ಸುರಪುರ:ತಾಲ್ಲೂಕಿನ ಕಿರದಳ್ಳಿ ತಾಂಡಾದಲ್ಲಿ ಜಯಕರ್ನಾಟಕ ರಕ್ಷಣಾ ಸೇನೆ ಸಂಘವು ತಾಲ್ಲೂಕ ಅಧ್ಯಕ್ಷ ಮಲ್ಲಪ್ಪ ನಾಯಕ ಕಬಾಡಗೇರ ನೇತೃತ್ವದಲ್ಲಿ ಗ್ರಾಮ ಶಾಖೆ ರಚನೆ ಮಾಡಿ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ.
ಈ ಸಂದರ್ಭದಲ್ಲಿ ,ತಾಲೂಕ ಕಾರ್ಯಾಧ್ಯಕ್ಷ ಶಿವರಾಜ ವಗ್ಗರ್ ಮಾತನಾಡಿ, ಕನ್ನಡ ನಾಡು ನುಡಿ ಜಲ ನೆಲ ಉಳಿವಿಗಾಗಿ ನಾವೆಲ್ಲರೂ ಸಂಘಟಕರಾಗಿ ಹೋರಾಟ ಮಾಡೋಣ ಹಾಗೂ ನಿಮ್ಮ ಗ್ರಾಮದ ಮೂಲಭೂತ ಸೌಕರ್ಯಗಳಿಗಾಗಿ ಹಾಗೂ ನಮ್ಮ ಹಕ್ಕು ಗಳಿಗಾಗಿ ಮತ್ತು ಸರ್ಕಾರದ ವಿವಿಧ ಯೋಜನೆಗಳ ಪಡೆದುಕೊಳ್ಳುವುದಕ್ಕಾಗಿ ಹೋರಾಟ ಅಗತ್ಯವಾಗಿದೆ, ಭ್ರಷ್ಟ ಅಧಿಕಾರಿಗಳ ವಿರುದ್ಧ ನಮ್ಮ ಕೂಗು, ಅನ್ಯಾಯಕ್ಕೊಳಗಾದವರ ದೀನ ದಲಿತರ, ನೊಂದು ಬೆಂದವರ ,ಪಾಲಿನ ಧ್ವನಿಯಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಕಾರ್ಯಾಧ್ಯಕ್ಷರಾದ ಶರಣು ಬೈರಿಮರಡಿ , ರೈತ ಘಟಕದ ಅಧ್ಯಕ್ಷರಾದ ಧನರಾಜ್ ರಾಠೋಡ್ ಕಿರದಹಳ್ಳಿ ತಾಂಡ, ಕಾರ್ಯದರ್ಶಿಗಳಾದ ಕೃಷ್ಣ ಹಾವಿನ ಕುಂಬಾರಪೇಟ, ಆಟೋ ಚಾಲಕರ ಘಟಕದ ಅಧ್ಯಕ್ಷರಾದ ಹನುಮಂತ ಭಂಡಾರಿ,ನಗರ ಘಟಕ ಅಧ್ಯಕ್ಷರಾದ ಶಿವುಕುಮಾರ ಗಾಜಲದಿನ್ನಿ ದೀವಳಗುಡ್ಡ, ಗಂಗೂ ಗಂಗಾನಗರ ಇನ್ನಿತರರು ಉಪಸ್ಥಿತರಿದ್ದರು.
ಗ್ರಾಮ ಘಟಕ ಅಧ್ಯಕ್ಷರನ್ನಾಗಿ ರೇಖು ರಾಥೋಡ್ , ಗೌರವಾಧ್ಯಕ್ಷರಾಗಿ ಈರಣ್ಣ ರಾಠೋಡ್, ಉಪಾಧ್ಯಕ್ಷರನ್ನಾಗಿ ಜಯರಾಮ, ಪ್ರಧಾನ ಕಾರ್ಯದರ್ಶಿಯಾಗಿ ರಾಮು ಜಾದವ್, ಕಾರ್ಯದರ್ಶಿಯಾಗಿ ಅಮರೇಶ, ಸಹಕಾರಿದರ್ಶಿಯಾಗಿ ಪರಸಣ್ಣ ಚವ್ಹಾಣ್, ಸಂಚಾಲಕರಾಗಿ ಸೋಮಶೇಖರ , ಸದಸ್ಯರು ಹಸನಪ್ಪ, ಮಾನು, ಮಾನಪ್ಪ ಎವುರ್ , ಹಾಗೂ ಮಹಿಳಾ ಗ್ರಾಮ ಘಟಕದ ಅಧ್ಯಕ್ಷರನ್ನಾಗಿ ಸೀತಾಬಾಯಿ ಧನರಾಜ ರಾಥೋಡ್ , ಉಪಾಧ್ಯಕ್ಷರಾಗಿ ಪಾಣಿಬಾಯಿ ಜಾದವ್ ಕಾರ್ಯದರ್ಶಿಯಾಗಿ ತಿಪ್ಪಮ್ಮ ಸಂಚಾಲಕರಾಗಿ ಗಂಗಬಾಯಿ, ಸಂಚಾಲಕರು ದೇವಿ ಬಾಯಿ, ಸಂಘಟನಾ ಕಾರ್ಯದರ್ಶಿ ಲಕ್ಷ್ಮೀಬಾಯಿ, ಸದಸ್ಯರು ಇಂದ್ರಬಾಯಿ ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…