ಸಾಮಾಜಿಕ ಭದ್ರತೆ ಬಗ್ಗೆ ಅರಿವು ಅಗತ್ಯ: ಬಸವರಾಜ ಹೆಳವರ ಅಭಿಮತ

0
35

ಯಾದಗಿರಿ: ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ ಇ.ಪಿ.ಎಫ್ ಕ್ಷೇತ್ರೀಯ ಕಾರ್ಯಾಲಯದ ವತಿಯಿಂದ ಅಕ್ಟೊಬರ ತಿಂಗಳ “ನಿಧಿ ಆಪ್ಕೆ ನಿಕಟ್” ಕಾರ್ಯಕ್ರಮವನ್ನು ಅ.28ರಂದು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕು ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲೆಯ ನೋಡಲ್ ಅಧಿಕಾರಿ ಬಸವರಾಜ ಹೆಳವರ ಯಾಳಗಿ ಅವರು ಭವಿಷ್ಯ ‌ನಿಧಿ ಯೋಜನೆಗಳ ಸೌಲಭ್ಯಗಳ ಬಗ್ಗೆ ವಿವರವಾಗಿ ತಿಳಿಸಿದರು. ಸಾಮಾಜಿಕ ಭದ್ರತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು. ಭವಿಷ್ಯ ನಿಧಿ ಸದಸ್ಯರ ವಿವಿಧ ಬಗೆಯ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಇ.ಪಿ.ಎಫ್ ಸಿಬ್ಬಂದಿ ಅರುಣಕುಮಾರ, ರಾಷ್ಟ್ರೀಯ ಅರೋಗ್ಯ ಅಭಿಯಾನದ ತಾಲ್ಲುಕು ಲೆಕ್ಕ ವ್ಯವಸ್ಥಾಪಕಿ ಅರ್ಚನಾ, ತಾಲ್ಲುಕು ಕಾರ್ಯಕ್ರಮ ವ್ಯವಸ್ಥಾಪಕಿ ವಿದ್ಯಾಶ್ರೀ, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ರಾಚಣ್ಣಗೌಡ ಕರಡ್ಡಿ ಹಾಗೂ ಡಾ. ವಿ. ಎಂ. ಪಾಟೀಲ್, ಸಂಗಣ್ಣ ನುಚ್ಚಿನ, ಶರಣಬಸವ ರೆಡ್ಡಿ, ಬಾಬುರಾವ್ ಮೊರೆ, ಮಹಮ್ಮದ್ ಗೌಸ, ನಾಗರಾಜ್, ಸುರೇಶ,ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿಯ ಸಿಬ್ಬಂದಿಗಳು, ನಗರ ಆರೋಗ್ಯ ಕೇಂದ್ರದ ನರ್ಸಿಂಗ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here