೆ ಇಲಾಖೆಯಲ್ಲಿ ಲಭ್ಯವಿರುವ ಯೋಜನೆಗಳ ಕುರಿತು ವಿವರಿಸಿ ಮತ್ತು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಕೇಂದ್ರದ ಮುಖ್ಯಸ್ಥರಾದ ಡಾ.ಪಿ.ವಾಸುದೇವ ನಾಯ್ಕ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಈ ತರಬೇತಿ ಕಾರ್ಯಕ್ರಮದಲ್ಲಿ ವಿವಿಧ ವಿಷಯವಾರು ತಜ್ಞರು ವಿಷಯಕ್ಕನುಗುಣವಾಗಿ ತಮಗೆ ತರಬೇತಿ ನೀಡಲಿದ್ದು ರೈತರು ಸರಿಯಾದ ರೀತಿಯಲ್ಲಿ ತರಬೇತಿ ಪಡೆದು ಅವರು ತಮ್ಮ ಕ್ಷೇತ್ರಗಳಲ್ಲಿ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಬೇಕೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಡಾ. ಎ.ಆರ್. ಕುರುಬರ, ಸಹ ವಿಸ್ತರಣಾ ನಿರ್ದೇಶಕರು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಡಾ. ಉಮೇಶ ಬಾರಿಕರ, ವಿಸ್ತರಣಾ ಮುಂದಾಳು. ಕೃಷಿ ವಿಸ್ತರಣಾ ಶಿಕ್ಷಣ ಘಟಕ ನಾಲವಾರ, ಡಾ. ಡಿ.ಕೆ. ಹಾದಿಮನಿ, ತಾಂತ್ರಿಕ ಅಧಿಕಾರಿಗಳು, ವಿಸ್ತರಣಾ ನಿರ್ದೇಶನಾಲಯ, ರಾಯಚೂರು ರವರು, ಕೇಂದ್ರದ ವಿಜ್ಞಾನಿಗಳು, ತಾಂತ್ರಿಕ ಸಿಬ್ಬಂದಿಗಳು, ಶಿಬಿರಾರ್ಥಿಗಳು ಮತ್ತು ರೈತರು ಭಾಗವಹಿಸಿದರು. ಕೊನೆಯಲ್ಲಿ ಡಾ. ಚಂದ್ರಕಾಂತ ವಿಜ್ಞಾನಿ (ಮಣ್ಣು ವಿಜ್ಞಾನ) ವಂದನಾರ್ಪಣೆ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here