ಬಿಸಿ ಬಿಸಿ ಸುದ್ದಿ

ಆನು ಒಲಿದಂತೆ ಹಾಡುವುದು ಕೂಡ ಕಾವ್ಯ: ಚಂದ್ರಕಲಾ ಬಿದರಿ

ಕಲಬುರಗಿ: ಕಾವ್ಯ ಅನ್ನುವುದು ಸುಲಭವಾಗಿ ಒಲಿಯುವುದಿಲ್ಲ.‌ ಅದು ತಪಸ್ಸು ಇದ್ದ ಹಾಗೆ. ಕವಿಗಳಿಗೆ ಅಧ್ಯಯನ ಹಾಗೂ ಶಬ್ದ ಭಂಡಾರ ಅಗತ್ಯ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ.ಚಂದ್ರಕಲಾ ಬಿದರಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಕಾಡಾ ವಿಭಾಗೀಯ ಕಚೇರಿಯಲ್ಲಿ ಪರಿಶೋಧನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಸಮ್ಮ ಸಜ್ಜನ್ ಅವರ ನೆನಪಿನ ಅಲೆಗಳು, ಶ್ರೀದೇವಿ ಪೊಲೀಸ್ ಪಾಟೀಲರ ಮುಗಿಲಾಚೆ ಚೊಚ್ಚಿಲ ಕೃತಿ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಕಾವ್ಯದ ಸ್ವರೂಪ ಈಗ ಬದಲಾಗಿದೆ. ವಚನಕಾರರ ಆಶಯದಂತೆ ಆನು ಒಲಿದಂತೆ ಹಾಡುವುದು ಕೂಡ ಕಾವ್ಯ ಎಂದರು.

ಹಿಂದಣ ಹೆಜ್ಜೆ ಅರಿಯದೆ ಮುಂದಣ ಹೆಜ್ಜೆ ಅರಿಯಲಾಗದು ಎನ್ನುವ ಅಲ್ಲಮನ ವಚನದಂತೆ ಕವಿಗಳಾದವರು ಸದಾ ಅಧ್ಯಯನಶೀಲರಾಗಿರಬೇಕು ಎಂದು ಕರೆ ನೀಡಿದರು. ಖ್ಯಾತ ಕ್ಯಾನ್ಸರ್ ರೋಗ ತಜ್ಞೆ ವಿಜಯಲಕ್ಷ್ಮೀ ದೇಶಮಾನ್ಯೆ ಕೃತಿ ಲೋಕಾರ್ಪಣೆ ಮಾಡಿದರು.

ಜಿಲ್ಲಾ ಹೆಚ್ಚುವರಿ ಆರೋಗ್ಯ ಅಧಿಕಾರಿ ಡಾ. ಸಿದ್ದು ಪಾಟೀಲ ಅತಿಥಿಗಳಾಗಿದ್ದರು. ಇದೇ ವೇಳೆಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಪ್ರಶಸ್ತಿ ಪುರಸ್ಕೃತ ಕೇದಾರಲಿಂಗಯ್ಯ ಹಿರೇಮಠ ಅವರನ್ನು ಕಸಾಪ ವತಿಯಿಂದ ಅಭಿನಂದಿಸಲಾಯಿತು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ನಿರೂಪಿಸಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಧರ್ಮಣ್ಣ ಧನ್ನಿ ಸ್ವಾಗತಿಸಿದರು. ಅಮೃತ ಅಣೂರ ಪ್ರಾರ್ಥನೆಗೀತೆ ಹಾಡಿದರು. ಜಿಲ್ಲಾ ಕಸಾಪ ಖಜಾಂಚಿ ಶರಣರಾಜ ಛಪ್ಪರಬಂದಿ ವಂದಿಸಿದರು.

ಬಾಕ್ಸ್…..

ಅಪರೂಪದ ಕಾರ್ಯಕ್ರಮ

ಕವಿ, ಸಾಹಿತಿಗಳಿಗೆ ಸಾಮಾಜಿಕ ಬದಲಾವಣೆಯಲ್ಲಿ ಬಹುದೊಡ್ಡ ಜವಾಬ್ದಾರಿಯಿದೆ. ಸಮಾಜದ ನೋವಿಗೆ ಸ್ಪಂದಿಸುವವರೆ ನಿಜವಾದ ಬರಹಗಾರರು. ಕಾವ್ಯ ಕ್ಷೇತ್ರಕ್ಕೆ ಹೊಸ ಹೆಜ್ಜೆ ಇಟ್ಟ ಕವಯತ್ರಿಯರು ಸಮಾಜ ಪರಿವರ್ತನೆಗೆ ದಾರಿದೀಪವಾಗಲಿ.
-ವಿಜಯಕುಮಾರ ಪಾಟೀಲ, ತೇಗಲತಿಪ್ಪಿ, ಜಿಲ್ಲಾ ಕಸಾಪ ಅಧ್ಯಕ್ಷ,

ಕೋಟ್
ರಾಜ್ಯದ ಎಲ್ಲ ಜಿಲ್ಲೆಗಳಿಗಿಂತ ಕಲಬುರಗಿ ಜಿಲ್ಲಾ ಕಸಾಪ ಕ್ರಿಯಾಶೀಲವಾಗಿದೆ. ಉತ್ತಮ ಸಂಸ್ಕೃತಿ ನಿರ್ಮಾಣದಿಂದ ಸಮಾಜದ ಆರೋಗ್ಯ ಕಾಪಾಡಬಹುದು.
-ಕೇದಾರಲಿಂಗಯ್ಯ ಹಿರೇಮಠ, ರೈತ ನಾಯಕರು, ಕಲಬುರಗಿ

emedialine

Recent Posts

ಜಿಲ್ಲಾಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟ

ಡಿಸೆಂಬರ್ 4ಕ್ಕೆ ಮತದಾನ,ಅಂದೇ ಫಲಿತಾಂಶ ಪ್ರಕಟ ಕಲಬುರಗಿ,ನ.16: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕದ 2024-29…

32 mins ago

ಜನಪದ ನೃತ್ಯೋತ್ಸವಕ್ಕೆ ಚಾಲನೆ

ಕಲಬುರಗಿ: ನಗರದ ರಂಗಾಯಣದಲ್ಲಿ ಮನಸ್ವಿ ಸಾಂಸ್ಕøತಿಕ ಹಾಗೂ ನಾಟ್ಯ ಕಲಾವಿದರ ಸಂಘದ ವತಿಯಿಂದ ಜನಪದ ನೃತ್ಯೋತ್ಸವ ಕಾರ್ಯಕ್ರಮವನ್ನು ನೃತ್ಯಕಲಾವಿದ ಚಾಂದ…

3 hours ago

ಶುಕ್ಲಾ ಶಾಲೆಯ ವಾರ್ಷಿಕೋತ್ಸವಕ್ಕೆ ಚಾಲನೆ

ಕಲಬುರಗಿ: ನಗರದ ಶಾಹಬಜಾರಲ್ಲಿರುವ ಶುಕ್ಲಾ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಷಾ ಎಜುಕೇಶನಲ್ ಅಂಡ್ ಚಾರಿಟೇಬಲ್…

3 hours ago

ಕರ್ನಾಟಕದಲ್ಲಿ ಮಧ್ಯ ಮಾರಾಟ ಮಳಿಗೆಗಳ ಬಂದ ಕರೆಗೆ ಬೆಂಬಲವಿಲ್ಲ: ನಾಗರಾಜ ಗುಂಡಗುರ್ತಿ

ಕಲಬುರಗಿ; ನವೆಂಬರ್ 20 ರಂದು ಕರ್ನಾಟಕದಲ್ಲಿ ಮಧ್ಯ ಮಾರಾಟ ಮಳಿಗೆಗಳ ಬಂದ ಕರೆಗೆ ಬೆಂಬಲವಿಲ್ಲ ಎಂದು ಡಾ. ಬಿ.ಆರ್. ಅಂಬೇಡ್ಕರ್…

3 hours ago

ಭೀಮಾಶಂಕರ್, ಚಂದ್ರು, ನಾಡಗಿರಿ,ಗೋಪಾಲ ಸೇರಿ ಹಲವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಕಲಬುರಗಿ: ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ೬೯ನೇ ಕನ್ನಡ ರಾಜ್ಯೋತ್ಸವದಂಗವಾಗಿ ಕವಿಗೋಷ್ಠಿ,…

3 hours ago

ಶಾಸ್ತ್ರೀಗೆ ರಾಜ್ಯೋತ್ಸವ ಪ್ರಶಸ್ತಿ

ವಾಡಿ: ಕಲಬುರಗಿ ಸಾಂಸ್ಕøತಿಕ ಪ್ರತಿಷ್ಠಾನದ ವತಿಯಿಂದ ಕೊಡಲಾಗುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಈ ವರ್ಷ ಕನ್ನಡ ಸಾಹಿತ್ಯ…

3 hours ago