ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜು ವತಿಯಿಂದ ಕೇಂದ್ರ ಸರ್ಕಾರದ ಎಂ.ಎಚ್.ಆರ್. ಎಸ್. ಸಹಯೋಗದಲ್ಲಿ ಕೃತಕ ಬುದ್ದಿಮತ್ತೆ, ಸಾಮಾಜಿಕ ಜಾಲತಾಣಗಳು ಮತ್ತು ಸಮಾಜ ಎಂಬ ವಿಷಯಗಳ ಮೇಲೆ ಎರಡು ದಿನಗಳಕಾಲ ರಾಷ್ಟ್ರೀಯ ಸೆಮಿನಾರ್ ಹಮ್ಮಿಕೊಳ್ಳಲಾಗಿದೆ ಎಂದು ಎಚ್.ಕೆ.ಇ. ಸಂಸ್ಥೆಯ ಅಧ್ಯಕ್ಷರಾದ ಶಶೀಲ ನಮೋಶಿ ಅವರು ತಿಳಿಸಿದರು.
ನಗರದ ಪಿಡಿಎ ಕಾಲೇಜಿನನ ಸ್ಯಾಕ್ ಸಭಾಂಗಣದಲ್ಲಿ ನಡೆಯಲಿರುವ ರಾಷ್ಟ್ರೀಯ ಸೇಮಿನಾರ್‌ನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್
ರಾಜ್, ಐಟಿಬಿಟಿ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಮಂತ್ರಿ ಪ್ರಿಯಾಂಕ್ ಖರ್ಗೆ
ಅವರು ಉದ್ಘಾಟಿಸುವರು ಎಂದು ಸೋಮವಾರ
ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಚ್‌ಕೆಇ ಸಂಸ್ಥೆಯ ಅಧ್ಯಕ್ಷರಾದ ಶಶೀಲ ನಮೋಶಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕೇಂದ್ರೀಯ ವಿವಿ ಗುಜರಾತ್ ಕಲಬುರಗಿ ವಿವಿ ನಿವೃತ್ತ ರಿಜಿಸ್ಟ್ರಾರ್ ಪ್ರೊ. ಎಸ್.ಎಲ್ ಹಿರೇಮಠ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆಂದು ಹೇಳಿದರು.
ಐಸಿಎಸ್‌ಎಸ್‌ಆರ್, ಎಸ್‌ಆರ್‌ಎಸ್ ಸುಧಾಕರ ರೆಡ್ಡಿಯವರು ಕಾರ್ಯಕ್ರಮದಲ್ಲಿ ಸೆಮಿನಾರ್‌ನಲ್ಲಿ ಪ್ರಕ್ರಿಯೆಗಳ ಬಿಡುಗಡೆಯನ್ನು ಹೈದ್ರಾಬಾದನ ಮಾಡುವರು.
ಪ್ರೊ. ನುಶ್ರತ್ ಫಾತೀಮಾ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಸ್ಥೆಯ ರಾಜಾ ಭೀಮಳ್ಳಿ, ಉದಯಕುಮಾರ ಚಿಂಚೋಳಿ, ಕೈಲಾಸ್ ಪಾಟೀಲ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಅಂದು ಮಧ್ಯಾಹ್ನ ೧೨-೩೦ಗಂಟೆಗೆ ನಡೆಯಲಿರುವ ಮೊದಲ ಗೋಷ್ಠಿಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಸಮಾಜ ಎಂಬ ವಿಷಯದ ಮೇಲೆ ಪ್ರೊ. ಮಧುಸುದನ್ ಜೆ.ವಿ., ಡಾ. ಕೆ.ಎಂ. ಝೀಯಾಉದ್ದೀನ್, ಪ್ರೊ. ಶ್ರೀದೇವಿ ಸೋಮಾ, ಡಾ. ಎ.ಜಿ. ಖಾನ್ ಅವರು ವಿಷಯ ಮಂಡಿಸುವರು.
ನ. ೬ರಂದು ಬೆಳಿಗ್ಗೆ ೧೦-೩೦ಗಂಟೆಗೆ ನಡೆಯಲಿರುವ ೨ನೇ ಗೋಷ್ಠಿಯು ಕಾಲೇಜಿನ ಅಡಿಟೋರಿಯಮ್ ಸಭಾಂಗಣದಲ್ಲಿ ಸಾಮಾಜಿಕ ಜಾಲತಾಣಗಳು ಮತ್ತು ಸಮಾಜ ವಿಷಯದ ಮೇಲೆ ಪ್ರೊ. ಸುಧಾ ಖೋಕಟೆ, ಪ್ರೊ. ಚಂದ್ರಶೇಖರ ಎಸ್, ಮನೋಜ ಗುದ್ದಿ ಅವರು ವಿಷಯ ಮಂಡನೆ ಮಾಡಲಿದ್ದಾರೆಂದು ತಿಳಿಸಿದರು.
ಅಂದು ಮಧ್ಯಾಹ್ನ ೨ ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ. ಎರಡು ದಿನಗಳ ಕಾಲ ನಡೆಯಲಿರುವ ಸೇಮಿ ನಾರ್‌ನಲ್ಲಿ ಪಾಲ್ಗೊಳ್ಳಲು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಉತ್ತರಾಖಂಡ ರಾಜ್ಯಗಳಿಂದ ೧೪೭ ಜನರ ಈಗಾಗಲೇ ಆನ್‌ಲೈನ್‌ನಲ್ಲಿ ನೊಂದಾಯಿಸಿಕೊಂಡಿದ್ದಾರೆ. ಸುಮಾರು ೨೫೦ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆಂದು ತಿಳಿಸಿದರು.
ಸುದ್ದಿಗೊಷ್ಠಿಯಲ್ಲಿ ಡಾ. ಎಸ್.ಆರ್. ಹರವಾಳ, ಡಾ. ರಾಜೇಂದ್ರ ಕೊಂಡಾ, ಡಾ. ಮಹೇಶ ಗಂವಾ, ಐ.ಕೆ. ಪಾಟೀಲ ಇದ್ದರು.
ಎಚ್.ಕೆ.ಇ. ಸಂಸ್ಥೆಯ ಬಸವೇಶ್ವರ ಆಸ್ಪತ್ರೆಯಲ್ಲಿ ಶಾಲಾ ಸಂಜಿವಿನಿ ಯೋಜನೆ ಯನ್ನು ಪ್ರಾರಂಭಿಸಲು ಯೋಜನೆ ಹಾಕಿಕೊಳ್ಳ ಲಾಗಿದೆ. ಈ ಯೋಜನೆ ಮೂಲಕ ಸಂಸ್ಥೆಯವತಿಯಿಂದ ಜಿಲ್ಲೆಯ ಶಾಲಾ ಮಕ್ಕಳಿಗೆ ಕರೆದುಕೊಂಡು ಬಂದು ಕಣ್ಣು, ಮೂಗು, ಕಿವಿ, ಮೂಗು, ದಂತಕ್ಕೆ ಉಚಿತವಾಗಿ ತಪಾಸಣೆ ಮತ್ತು ಅವಶ್ಯಕತೆಯಿರುವ ಮಕ್ಕಳಿಗೆ ಉಚಿತ ಚಿಕಿತ್ಸೆಯನ್ನು ಸಹ ನೀಡಲಾಗುವುದು. ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ತಜ್ಞರ ಆಯ್ಕೆ ಜೊತೆಗೆ ಮುಂದಿನ ೬-೭ ತಿಂಗಳಲ್ಲಿ ಕಾರ್ಡಿಯೋಲಾಜಿ ವಿಭಾಗವು ಸಹ ತೆರೆಯಲಾಗುವುದು. –ಶಶೀಲ್ ಜಿ.ನಮೋಶಿ, ಅಧ್ಯಕ್ಷರು, ಎಚ್ಕೆ ಇ ಸೊಸೈಟಿ, ಕಲಬುರಗಿ
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…