ಸುರಪುರ:ಹೊಸದಾಗಿ ಆರಂಭಗೊಂಡಿರುವ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸಂಘದ ನಿಯಮದಡಿಯಲ್ಲಿ ಕಾರ್ಯನಿರ್ವಹಿಸಿ ಕಾಲೇಜಿನ ಅಭಿವೃಧ್ಧಿಗೆ ಶ್ರಮಿಸುವಂತೆ ಪ್ರಾಂಶುಪಾಲ ಆನಂದಕುಮಾರ ಜೋಷಿ ಹೇಳಿದರು.
ನಗರದ ಶ್ರೀ ಕಮಲಕಿಶೋರ ಗೋವರ್ಧನ್‍ದಾಸ ಲಡ್ಡಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಿಗೆ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, (ಯುಜಿಸಿ) ವಿಶ್ವವಿದ್ಯಾಲಯ ಅನುದಾನ ಆಯೋಗವೂ ಕಾಲೇಜಿನಲ್ಲಿ ಇರುವ ಸಮಸ್ಯೆಗಳನ್ನು ಅವಲೋಕಿಸಿ ಮತ್ತು ಗುಣಮಟ್ಟದ ಶಿಕ್ಷಣವನ್ನು ಆಧರಿಸಿ ಅನುದಾನ ಬಿಡುಗಡೆ ಮತ್ತು ಶ್ರೇಯಾಂಕವನ್ನು ನೀಡುತ್ತದೆ ಎಂದರು.
ಕಾಲೇಜಿನಲ್ಲಿ ಶಿಕ್ಷಣದ ಪ್ರಗತಿ ಮತ್ತು ಗುಣಮಟ್ಟ ತಿಳಿಸಲು ಹಳೆ ವಿದ್ಯಾರ್ಥಿಗಳು ಮೌಖಿಕ ಮತ್ತು ಲಿಖಿತ ಹೇಳಿಕೆಗಳು ಅಗತ್ಯವಾಗಿವೆ. ಆದ್ದರಿಂದ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳ ಸಂಘವನ್ನು ಸ್ಥಾಪಿಸಿದ್ದು, ನೋಂದಣಿಯನ್ನು ಮಾಡಸಲಾಗಿದೆ.ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಬಲಭೀಮರಾಯ ದೇಸಾಯಿ, ಪ್ರಮೋದ ಕುಲಕರ್ಣಿ, ಹಣಮಂತಪ್ಪ ವಗ್ಗರ್, ದೇವೇಂದ್ರಪ್ಪ ಪಾಟೀಲ್, ರೂಪಾ ಕುಲಕರ್ಣಿ, ಶ್ರೀದೇವಿ ಹೂಗಾರ, ಡಾ. ಕೃಷ್ಣ, ಮಹಾಂತೇಶ ನಾಯಕ, ಡಾ. ಹಣಮಂತ ಸಿಂಘೆ, ಡಾ. ಹಣಮಂತ ದೊಡ್ಮನಿ, ಬಸವರಾಜ ಭಂಡಾರಿ, ಮೋನಪ್ಪ ಗಚ್ಚಿನಮನಿ, ರೆಡ್ಡಿ ವಿಶ್ವನಾಥ ರೆಡ್ಡಿ, ಪರಮಣ್ಣ, ಶಾಂತ ನಾಯಕ, ಆದಿಶೇಷ ನೀಲಗಾರ, ವೆಂಕಟೇಶ ಜಾಲಗಾರ ಸೇರಿದಂತೆ ಇತರರಿದ್ದರು.
ಪದಾಧಿಕಾರಿಗಳು: ಭಂಡಾರೆಪ್ಪ ನಾಟೇಕಾರ್ ಅಧ್ಯಕ್ಷ,ಸುರೆಂದ್ರ ಉಪಾಧ್ಯಕ್ಷ ,ಅನ್ವರ್ ಪ್ರಧಾನ ಕಾರ್ಯದರ್ಶಿ ,ಪರಶುರಾಮ ಕಾರ್ಯದರ್ಶಿ,ಬಸಮ್ಮ ನ್ಯಾಮತಿ ಖಜಾಂಚಿ, ಮಲ್ಲಿಕಾರ್ಜುನ ಸಂಘಟನಾ ಕಾರ್ಯದರ್ಶಿಗಳಾಗಿ ,ಸದಸ್ಯರಾಗಿ ಶ್ರವಣಕುಮಾರ, ಬೀರಣ್ಣ, ಹಣಮಂತ, ಸದಸ್ಯರಾಗಿ ಸುಮಿತ್ರಾ, ಪ್ರಮಾ, ಶಾಂತಪ್ಪ ಶ್ರೀಶೈಲ ಆಯ್ಕೆಯಾಗಿದ್ದಾರೆ.
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…