ಬಿಸಿ ಬಿಸಿ ಸುದ್ದಿ

ಶಿವಾನಂದ ತಗಡೂರು ಅವರ `ಕೊರೋನಾ ಕಥೆಗಳು’ ಕೃತಿಗೆ ವಿಶೇಷ ಪುರಸ್ಕಾರ

ಕಲಬುರಗಿ; ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ’ಯ ವಿಶೇಷ ಪುರಸ್ಕಾರವು ಹಿರಿಯ ಪತ್ರಕರ್ತ ಶಿವಾನಂದ ತಗಡೂರು ಅವರ `ಕೊರೋನಾ ಕಥೆಗಳು’ ಕೃತಿಗೆ ಲಭಿಸಿದೆ ಎಂದು ಸಂಸ್ಥಾಪಕ ಸಂಚಾಲಕ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಾಧ್ಯಮ ರಂಗದಲ್ಲಿ ತುಂಬಾ ಪರಿಣಾಮ ಬೀರಿರುವ ಪುಸ್ತಕ `ಕೊರೋನಾ ಕಥೆಗಳು’ ತೀರಾ ಭಿನ್ನವಾಗಿ ಮೂಡಿದೆ. ಕೊರೋನಾ ಕಾಲಘಟ್ಟದಲ್ಲಿ ಆಗಿರುವ ಸಾವು-ನೋವು ಕಥೆಗಳನ್ನೊಳಗೊಂಡ ಈ ಕೃತಿ ಪತ್ರಿಕಾ ವಲಯದಲ್ಲಿ ಗಂಭೀರ ಪರಿಣಾಮವನ್ನು ಉಂಟುಮಾಡಿದೆ. ಕೊರೋನಾ ಸಂದರ್ಭದಲ್ಲಿ ಟಿವಿ ಸಂದರ್ಶನವೊಂದರಲ್ಲಿ ಶಿವಾನಂದ ತಗಡೂರು ಅವರ ಮಾತು ಮತ್ತು ಚಿಕಿತ್ಸೆಯ ಸಲಹೆಗÀಳನ್ನು ಕೇಳಿದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ತಂದೆಯವರನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ ಎಂದು ಹೇಳಿಕೊಂಡಿದ್ದರು. ಇಂತಹ ಜನಪರವಾದ ಕೃತಿಗೆ ಅಮ್ಮ ವಿಶೇಷ ಪುರಸ್ಕಾರವನ್ನು ನೀಡಲಾಗುತ್ತಿದ್ದು, ಪ್ರಸ್ತುತ ವರ್ಷದಿಂದ ಪ್ರತಿ ವರ್ಷವೂ ಮಾಧ್ಯಮದವರು ಬರೆದ ಒಂದು ಪುಸ್ತಕಕ್ಕೆ ವಿಶೇಷ ಪುರಸ್ಕಾರವನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ನವೆಂಬರ್ 26 ರಂದು ಸಂಜೆ 5.30ಕ್ಕೆ ಸೇಡಮ್‍ನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿಯೇ ಈ ವಿಶೇಷ ಪುರಸ್ಕಾರವನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

emedialine

Recent Posts

ಜನಪದ ನೃತ್ಯೋತ್ಸವಕ್ಕೆ ಚಾಲನೆ

ಕಲಬುರಗಿ: ನಗರದ ರಂಗಾಯಣದಲ್ಲಿ ಮನಸ್ವಿ ಸಾಂಸ್ಕøತಿಕ ಹಾಗೂ ನಾಟ್ಯ ಕಲಾವಿದರ ಸಂಘದ ವತಿಯಿಂದ ಜನಪದ ನೃತ್ಯೋತ್ಸವ ಕಾರ್ಯಕ್ರಮವನ್ನು ನೃತ್ಯಕಲಾವಿದ ಚಾಂದ…

1 hour ago

ಶುಕ್ಲಾ ಶಾಲೆಯ ವಾರ್ಷಿಕೋತ್ಸವಕ್ಕೆ ಚಾಲನೆ

ಕಲಬುರಗಿ: ನಗರದ ಶಾಹಬಜಾರಲ್ಲಿರುವ ಶುಕ್ಲಾ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಷಾ ಎಜುಕೇಶನಲ್ ಅಂಡ್ ಚಾರಿಟೇಬಲ್…

1 hour ago

ಕರ್ನಾಟಕದಲ್ಲಿ ಮಧ್ಯ ಮಾರಾಟ ಮಳಿಗೆಗಳ ಬಂದ ಕರೆಗೆ ಬೆಂಬಲವಿಲ್ಲ: ನಾಗರಾಜ ಗುಂಡಗುರ್ತಿ

ಕಲಬುರಗಿ; ನವೆಂಬರ್ 20 ರಂದು ಕರ್ನಾಟಕದಲ್ಲಿ ಮಧ್ಯ ಮಾರಾಟ ಮಳಿಗೆಗಳ ಬಂದ ಕರೆಗೆ ಬೆಂಬಲವಿಲ್ಲ ಎಂದು ಡಾ. ಬಿ.ಆರ್. ಅಂಬೇಡ್ಕರ್…

1 hour ago

ಭೀಮಾಶಂಕರ್, ಚಂದ್ರು, ನಾಡಗಿರಿ,ಗೋಪಾಲ ಸೇರಿ ಹಲವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಕಲಬುರಗಿ: ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ೬೯ನೇ ಕನ್ನಡ ರಾಜ್ಯೋತ್ಸವದಂಗವಾಗಿ ಕವಿಗೋಷ್ಠಿ,…

1 hour ago

ಶಾಸ್ತ್ರೀಗೆ ರಾಜ್ಯೋತ್ಸವ ಪ್ರಶಸ್ತಿ

ವಾಡಿ: ಕಲಬುರಗಿ ಸಾಂಸ್ಕøತಿಕ ಪ್ರತಿಷ್ಠಾನದ ವತಿಯಿಂದ ಕೊಡಲಾಗುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಈ ವರ್ಷ ಕನ್ನಡ ಸಾಹಿತ್ಯ…

2 hours ago

ದಕ್ಷಿಣ ವಲಯ ಅಂತರ ವಿವಿ ಕ್ರಾಸ್ ಕಂಟ್ರಿ ಪಂದ್ಯದಲ್ಲಿ ಗುಲಬರ್ಗಾ ವಿವಿ ತಂಡ ಭಾಗಿ

ಕಲಬುರಗಿ: ಮಂಗಳೂರು ವಿಶ್ವವಿದ್ಯಾಲಯದಲ್ಲಿ ನ. 19 ರಿಂದ 26, 2024 ರವರೆಗೆ ನಡೆಯಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕ್ರಾಸ್…

3 hours ago