ಕಲಬುರಗಿ: ಸನ್ನತಿ ಸಮಗ್ರ ಅಭಿವೃದ್ಧಿಗಾಗಿ ಆಗ್ರಹಿಸಿ, ಮತ್ತು ಬೌದ್ಧ ಸಮುದಾಯದ ಸವಾರ್ಂಗಿಣ ಅಭಿವೃದ್ಧಿಗಾಗಿ ಬೌದ್ಧ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಗೆ ಒತ್ತಾಯಿಸಿ, ಪೂಜ್ಯ ಬಿಕ್ಕು ಸಂಘದ ಸಾನಿಧ್ಯದಲ್ಲಿ ಪೂಜ್ಯ ಬೋದಿದತ್ತ ಥೇರೋ ಬಂತೆಜಿ ಯವರ ನೇತೃತ್ವದಲ್ಲಿ ಸನ್ನತಿಯಿಂದ ಬೆಂಗಳೂರುವರೆಗೆ ಸುಮಾರು 800 ಕಿಲೋಮಿಟರ್ ದೂರ ಕ್ರಮಿಸುವ ಪಂಚಶೀಲ ಪಾದಯಾತ್ರೆ ಹಮ್ಮಿಕೊಂಡಿರುವ ಕಾರಣ ಅದರ ಪೂರ್ವಭಾವಿ ಸಭೆಯನ್ನು ನವೆಂಬರ್ 03 ರಂದು ಭಾನುವಾರ ಮಧ್ಯಾಹ್ನ 2 ಗಂಟೆಗೆ ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಕರೆಯಲಾಗಿದೆ.
ಕಾರಣ ರಾಜ್ಯದ ಎಲ್ಲಾ ಸಂಘಟನೆಗಳ ಮುಖಂಡರು, ಸಮಾಜದ ಹಿರಿಯರು/ ಕಿರಿಯರು ಭಗವಾನ್ ಬುದ್ಧ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ಅವರ ಅನುಯಾಯಿಗಳು ಸಭೆಗೆ ಆಗಮಿಸಿ ತಮ್ಮ ಅತ್ಯಮೂಲ್ಯ ಸಲಹೆ ಸೂಚನೆಗಳನ್ನು ನೀಡಬೇಕೆಂದು ಧಮ್ಮ ಉಪಾಸಕ ಸುರೇಶ ಕಾನೇಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.