ಕಲಬುರಗಿ: ಉಪ ನೀರ್ದೆಶಕರ ಕಾರ್ಯಾಲಯ ದಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಬಾಲಕ-ಬಾಲಕಿಯರಿಗಾಗಿ ನಗರದ ಚಂದ್ರಶೇಖರ ಪಾಟಿಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ ವಿಭಾಗ ಮಟ್ಟದ ಹ್ಯಾಂಡ್ ಬಾಲ ಕ್ರೀಡಾಕೂಟದಲ್ಲಿ ಕ್ಯಾಂಪ್‍ಬೆಲ್ಸ್ ಶಾಲೆಯ ಕ್ರೀಡಾಪಟುಗಳು ಜಿಲ್ಲೆಯನ್ನು ಪ್ರತಿನಿಧಿಸಿ ಪ್ರಾಥಮಿಕ ಶಾಲೆಯ ಬಾಲಕರು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಬಾಲಕೀಯರು ದ್ವಿತೀಯ ಸ್ಥಾನ, ಪ್ರೌಢ ಶಾಲೆಯ ಬಾಲಕರು ಹಾಗೂ ಬಾಲಕಿಯರು ಹ್ಯಾಂಡ್ ಬಾಲ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹಂತದಲ್ಲಿ ಪ್ರಥಮ ಮತ್ತು ದ್ವೀತಿಯ ಸ್ಥಾನ ಪಡೆದ ಬಾಲಕ ಮತ್ತು ಬಾಲಕೀಯರು ಅ. 30 ರಂದು ಮಂಡ್ಯ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಹ್ಯಾಂಡ್ ಬಾಲ ಕ್ರೀಡಾಕೂಟಕ್ಕೆ ಆಯ್ಕೆ ಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಜಿಲ್ಲಾ ದೈಹಿಕ ಶಿಕ್ಷಣಾಧಿಕಾಗಳಾದ ರಾಜಶೇಖರ ಗೋನಾಯಕ, ತಾಲೂಕ ಕ್ಷೇತ್ರ ಶಿಕ್ಷಣಾಧಿಕಾಗಳ ಕಾರ್ಯಾಲಯದ ದೈಹಿಕ ಶಿಕ್ಷಣ ಪರಿವಿಕ್ಷಕರಾದ ಬಸವರಾಜ ರಟಕಲ, ದಶರಥ ಎಸ್, ರಾಜು ದೊಡ್ಡಮನಿ, ಸಂತೋಷ ಕೋಬಾಳ, ಶಿವಪುತ್ರ ಹೂಗಾರ, ಉಮೇಶ ಶರ್ಮಾ, ಶಾಲೆಯ ಆಡಳಿತ ಅಧಿಕಾರಿ ಇಮ್ಮಾನ್ಯೂಲ್ ಜಯವಂತ, ಮುಖ್ಯ ಗುರುಗಳಾದ ಸೂರ್ಯಕಾಂತ ಪವಾರ, ತಂಡದ ವ್ಯವಸ್ಥಾಪಕರಾದ ದತ್ತಾತ್ರೇಯ ಜೇವರ್ಗಿ, ಶೀಲಾದೇವಿ ಹಾಗೂ ಪುನಿತ ಇವರು ಶುಭ ಹಾರೈಸಿದ್ದಾರೆ.