ಮತದಾರರಿಗೆ ಮನತುಂಬಿದ ಧನ್ಯವಾದ ಅರ್ಪಿಸಿದ ಸಂಸದ ರಾಧಾಕೃಷ್ಣ ದೊಡ್ಡಮನಿ

0
40
  • ಎಂ.ಡಿ ಮಶಾಖ ಚಿತ್ತಾಪುರ

ಚಿತ್ತಾಪುರ; ಕಾಂಗ್ರೆಸ್ ಪಕ್ಷ ನನ್ನನ್ನು ಗುರುತಿಸಿ ಟಿಕೇಟು ನೀಡಿತ್ತು. ನೀವೆಲ್ಲ ಜೊತೆಯಾಗಿ ಕೆಲಸ ಮಾಡಿ ಮನೆ ಮನೆಗೆ ಹೋಗಿ ಪ್ರಚಾರ ಮಾಡಿ ಮತಗಳಿಸಿ ಗೆಲ್ಲುವುದಕ್ಕೆ ಸಹಕಾರಿಯಾಗಿದ್ದೀರಿ, ನಿಮಗೆಲ್ಲ ನಾನು ಮನಪೂರ್ವಕವಾಗಿ ಧನ್ಯವಾದಗಳನ್ನು ಸಮರ್ಮಿಸುತ್ತಿದ್ದೇನೆ ಎಂದು ಸಂಸದ ರಾಧಾಕೃಷ್ಣ ದೊಡ್ಡಮನಿ‌ ಅವರು ಹೇಳಿದರು.

ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅಭಿಮಾನದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಾನು ಸೇರಿದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ನೀವೆಲ್ಲ ವಿಶ್ವಾಸವಿಟ್ಟು ನನಗೆ ಗೆಲ್ಲಿಸಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ. ನಿಮ್ಮೆಲ್ಲರ ಸಹಕಾರ ಹೀಗೆ ಇರಲಿ ಎಂದು ಮನವಿ ಮಾಡಿದರು.

Contact Your\'s Advertisement; 9902492681

ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ನಿಮ್ಮ ಅಭಿಮಾನದ ಅಕ್ಕರೆಗೆ ನನಗೆ ಮಾತು ಬರದಾಗಿದೆ. ನೀವು ನಿಮ್ಮ ಪ್ರೀತಿ ತೋರಿಸಲು ಇಲ್ಲಿ ಸೇರಿದ್ದೀರಿ ನಿಮ್ಮ ವಿಶ್ವಾಸಕ್ಕೆ ನಮ್ಮ ಕುಟುಂಬದ ಪರವಾಗಿ ಕೋಟಿ ಕೋಟಿ ಧನ್ಯವಾದಗಳು.

ನಾನು ನಿಮಗೆ ಹಲವಾರು ಸಲ ಮಾತು ಕೊಟ್ಟಿದ್ದೇನೆ. ನಮ್ಮ ಭಾಗದ ಅಭಿವೃದ್ದಿಯೇ ನನಗೆ ಮೂಲ ಮಂತ್ರ ಇಂದು ಕೂಡಾ 62 ಕೋಟಿ‌ ರೂ. ವೆಚ್ಚದಲ್ಲಿ ಹಲವಾರು ಅಭಿವೃದ್ದಿ ಕಾಮಗಾರಿಗೆ ಅಡಿಗಲ್ಲು ನೆರವೇರಿಸಲಿದ್ದೇನೆ. ಮಾತು ಕೊಟ್ಟಂತೆ 52,000 ಕೋಟಿ ರೂ. ಖರ್ಚು ಮಾಡಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ, ಇದು ನಮ್ಮ ಸರ್ಕಾರದ ಬದ್ಧತೆ ಎಂದು ಚಪ್ಪಾಳೆಗಳ ಮಧ್ಯೆ ಘೋಷಣೆ ಮಾಡಿದರು.

ಈಗಾಗಲೇ 900 ಇಂಜಿನಿಯರಗಳನ್ನು ಇಲಾಖೆಯಲ್ಲಿ ಭರ್ತಿ ಮಾಡಲಾಗಿದೆ. ಜೊತೆಗೆ ಖಾಲಿ ಇರುವ ವಿವಿಧ ಇಲಾಖೆಗಳ ಎರಡು ಲಕ್ಷ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಿದ್ದೇವೆ. ನನಗೆ ಇನ್ನು ಒಂದು ವರ್ಷ ಸಮಯಾವಕಾಶ ನೀಡಿ ಚಿತ್ತಾಪುರ ಅಭಿವೃದ್ದಿಯ ಚಿತ್ರಣವನ್ನೇ ಬದಲಿಸಲಿದ್ದೇನೆ. ಕಲ್ಯಾಣ ಪಥ ಯೋಜನೆಯಡಿಯಲ್ಲಿ ಕಕ ಭಾಗದ ರಸ್ತೆಗಳ ಅಭಿವೃದ್ದಿಗೆ 1,000 ಕೋಟಿ ರೂ. ತೆಗೆದಿರಿಸಲಾಗಿದೆ. ಕೋಲ್ಡ್ ಸ್ಡೋರೇಜ್ ಹಾಗೂ ಸಾಮೂಹಿಕ ಶೌಚಾಲಯ ನಿರ್ಮಾಣ ನನ್ನ ಮುಂದಿನ ಗುರಿಯಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಬೊಕ್ಕಸ‌ ಖಾಲಿಯಾಗಿದೆ ಎನ್ನುವ ಬಿಜೆಪಿ ನಾಯಕರಿಗೆ ತಿರುಗೇಟು‌ ನೀಡಿದ ಖರ್ಗೆ ಇತ್ತೀಚಿಗೆ ಕಲಬುರಗಿಯಲ್ಲಿ ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 7,000 ಕೋಟಿ ರೂ. ಹಾಗೂ ಚಿತ್ತಾಪುರಕ್ಕೆ 300 ಕೋಟಿ ರೂ. ಯೋಜನೆಗಳ ಒಪ್ಪಿಗೆ ‌ಸಿಕ್ಕಿದೆ. ಜಿಲ್ಲೆಯ ಮೂವತ್ತು ಗ್ರಾಮಗಳ ಅಭಿವೃದ್ದಿಯ ನೀಲಿ ನಕ್ಷೆ ಹಾಕಲಾಗಿದೆ. ಇದು ಕೇವಲ ಗ್ರಾಮೀಣ ಪ್ರದೇಶ ಮಾತ್ರವಲ್ಲ, ವಾಡಿಯ ಸಮಗ್ರ ಅಭಿವೃದ್ದಿಯ ನೀಲಿನಕ್ಷೆ ತಯಾರಾಗಿದೆ ಇದಕ್ಕೆ 25 ಕೋಟಿ ರೂ. ತೆಗೆದಿರಸಲಾಗಿದೆ. ಚಿತ್ತಾಪುರ ಪಟ್ಟಣದಲ್ಲಿ ಮೃಗಾಲಯ, ವಿಜ್ಞಾನ ಕೇಂದ್ರ , ಮೃಗಾಲಯ ಸ್ಥಾಪನೆಯ ಗುರಿ ಹೊಂದಲಾಗಿದೆ ಎಂದರು.

ಚಿತ್ತಾಪುರ ತಾಲೂಕಿನಲ್ಲಿ ಕಾಯಕ ಗ್ರಾಮ ಯೋಜನೆ ಜಾರಿಗೆ ತರಲು ಆಲೋಚಿಸಲಾಗಿದೆ. ಇದರಲ್ಲಿ ಸಂಸದರ ಅನುದಾನ ಕೂಡಾ ಬಳಕೆಯಾಗಲಿದೆ. ಇದರ ಹಿಂದೆ ಸಂಸದ ರಾಧಾಕೃಷ್ಣ ದೊಡ್ಡಮನಿ‌ ಅವರ ಕನಸಿದೆ.‌ ಈ ಯೋಜನೆಯಡಿಯಲ್ಲಿ ಕನಿಷ್ಠ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಸಚಿವ ಶರಣಪ್ರಕಾಶ ಪಾಟೀಲ್ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ರಾಧಾಕೃಷ್ಣ ದೊಡ್ಡಮನಿ ಅವರಿಗೆ ನೀವೆಲ್ಲ‌ ಆಶೀರ್ವಾದ ಮಾಡಿ ಅವರನ್ನು ಕ್ಷೇತ್ರದ ಜನರ ಸೇವೆಗೆ ಕಳಿಸಿದ್ದೀರಿ ಎಂದು ಅವರು ಹೇಳಿದರು.

ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ದೇಶದದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ. ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಜೊತೆಗೆ‌ ಜನರ‌ ಸಾಮಾಜಿಕ‌ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದರು. ಬಿಜೆಪಿ ಜನರ ನಡುವೆ ಕಲಹ ಹುಟ್ಟು ಹಾಕುತ್ತಿದೆ ಎಂದು ದೂರಿದ ಅವರು ಜನಪರ ಕಾರ್ಯಕ್ರಮಗಳು ಯಾವುದಾದರೊಂದನ್ನು ಅವರು ಜಾರಿಗೆ ತರಲಿಲ್ಲ. ಆದರೆ ನಾವು ಅಧಿಕಾರಕ್ಕೆ ಬಂದ ಮೇಲೆ ಮಹಿಳೆಯರಿಗೆ, ನಿರುದ್ಯೋಗಿ ಯುವಕರಿಗೆ ಯೋಜನೆಗಳನ್ನ ಜಾರಿಗೆ ತಂದಿದ್ದೇವೆ ಎಂದರು.

ಚಿತ್ತಾಪುರ ಪಟ್ಟಣದ ಹೊರವಲಯದ ನಾಗಾವಿ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ತದನಂತರ ಚಿತಾವಲಿ ದರ್ಗಾಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು.

ನಂತರ ಬಸವೇಶ್ವರ ಹಾಗೂ ಡಾ ಅಂಬೇಡ್ಕರ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದ ಮೂಲಕ ಮೆರವಣಿಗೆಯಲ್ಲಿ ಬಜಾಜ್ ಕಲ್ಯಾಣ ಮಂಟಪಕ್ಕೆ ಕರೆ ತರಲಾಯಿತು. ಈ ಸಂದರ್ಭದಲ್ಲಿ ಕಲಾ ತಂಡಗಳು ಹಾಗೂ ಸಾಂಸ್ಕೃತಿಕ ತಂಡಗಳು ಕಾರ್ಯಕ್ರಮಕ್ಕೆ ಮೇರಗು ನೀಡಿದರು.

ಶಾಸಕರಾದ ಎಂ ವೈ ಪಾಟೀಲ್, ಅಲ್ಲಮಪ್ರಭು ಪಾಟೀಲ, ಎಂ ಎಲ್ ಸಿಗಳಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ ಮುಖಂಡರಾದ ದೇವೆಂದ್ರಪ್ಪ ಮರತೂರು, ಭಾಗಣ್ಣಗೌಡ ಸಂಕನೂರು, ಭೀಮಣ್ಣ ಸಾಲಿ, ಮಹೇಮೂದ್ ಸಾಹೇಬ್, ರೇವುನಾಯಕ ಬೆಳಮಗಿ, ಶಿವಾನಂದ ಪಾಟೀಲ, ರಮೇಶ ಮರಗೋಳ, ಅಜೀಜ್ ಸೇಟ್, ಶ್ರೀನಿವಾಸ ಸಗರ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here