ಸುರಪುರ: ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ನಗರದಲ್ಲಿ ರಾಷ್ಟ್ರೀಯ ಗೋರ ಸೇನಾ ಸಂಘಟನೆ ವಿಠ್ಠಲ್ ಮಹಾರಾಜ ನೇತೃತ್ವದಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ರಾಜ್ಯದಲ್ಲಿ ಸರಕಾರ ಒಳ ಮೀಸಲಾತಿ ಜಾರಿ ಮಾಡುವುದಾಗಿ ಹೇಳಲಾಗುತ್ತಿದೆ.ಇದರಿಂದ ಒಂದು ಸಮುದಾಯಕ್ಕೆ ಲಾಭ ಮಾಡಲು ಹೋಗಿ ಸುಮಾರು 99 ಸಮುದಾಯಗಳಿಗೆ ಸರಕಾರ ಅನ್ಯಾಯ ಮಾಡಲು ಹೊರಟಿದೆ,ಇದನ್ನು ರಾಷ್ಟ್ರೀಯ ಗೋರ ಸೇನಾ ಸಂಘಟನೆ ಇದನ್ನು ಖಂಡಿಸುತ್ತದೆ.ಕೂಡಲೇ ಸರಕಾರ ಅವೈಜ್ಞಾನಿಕವಾಗಿ ಒಳ ಮೀಸಲಾತಿ ಜಾರಿ ಮಾಡಲು ಮುಂದಾಗಬಾರದು ಎಂದು ಇಂದು ಇಡೀ ರಾಜ್ಯಾದ್ಯಂತ ಎಲ್ಲಾ ಸಚಿವರು,ಶಾಸಕರ ಮೂಲಕ ಸರಕಾರಕ್ಕೆ ಮನವಿ ಮಾಡುತ್ತಿದ್ದು,ಒಳ ಮೀಸಲಾತಿ ಜಾರಿ ಮಾಡಬಾರದು ಎಂದು ಮನವಿ ಮಾಡಿ ವಿನಂತಿಸುತ್ತೇವೆ.ಒಂದು ವೇಳೆ ಜಾರಿಗೆ ಮುಂದಾದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಮುಖ್ಯಮಂತ್ರಿಗೆ ಬರೆದ ಮನವಿ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರಿಗೆ ಸಲ್ಲಿಸಿದರು.ಈ ಸಂದರ್ಭದಲ್ಲಿ ರಾಷ್ಟ್ರೀಯ ಗೋರ ಸೇನಾ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಕೃಷ್ಣಾ ಹೆಚ್.ಜಾಧವ್,ತಾಲೂಕ ಅಧ್ಯಕ್ಷ ಕಾಂತೇಶ ರಾಠೋಡ,ಸೀತಾರಾಮ ರಾಠೋಡ,ಸಂತೋಷ ರಾಠೋಡ,ಬಾಬು ಚವ್ಹಾಣ,ಬಾಸುನಾಯಕ ಚವ್ಹಾಣ,ಶೇಖರ ನಾಯಕ,ನಿಂಗಾನಾಯಕ,ಸೀತಾರಾಮ ರಾಠೋಡ,ರಾಮು ನಾಯಕ,ಲಕ್ಷ್ಮಣ ಚವ್ಹಾಣ,ತಿಪ್ಪಣ್ಣ ನಾಯಕ,ಶಾಂತಿಲಾಲ ರಾಠೋಡ,ಕಾಶಿನಾಥ ಶ್ಯಾಮು ನಾಯಕ,ಸುಭಾಸ ಚವ್ಹಾಣ,ತಿರುಪತಿ ಚವ್ಹಾಣ,ಬಾಲಚಂದ್ರ ಚವ್ಹಾಣ,ಕುಮಾರ ನಾಯಕ,ಮೋತಿಲಾಲ ನಾಯಕ,ಶಾಂತಪ್ಪ ಟೋಪಣ್ಣ ಸೇರಿದಂತೆ ಅನೇಕ ಜನ ಮಹಿಳೆಯರು,ಮುಖಂಡರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.