ಗರುಡಾದ್ರಿ ಕಲಾ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಭೆ

ಸುರಪುರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯು ನಗರದ ಗರುಡಾದ್ರಿ ಮಂದಿರದಲ್ಲಿ ಮೂರನೇ ಸುರಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವ ಪ್ರಯುಕ್ತವಾಗಿ ಪೂರ್ವಭಾವಿ ಸಭೆಯು ಜರುಗಿತು. ಸಭೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಾವ ಸ್ಥಳದಲ್ಲಿ ಆಯೋಜಿಸಿದರೆ ಸೂಕ್ತ ಎಂದು ಸುದೀರ್ಘವಾಗಿ ಚರ್ಚಿಸಲಾಯಿತು ಸುರಪುರ ನಗರ, ಕಕ್ಕೇರಾ ಮತ್ತು ಕೆಂಭಾವಿ ಸಮ್ಮೇಳನವನ್ನು ಆಯೋಜಿಸುವುದು ಸೂಕ್ತ ಎಂಬುದು ಸರ್ವರ ಅಭಿಪ್ರಾಯವಾಗಿತ್ತು.

ಕೆಂಭಾವಿ ವಲಯ ಘಟಕದ ಅಧ್ಯಕ್ಷ ಮಡಿವಾಳಪ್ಪ ಪಾಟೀಲ್ ಅವರು ಕೆಂಭಾವಿಯಲ್ಲಿ ಸುರಪುರ ತಾಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನವು 30 ವರ್ಷಗಳ ಹಿಂದೆ ಜರುಗಿತ್ತು ಪ್ರಸ್ತುತವಾಗಿ ಈಗ ನಾವು ಸುರಪುರ ತಾಲೂಕು ಮೂರನೇ ಸಾಹಿತ್ಯ ಸಮ್ಮೇಳನವನ್ನು ನಾವು ಆಯೋಜಿಸುತ್ತೇವೆ ಅವಕಾಶವನ್ನು ಕಲ್ಪಿಸಿ ಕೊಡಬೇಕೆಂದು ಪ್ರಸ್ತಾಪಿಸಿದರು.

ಹಿರಿಯ ಸಾಹಿತಿ ಶ್ರೀನಿವಾಸ್ ಜಾಲವಾದಿ ಅವರು ಕೆಂಭಾವಿ ವಲಯ ಘಟಕದ ಅಧ್ಯಕ್ಷ ಮಡಿವಾಳಪ್ಪ ಪಾಟೀಲ್ ಅವರ ಅಭಿಪ್ರಾಯ ಸಮಂಜಸವಾಗಿದೆ ಕೆಂಭಾವಿಯಲ್ಲಿ ಈಗ ಅವರು ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ಉತ್ಸುಕರಾಗಿದ್ದು ಅವರಿಗೆ ಅವಕಾಶ ಕಲ್ಪಿಸಿ ಕೊಡಬೇಕು ಎಂದು ಸೂಚಿಸಿದರು. ಮತ್ತೊರ್ವ ಹಿರಿಯ ಸಾಹಿತಿಗಳಾದ ಶಾಂತಪ್ಪ ಬೂದಿಹಾಳ ಅವರು ಮಡಿವಾಳಪ್ಪ ಪಾಟೀಲ್ ಅವರ ಪ್ರಸ್ತಾವನೆ ಮತ್ತು ಶ್ರೀನಿವಾಸ್ ಜಾಲವಾದಿ ಅವರ ಸೂಚನೆ ಸಮಂಜಸವಾಗಿದೆ ಕೆಂಭಾವಿಯ ಬಹು ಜನರ ಬಹಳ ದಿನಗಳ ಕನಸು ಸಾಹಿತ್ಯ ಸಮ್ಮೇಳನ ಆಯೋಜಿಸುವುದಾಗಿದೆ ಅವರಿಗೆ ಅವಕಾಶ ನೀಡುವುದು ಸೂಕ್ತ ವಾಗಿದೆ ಎಂದು ಅನುಮೋದನೆ ಮಾಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಕರತಾಡನ ಮಾಡುವ ಮೂಲಕ ಒಪ್ಪಿಗೆ ಸೂಚಿಸಿದರು.

ಕಾರ್ಯಕಾರಿ ಸಮಿತಿಯ ನೇತೃತ್ವವನ್ನು ವಹಿಸಿದ್ದ ಗೌರವ ಅಧ್ಯಕ್ಷರಾದ ರಾಜಾ ಮುಕುಂದ ನಾಯಕ್ ಅವರು 3ನೇ ತಾಲೂಕು ಸಾಹಿತ್ಯ ಸಮ್ಮೇಳನವನ್ನು ವಿಜೃಂಭಣೆಯಿಂದ ಆಚರಿಸುವುದರ ಜೊತೆಗೆ ತಾಲೂಕಿನ ಎಲ್ಲಾ ಸಾಹಿತಿಗಳನ್ನು ಮತ್ತು ಹಿರಿಯರನ್ನು ಸಮಭಾವದಿಂದ ಜೊತೆಯಲ್ಲಿ ಕರೆದುಕೊಂಡು ಹೋಗಬೇಕು ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣಬಸಪ್ಪ ಯಾಳವಾರ ಅವರು ಮೂರನೆಯ ಸುರಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ವನ್ನು ಕೆಂಬಾವಿ ವಲಯದಲ್ಲಿ ಆಯೋಜಿಸಲು ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಆಯೋಜಿಸಲಾಗುವುದು ಎಂದು ಘೋಷಿಸಿದರು. ಮುಂದಿನ ದಿನಗಳಲ್ಲಿ ತಾಲೂಕು ಕಾರ್ಯಕಾರಿ ಸಮಿತಿಯು ತಾಲೂಕು ಸಮ್ಮೇಳನವನ್ನು ಆಯೋಜಿಸುವ ಕುರಿತು ಕೆಂಭಾವಿಯಲ್ಲಿ ಸಭೆಯನ್ನು ಸೇರಿ ಸ್ವಾಗತ ಸಮಿತಿಯನ್ನು ಮತ್ತು ಇತರ ಸಮಿತಿಗಳನ್ನು ರಚಿಸುವ ಮೂಲಕ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಸಭೆಯ ಪೂರ್ವದಲ್ಲಿ ಹಿರಿಯ ವಕೀಲರು ರೈತ ಹೋರಾಟಗಾರರು ಇತಿಹಾಸ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದ ದಿವಂಗತ ಭಾಸ್ಕರರಾವ್ ಮೂಡಬೂಳ ಅವರಿಗೆ ಒಂದು ನಿಮಿಷದ ಮೌನಚರಣೆಯನ್ನು ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಬಸವರಾಜ ಜಮದರಖಾನಿ, ನಬಿಲಾಲ ಮಕಾನದಾರ, ಪ್ರಕಾಶ ಸಜ್ಜನ, ಮಹೇಶ ಜಹಗೀರದಾರ, ಕೆಂಭಾವಿ ವಲಯ ಕ.ಸಾ.ಪ.ಅಧ್ಯಕ್ಷ ಮಡಿವಾಳಪ್ಪ ಪಾಟೀಲ, ಶಿವನಗೌಡ ಪಾಟೀಲ, ಯಲ್ಲಪ್ಪ ಹುಲಿಕಲ್, ಪ್ರಕಾಶ್ ಅಲಬನೂರ್,ಗಂಗಾಧರ ರುಮಾಲ, ಸಾಹೇಬರೆಡ್ಡಿ ಇಟಗಿ, ಹೆಚ್ ವೈ ರಾಠೋಡ್, ವೆಂಕಟೇಶ ಎಮ್ ಪಾಟೀಲ, ಅನ್ವರ ಜಮಾದಾರ, ಮಲ್ಲು ಬಾದಾಪೂರ್ ದೇವು ಎಸ್ ಹೆಬ್ಬಾಳ್, ಶ್ರೀಶೈಲ್ ಯಂಕಂಚಿ ಇತರರು ಉಪಸ್ಥಿತರಿದ್ದರು.ಗೌರವ ಕಾರ್ಯದರ್ಶಿ ಹೆಚ್ ವೈ ರಾಠೋಡ್ ನಿರೂಪಿಸಿದರು. ಗೌರವಕೋಶ್ಯಾಧ್ಯಕ್ಷ ವೆಂಕಟೇಶ್ ಎಂ ಪಾಟೀಲ್ ಸ್ವಾಗತಿಸಿದರು, ದೇವು ಎಸ್ ಹೆಬ್ಬಾಳ್ ಪ್ರಾಸ್ತವಿಕ ಮಾತನಾಡಿದರು. ಸಾಹೇಬರಡ್ಡಿ ಇಟಗಿ ವಂದಿಸಿದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

4 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

11 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

11 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

12 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

22 hours ago