ವಕ್ಫ್ ವಿಚಾರ ವಿರೋಧಿಸಿ ನ.4ರಂದು ಬಿಜೆಪಿ ಪ್ರತಿಭಟನೆ

0
28

ಕಲಬುರಗಿ:ರೈತರ, ದಲಿತರ ಹಾಗೂ ದೇವಸ್ಥಾನ, ದರ್ಗಾ, ಚರ್ಚ್ ಗಳ ಆಸ್ತಿಗಳನ್ನು ವಕ್ಫ್ ಗೆ ಬರೆಯಿಸಿಕೊಳ್ಳುವ ಮೂಲಕ ರಾಜ್ಯದ ಜನರ ಆಸ್ತಿಗೆ ಕೈ ಹಾಕಿರುವ ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ನ.4ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಹಾಗೂ ಮಾಜಿ ಸಂಸದ ಡಾ. ಉಮೇಶ ಜಾಧವ ತಿಳಿಸಿದರು.

ವಕ್ಫ ಆಸ್ತಿ ನೆಪದಲ್ಲಿ ಜನಸಾಮನ್ಯರ ಆಸ್ತಿ ಲೂಟಿ ಮಾಡುತ್ತಿರುವ ಮತಾಂಧ ಸಚಿವ ಝಡ್. ಎನ್.‌ಜಮೀರ್ ಅಹ್ಮದ್ ಖಾನ್ ರಾಜೀನಾಮೆ ಪಡೆಯಬೇಕೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

Contact Your\'s Advertisement; 9902492681

ವಕ್ಫ್ ಬೋರ್ಡ್ ನಿಂದ ಸಮುದಾಯಕ್ಕೆ ಯಾವುದೇ ಲಾಭ ಸಿಗುತ್ತಿಲ್ಲ. ಕೆಲವರು ಕುಟುಂಬ ನಿರ್ವಹಣೆ ಬಳಕೆ ಆಗುತ್ತಿದ್ದರೆ ರಾಜಕೀಯ ನಾಯಕರು ಆಸ್ತಿ ಕಬಳಿಸುವ ಕೆಲಸವಾಗುತ್ತಿದೆ ಎಂದು‌ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಅಧಿಕಾರದಲ್ಲಿಯೂ ರೈತರ ಪಹಾಣಿಯಲ್ಲಿ ವಕ್ಫ್ ಆಸ್ತಿ ಎಂದು ಸೇರಿಸಲಾಗಿರುವ ಕಾಂಗ್ರೆಸ್ ನವರ ಹೇಳಿಕೆ ಸತ್ಯಕ್ಕೆ ದೂರ ಮತ್ತು ರಾಜಕೀಯ ಗಿಮಿಕ್. ಅಂತಹದೇನಾದರೂ ನಡೆದರೆ ಅದನ್ನು ನಾವು ಖಂಡಿಸುತ್ತೇವೆ. ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.

ಉಪ ಚುನಾವಣೆ ಮತ್ತು ಮಹಾರಾಷ್ಟ್ರ ಚುನಾವಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಿಮಿಕ್ ಮಾಡುವ ಹೇಳಿಕೆ ನೀಡುತ್ತಿದ್ದಾರೆ. ದೇಶದಲ್ಲಿ ವಕ್ಫ್ ಕಾನೂನು ಜಾರಿಯಾಗಲು ವಿರೋಧಿಗಳು ತಡೆಯುತ್ತಿದ್ದಾರೆ. ಇದರ ವಿರುದ್ಧ ಇಡಿ, ಸಿಬಿಐ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಇದೆಲ್ಲ ವೋಟ್ ಬ್ಯಾಂಕ್ ಪಾಲಿಟಿಕ್ಸ್, 1974ರಲ್ಲಿ ಅಪಿಲ್ ಮೆಂಟ್ ಕಾನೂನು ಜಾರಿ ಮಾಡಿತ್ತು. ಪಾರ್ಲಿಮೆಂಟ್ ನಲ್ಲಿ ಕಾನೂನು ತಿದ್ದುಪಡಿ ಆಗುವ ಮುಂಚೆ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಜಮೀನು ಜಪ್ತಿ ಮಾಡುವ ಕೆಲಸ ನಡೆಯುತ್ತಿದೆ. ಜಿಲ್ಲೆಯ ಆಳಂದ, ಚಿತ್ತಾಪುರ, ಚಿಂಚೋಳಿ, ಸೇಡಂ, ಜಮೀನು ಗಳು ವಕ್ಫ್ ವಶಕ್ಕೆ ಪಡೆಯುತ್ತಿದೆ. ರೈತರು ಎಚ್ಚರ ವಹಿಸಬೇಕು. ರೈತರ ಸಮಸ್ಯೆಗಳಿಗೆ ನಮ್ಮ ಕಚೇರಿ ಕಿವಿಯಾಗುತ್ತದೆ, ಯಾವಾಗ ಬೇಕಾದರೂ ರೈತರಿಗೆ ಕಾನೂನು ಸಹಾಯ ಪಡೆದುಕೊಳ್ಳಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಶಿವರಾಜ್ ಪಾಟೀಲ್ ರದ್ದೇವಾಡಗಿ, ಸಂತೋಷ ಹಾದಿಮನಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here