ಬಿಸಿ ಬಿಸಿ ಸುದ್ದಿ

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬಣಗಾರ ಪೌಂಡೇಶನ್ ಸಾಂಸ್ಕøತಿಕ ಕಾರ್ಯಕ್ರಮ

ಸುರಪುರ: ದೈನಂದಿನ ಬದುಕಿನಲ್ಲಿ ಮುನುಷ್ಯನ ಮನಸ್ಸು ಒತ್ತಡದಲ್ಲಿದ್ದಾಗ ಅಂತಹ ಮನಸನ್ನು ತನ್ನತ್ತ ಸೆಳೆಯುವ ಅದ್ಭುತವಾದ ಕಲೆ ಎಂದರೆ ಅದು ಸಂಗೀತವಾಗಿದೆ ಎಂದು ರಂಗಂಪೇಟೆ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸೂಗುರೇಶ ವಾರದ ಮಾತನಾಡಿದರು.

ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪ ಆವರಣದಲ್ಲಿಯ ಬನಶಂಕರಿ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಯಾದಗಿರಿ ಹಾಗೂ ಬಣಗಾರ ಪೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ನಡೆದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ,ಈಬಾರಿಯ ದೀಪಾವಳಿ ಸಂಭ್ರಮ ಎಲ್ಲರನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗಿ ಆನಂದವನ್ನುಂಟು ಮಾಡಲಿ ಎಂದು ಹಾರೈಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಂಗೀತ ಕಲಾವಿದ ಶಿವಶರಣಯ್ಯಸ್ವಾಮಿ ಬಳುಂಡಗಿಮಠ ಮಾತನಾಡಿ,ವಿಘ್ನೇಶ್ವರನ ನಾಮಸ್ಮರಣೆ ಮಾಡುತ್ತಾ ಸಂಗೀತ ಕೇಳುವುದರಿಂದ ಮನದ ಬೇಸರವೆಲ್ಲ ಕರಗಿ ಹೋಗುತ್ತದೆ ಎಂದರು.

ಗಮಕ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿ,ಸುಗಮ ಸಂಗೀತದ ದಿಗ್ಗಜರಾದ ಭೀಮಸೇನರಾವ್ ಜೋಷಿ,ಗಂಗೂಬಾಯಿ ಹಾನಗಲ್,ಮಲ್ಲಿಕಾರ್ಜುನ ಮನ್ಸೂರ್,ಗದಗಿನ ಪೂಜ್ಯ ಪುಟ್ಟರಾಜ ಗವಾಯಿಗಳನ್ನು ಸ್ಮರಿಸುವ ಮೂಲಕ ಸಂಗೀತದ ಮಹತ್ವದ ಕುರಿತು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಾಹಿತಿ ಶರಣಗೌಡ ಪಾಟೀಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,ಬಣಗಾರ ಪೌಂಡೇಶನ್ ಮಾಡುತ್ತಿರುವ ಹಲವಾರು ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ರುಕ್ಮಾಪುರದ ವಿಶೇಷಚೇತನ ಕಲಾವಿದರಾದ ರತ್ನಾಕರ ಬಣಗಾರ,ಶರಣು ಕಲಬುರ್ಗಿ,ಶಿವಶರಣಯ್ಯ ಬಳುಂಡಗಿಮಠ, ಶರಣರ,ದಾಸರ,ಸಂತರ ತತ್ವ ಪದಗಳನ್ನು ಹಾಡುವ ಮೂಲಕ ಎಲ್ಲರ ಗಮನಸೆಳೆದರು.ಚಂದ್ರಹಾಸ ಮಿಟ್ಟಾ,ಕಿರಣಕುಮಾರ,ಉರಕುಂದಪ್ಪ,ರಮೇಶ ಕುಲಕರ್ಣಿ,ಜಗದೀಶ ಮಾನು,ರಾಜಶೇಖರ ಗೆಜ್ಜಿ,ಮುರಳಿಧರ ಅಂಬುರೆ,ಉಮೇಶ ಯಾದವ್ ಮುಂತಾದ ಕಲಾವಿದ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣಪ್ಪ ಗುಮ್ಮಾ ವಹಿಸಿದ್ದರು,ವೇದಿಕೆಯಲ್ಲಿ ಮುಖಂಡರಾದ ಸೋಮಶೇಖರ ಶಾಬಾದಿ,ಲಿಂಗಯ್ಯ ಹಿರೇಮಠ ಉಪಸ್ಥಿತರಿದ್ದರು.ಯಲ್ಲಪ್ಪ ಹುಲಿಕಲ್,ವಿರೇಶ ರುಮಾಲಮಠ,ಶ್ರೀಶೈಲ್ ನಿಂಬಾಳ,ಮಾನಪ್ಪ ನಾಲವಾರ್,ಸಂಗಪ್ಪ ಚೆಟ್ಟಿ,ಭೀಮಾಶಂಕರ ಬಿಲ್ಲವ್,ಮಲ್ಲಿಕಾರ್ಜುನ ಮಿಟ್ಟಾ,ರಾಘವೇಂದ್ರರ ಭಕ್ರಿ,ಮಹೇಶ ಅಂಗಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಶರಣಬಸವ ಚೆಟಟಿ ನಿರೂಪಿಸಿದರು,ಸಾಹೇಬರಡ್ಡಿ ವಂದಿಸಿದರು.ಬಣಗಾರ ಪೌಂಡೇಶನ್ ಅಧ್ಯಕ್ಷ ಪ್ರಕಾಶ ಬಣಗಾರ ನೇತೃತ್ವವಹಿಸಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

10 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

12 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

19 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

19 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

20 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago