ಯುವಕರು ಜಾನಪದ ಸಂಸ್ಕೃತಿಯ ವಾರಸುದಾರರಾಗಲಿ

ಡಾ. ಕು.ಶಿ.ಹರಿದಾಸ ಭಟ್ಟರ ಬದುಕು ಬರಹ ಸರಣಿ

ಕಲಬುರಗಿ: ಜನಪದದಂತಹ ವಿಶಾಲ ಕ್ಷೇತ್ರ ಬೇರೊಂದಿಲ್ಲ. ಯುವಕ- ಯುವತಿಯರು ವಾರಸುದಾರರಾದಾಗ ಮಾತ್ರ ಜಾನಪದ ಸಂಸ್ಕೃತಿ ಉಳಿಯುತ್ತದೆ ಎಂದು ರಮಾಬಾಯಿ ಜಾಗಿರ್ದಾರ್‌ ಪದವಿ ಮೂರ್ವ ವಿಜ್ಞಾನ ವಿದ್ಯಾಲಯದ ಪ್ರಾಚಾರ್ಯ ಡಾ. ಪ್ರಲ್ಹಾದ್‌ ಬುರ್ಲಿ ಪ್ರತಿಪಾದಿಸಿದ್ದಾರೆ.

ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದಿಂದ ಆರ್‌ಜೆ ಪ.ಪೂ. ಕಾಲೇಜಲ್ಲಿ ನಾಡಿನ ಹಿರಿಯ ಜಾನಪದ ವಿದ್ವಾಂಸರಾಗಿದ್ದ ಡಾ. ಕು.ಶಿ.ಹರಿದಾಸ ಭಟ್ಟರವರ ಬದುಕು ಬರಹ ಸರಣಿ ಉಪನ್ಯಾಸ ಮಾಲೆಯ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜನಪದ ಬದುಕಿನ ಸ್ಫೂರ್ತಿ, ಹಿಂದೆಲ್ಲಾ ಹುಟ್ಟಿನಂದಲೇ ಜನಪದ ಮೈಗೂಡುತ್ತಿತ್ತು. ಬದಲಾದ ಕಾಲದಲ್ಲೀಗ ಅದು ಅಸಾಧ್ಯವಾಗಿದೆ. ಆದಾಗ್ಯೂ ಯುವಕರು ಮನಸ್ಸು ಮಾಡುವ ಮೂಲಕ ನಮ್ಮ ಮೂಲ ಸಂಸ್ಕೃತಿಯ ಬೇರುಗಳಿರುವ ಜನಪದವನ್ನ ಪೋಷಿಸಲು ಮುದಾಗುವಂತೆ ಕರೆ ನೀಡಿದರು.

ಇಂದಿನ ಹಿಂದಿ, ಕನ್ನಡ, ಇಂಗ್ಲೀಷ್‌ ಸಿನಿಮಾಗಳಲ್ಲಿನ ದ್ವಂದ್ವಾರ್ಥ ಪದಗಳನ್ನು ಉಲ್ಲೇಖಿಸುತ್ತ ಇಂತಹ ಹಾಡುಗಳು, ಸಂಗೀತದಿಂದ ಸಮಾಜ ಹಾಳಾಗುತ್ತಿದೆ, ಜನಪದದಿಂದ ಆರೋಗ್ಯಕರ ಸಮಾಜ ಕಟ್ಟಬಹುದು ಎಂದರು.

ಸಸಿಗೆ ನೀರುಣಿಸುವ ಮೂಲಕ ಉಪನ್ಯಾಸ ಸರಣಿ ಉದ್ಘಾಟಿಸಿದ ಪತ್ರಕರ್ತ ಶೇಷಮೂರ್ತಿ ಅವಧಾನಿ, ಜನಪದ ಸರ್ವವ್ಯಾಪಿಯಾಗಿದ್ದರೂ ಆಧುನಿಕತೆಯಿಂದಾಗಿ ಮರೆಮಾಚಿದೆ. ಸರಕು ಹಾಗೂ ಕೊಳ್ಳುಬಾಕ ಸಂಸ್ಕೃತಿ, ಜಾಗತಿಕರಣದಿಂದಾಗಿ ಜನಪದದ ಮೇಲೆ ಮಂಕು ಕವಿದಂತಾಗಿದೆ. ಇದು ತಾತ್ಕಾಲಿಕ, ನಾಡಿ ಯುವಕರು ಜನಪದವನ್ನ ತಮ್ಮದಾಗಿಸಿಕೊಂಡಲ್ಲಿ ಅದು ಇನ್ನೂ ಸಾವಿರಾರು ವರ್ಷಗಳ ಕಾಲ ಉಳಿಯುತ್ತದೆ ಎಂದರು.

ರಂಗಾಯಣ ಮಾರ್ಜಿ ನಿರ್ದೇಶಕರಾದ ಡಾ. ಪ್ರಭಾಕರ ಜೋಷಿಯವರು ಜನಪದ ವಿದ್ವಾಂಸರಾಗಿ ಅನೇಕ ದಾಖಲಾರ್ಹ ಕೆಲಸಗಳನ್ನು ಮಾಡಿರುವ ಕುಶಿ ಹರಿದಾಸ ಭಟ್ಟರ ಬದುಕಿನಿಂದ ಯುವಕರು ಕಲಿಯಬೇಕಾದ ಮಹತ್ವದ ಸಂಗತಿಗಳನ್ನು ಪ್ರಸ್ತಾಪಿಸುತ್ತ ಸೇರಿದ್ದ ಯುವಕರಿಗೆ ಸ್ಫೂರ್ತಿ ತುಂಬಿದರು.

ಮಕ್ಕಳ ಸಾಹಿತಿ ಏಕೆ ರಾಮೇಶ್ವರ ಮಾತನಾಡುತ್ತ, ಜನಪದರ ಬೀಸುವ ಕಲ್ಲಿನ ಹಾಡುಗಳನ್ನು ಹೇಳುತ್ತ ಯುವಕರಲ್ಲಿ ಜನಪದದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು.

ಜನಪದ ಮರದ ಬೇರಾದರೆ ಕವಿವಾಣಿ ಹೂವು ಎಂದು ಹೇಳಿಕೆ ಮಾಡುತ್ತ ಜನಪದ ಅದ್ಹೇಗೆ ಬದುಕಿಗೆ ಮಹತ್ವದ್ದೆಂದು ನಿರೂಪಿಸಿದರಲ್ಲದೆ, ಜನಪದಕ್ಕೆ ಸಾವಿಲ್ಲ, ನೀವೆಲ್ಲ ಜನಪದ ಮೈಗೂಡಿಸಿಕೊಂಡು ಅಪ್ಪಿಕೊಳ್ಳಿ, ಅದಿನ್ನೂ ದೀರ್ಘಾಯುಷಿಯಾಗುತ್ತದೆಂದರು. ಆರ್‌ಜೆ ಪಿಯು ಕಾಲೇಜಿನ ಮಕ್ಕಳು, ಉಪನ್ಯಾಸಕರು ಪಾಲ್ಗೊಂಡಿದ್ದರು.

ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್ ಮಾಲಿಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಬುರಗಿ ಹೋಟೆಲ್, ಬೇಕರಿ ಮತ್ತು ವಸತಿಗೃಹ ಮಾಲೀಕರ ಸಂಘದ ಅಧ್ಯಕ್ಷ ನರಸಿಂಹ ಮೆಂಡನ್‌ ಮಾತನಾಡಿದರು.

ಭಾರತೀಯ ಪತ್ರಕರ್ತರ ಒಕ್ಕೂಟ ಮಂಡಳಿ ನವದೆಹಲಿಯ ಸದಸ್ಯರಾಗಿರುವ ಪತ್ರಕರ್ತ ಗೋಪಾಲರಾವ್ ಕುಲಕರ್ಣಿ ಹಾಗೂ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವಿಂದ್ರಪ್ಪ ಗಣಮುಖಿಯವರನ್ನು ಸನ್ಮಾನಿಸಲಾಯಿತು. ಕಾಲೇಜು ಆವರಣದಲ್ಲಿ ಹಿರಿಯ ಸಾಹಿತಿ ಏಕೆ ರಾಮೇಶ್ವರರಿಂದ ಕಲ್ಪವೃಕ್ಷ ತೆಂಗಿನ ಸಸಿ ನೆಟ್ಟು ನೀರೆರೆಯಲಾಯಿತು.

ಉಪನ್ಯಾಸಕ ಪ್ರೊ. ಮಳೇಂದ್ರ . ಮಳೇಂದ್ರ ಹೀರೆಮಠ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ, ಡಿ.ಪಿ. ಸಜ್ಜನ್, ಭಾನುಕುಮಾರ ಗಿರೇಗೋಳ, ಡಾ. ಹಣಮಂತ್ರಾಯ ರಾಂಪೂರೆ, ಶರಣಬಸಪ್ಪ ಬೆಳಕೇರಿ ಇದ್ದರು.

ಕಲಬುರಗಿಯ ಆರ್‌ಜೆ ಪಪೂ ವಿಜ್ಞಾನ ಕಾಲೇಜಲ್ಲಿ ಡಾ. ಕು.ಶಿ.ಹರಿದಾಸ ಭಟ್ಟ ಅವರ ಬದುಕು ಬರಹ ಸರಣಿ ಉಪನ್ಯಾಸ ಮಾಲೆಯನ್ನು ಸಸಿಗೆ ನೀರೆರೆದು ಪತ್ರಕರ್ತ ಶೇಷಮೂರ್ತಿ ಅವಧಾನಿ ಉದ್ಘಾಟಿಸಿದರು. ಪ್ರಭಾಕರ ಜೋಶಿ, ಏಕೆ ರಾಮೇಶ್ವರ, ಸಿಎಸ್‌ ಮಾಲೀಪಾಟೀಲ್‌, ಪ್ರಲ್ಹಾದ ಬುರ್ಲಿ, ನರಸಿಂಹ ಮೆಂಡನ್‌ ಇದ್ದಾರೆ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

8 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

10 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

17 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

17 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

18 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago