ಕಲಬುರಗಿ: ಕಮಲಾಪುರದಲ್ಲಿ ಹಮ್ಮಿಕೊಂಡ 69ನೇ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಲೂಕಿನ ಹಿರಿಯ ಹಾಗೂ ಯುವ ಸಾಹಿತಿಗಳನ್ನು ವಿಶೇಷವಾಗಿ ಸತ್ಕರಿಸಲಾಯಿತು.
ರಾಜ್ಯೋತ್ಸವ ನಿತ್ಯೋತ್ಸವವಾದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯವಾಗುತ್ತದೆ ಆದ್ದರಿಂದ ನಾವೆಲ್ಲರೂ ಪ್ರತಿನಿತ್ಯ ಮನೆಗಳಲ್ಲಿ ಹೊರಗಡೆ ವ್ಯವಹಾರಿಕವಾಗಿ ಎಲ್ಲಾ ಸಂದರ್ಭಗಳಲ್ಲಿಯೂ ಕನ್ನಡ ಭಾಷೆಯ ಮಾತನಾಡುವುದರ ಮೂಲಕ ಅಪಾಯದ ಅಂಚಿನಲ್ಲಿರುವ ಕನ್ನಡ ಭಾಷೆಯನ್ನು
ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ, ಕನ್ನಡ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ
ಎಂದು ಶಾಸಕ ಬಸವರಾಜ್ ಮತ್ತಿ ಮಡು ಹೇಳಿದರು.
ಶುಕ್ರವಾರ ಕಮಲಾಪುರ ತಾಲೂಕು ಆಡಳಿತ ವತಿಯಿಂದ ತಹಸಿಲ್ದಾರ್ ಕಚೇರಿಯ ಮುಂಭಾಗದಲ್ಲಿ ಹಮ್ಮಿಕೊಂಡ ೬೯ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ದೇಶದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಕೀರ್ತಿ ನಮ್ಮ ಕನ್ನಡ ಭಾಷೆಗೆ ಸಲ್ಲುತ್ತದೆ ಕರ್ನಾಟಕ ಎಂದು ನಾಮಕರಣಗೊಂಡು 51 ಪೂರೈ ವರ್ಷ ಪೂರೈಸಿದೆ ಎಂದರು.
ಕಲ್ಬುರ್ಗಿಯ ಶರಣಬಸಪ್ಪ ಅಪ್ಪ ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ಮುಖ್ಯಸ್ಥ್ ಡಾ. ಕಲ್ಯಾಣರಾವ ಪಾಟೀಲ್ ಮಾತನಾಡಿ , ಇಡೀ ದೇಶದಲ್ಲಿ ಇಂತಹ ಸಂಪತ್ ಭರಿತ ಹಾಗೂ ಸ್ವಾಮರಾಸ್ಯ ನಾಡು ಮತ್ತೊಂದಿಲ್ಲ ಈ ಕಾರಣದಿಂದಲೇ ಕರ್ನಾಟಕವನ್ನು ಚಿನ್ನದ ನಾಡು ಶ್ರೀಗಂಧದ ನಾಡು ಕರುನಾಡು ಎಂಬಾ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ, ಕೆಲ ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಧರ್ಮಗಳ ಮಧ್ಯೆ ಜಾತಿಗಳ ಮಧ್ಯೆ ದೇಶ ಭಾವನೆಯನ್ನು ಉಂಟು ಮಾಡಿ ಸ್ವಾಮರಸ್ಯ ಹಾಳು ಮಾಡುತ್ತಿರುವುದು ಖಂಡನೀಯ, ರಾಜ್ಯೋತ್ಸವ ನಿಮಿತ್ಯ ತಾಲೂಕು ಆಡಳಿತದಿಂದ ಶಾಲಾ-ಕಾಲೇಜುಗಳಲ್ಲಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ತಹಸೀಲ್ದಾರ್ ಮಹಮ್ಮದ್ ಮೋಹಿಸಿನ್, ತಾಪಂ ಈ o ನೀಲಗಂಗಾ ಬಬಲಾದ್, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಶಾಂತಪ್ಪ ಹಾದಿಮನಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುರೇಶ್ ಲೆಂಗಟಿ, ಜೆಸ್ಕಾಂ ಸಹಾಯಕ ಅಭಿಯಂತರ ಅಂಬರೀಶ್, ಡಾ. ಅನುಜ್ ಕುಮಾರ್, ಗ್ರೇಡ್ ಟು ತಹಸಿಲ್ದಾರ್ ಶಿವಕುಮಾರ್ ಶಾಬಾ ಖಜನೆ ಅಧಿಕಾರಿ ಸವಿತಾ ಚೌಹಾನ್, ಶಿವಕುಮಾರ್ ದೋಶೆಟ್ಟಿ, ಅಮೃತ್ ಗೌರೇ, ಪಿಎಸ್ಐ ಸಂಗೀತ ಶಿಂಧೆ, ಶಿ ರಸ್ತಿದಾರ ಕಮಲಾಕರ್ , ಮಿತ್ತೆ ಸಾಬ್ ಮುಲ್ಲಾ, ಪರಮೇಶ್ವರ ಓಕಳಿ ,
ಮಹಾಗಾವ್ ಉಪತಸಿಲ್ದಾರ್ ಶರಣಬಸಪ್ಪ ಜಾಲಹಳ್ಳಿ, ಅಮೃತ್ ಗೌವ್ರೆ ಶಿವಕುಮಾರ್ ಶೆಟ್ಟಿ ಅಮರ್ ಚಿಕ್ಕೆಗೌಡ, ಮಿತ್ತೆ ಸಾಬ್ ಮುಲ್ಲಾ , ಸಂತೋಷ್ ಕಲ್ಮಡ್ಕರ್ ,ರಘುನಂದನ್ ದ್ಯಾಮಣಿ ,ಮಂಜುನಾಥ್ ಬಿರಾದಾರ್, ಅಂದಪ್ಪ ಜೈಪ್ರಕಾಶ್ ಅಶ್ವಿನಿ, ವಿಜಯಲಕ್ಷ್ಮಿ, ಅವಿನಾಶ್ , ಸಿದ್ದಲಿಂಗ, ಸವಿತಾ, ಪ್ರಭಾವತಿ, ಚನ್ನಮ್ಮ, ಹನುಮಂತ್ ಶರಣು ಇತರರು ಇದ್ದರು .ಶಶಿಕಾಂತ್ ಸ್ವಾಗತಿಸಿದರು, ದೇವೇಂದ್ರ ಕಟ್ಟೀಮನಿ ನಿರೂಪಿಸಿದರು,
ವಿಶೇಷ ಸತ್ಕಾರ: ಸಾಹಿತಿಗಳಾದ ಡಾ. ಕಲ್ಯಾಣ್ ರಾವ್ ಪಾಟೀಲ್, ಡಾ. ಶಿವರಾಜ್ ಶಾಸ್ತ್ರಿ ಹೇರೂರು ಡಾ.ರ್ಸುರೇಂದ್ರ ಕುಮಾರ್ ಕೆರಂಗಿ , ಡಾ. ಶರನಬಸಪ್ಪ ವಡ್ಡನ್ಕೇರಿ ನಾಗಣ್ಣ ವಿಶ್ವಕರ್ಮ, ಡಾ. ಅಂಬಿಕಾ ಚಂದನೇಕೆರಾ, ಡಾ. ರಾಜಕುಮಾರ್ ಮಾಳಗೆ, ಡಾ. ಜ್ಯೋತಿರ್ಮಯ ಕಟಕೆ, ಡಾ. ಶಿವಕುಮಾರ್ ಸೂರ್ಯವಂಶಿ.