ನೌಕರರ ಸಂಘದ ಅಧ್ಯಕ್ಷರಾಗಿ ಕರಣಿಕ, ಪರಿಷತ್ ಸದಸ್ಯರಾಗಿ ರಾಠೋಡ ಆಯ್ಕೆ

0
14

ಕಲಬುರಗಿ: ತಾಲೂಕ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಶಿವಪುತ್ರ ಕರಣಿಕ ಆಯ್ಕೆಯಾದರು. ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ 15 ಮತಗಳನ್ನು ಪಡೆದು ವಿಜೇತರಾದರು. ವಿವಿಧ ಇಲಾಖೆಯಿಂದ ಆಯ್ಕೆಯಾದ ನಿರ್ಧೇಶಕರ 27 ಮತಗಳಲ್ಲಿ ಕರಣಿಕ 15 ಮತಗಳನ್ನು ಪಡೆದರು, ಅವರ ಪ್ರತಿಸ್ಪರ್ಧಿ ಸಂತೋಷ ಸಲಗಾರ 12 ಮತಗಳನ್ನು ಪಡೆದರು. ಕರಣಿಕ ಈಗಾಗಲೇ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಆಗಿದ್ದಾರೆ.

ಖಜಾಂಚಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕರಣಿಕ ಪೇನಲ್‍ನ ಮಂಜುನಾಥ ಹಂದರಾಳ 14 ಮತಗಳನ್ನು ಪಡೆದು ವಿಜೇತರಾದರು, ಅವರ ಪ್ರತಿಸ್ಪರ್ಧಿ ಜಗಪ್ಪ ಹೊಸಮನಿ 12 ಮತಗಳನ್ನು ಪಡೆದರು. ಇಲ್ಲಿ ಓರ್ವ ಮತದಾರ ತನ್ನ ಮತವನ್ನು ಯಾಗಿಗೂ ಹಾಕದೆ ಖಾಲಿ ಬಿಟ್ಟಿದ್ದಾನೆ. ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ಸಂಜಯ ರಾಠೋಡ 15 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಸೈಯದ್ ಮಜರ್ ಖಾದ್ರಿ 12 ಮತಗಳನ್ನು ಪಡೆದಿದ್ದಾರೆ.

Contact Your\'s Advertisement; 9902492681

ಚುನಾವಣೆ ಅಧಿಕಾರಿಯಾಗಿ ಚುನಾವಣೆ ಅಧಿಕಾರಿಯಾಗಿ, ಹಾಜಪ್ಪ ಬಿರಾಳ ಉಪ ಚುನಾವಣಾಧಿಕಾರಿಯಾಗಿ, ಮಹಾದೇವ ಪಾಟಲ ಮತಗಟ್ಟೆ ಅಧಿಕಾರಿಯಾಗಿ, ಸಂತೋಷ ಕೋಮಟೆ ಪಿಒ, ಗಿರಿಮಲ್ಲಪ್ಪ ವಳಸಂಗ ಎಪಿಆರ್‍ಒ ಆಗಿ ಕರ್ತವ್ಯ ನಿರ್ವಹಿಸಿದ್ದರು. ಎಲ್ಲಾ 27 ಮತದಾರರು ಮಧ್ಯಾಹ್ನದವರೆಗೆ ತಮ್ಮ ಹಕ್ಕನ್ನು ಚಲಾಯಿಸಿದ್ದರಿಂದ ಆರು ಜನ ಅಭ್ಯರ್ಥಿಗಳ ಲಿಖಿತ ಒಪ್ಪಿಗೆ ಮೇರೆಗೆ ಮಧ್ಯಾಹ್ನವೆ ಮತ ಎಣಿಕೆ ನಡೆದು, ಆಯ್ಕೆ ಘೋಷಿಸಲಾಯಿತು.

ಸಂಭ್ರಮ ಆಚರಣೆ ಚುನಾಯಿತ ಅಭ್ಯರ್ಥಿಗಳು ತಮ್ಮ ಗೆಲುವಿನ ನಂತರ ನಗರ ಸಭೆ ಎದುರುಗಡೆ ಇರುವ ಡಾ.ಅಂಬೇಡ್ಕರ, ಡಾ.ಬಾಬು ಜಗಜೀವನರಾಮ, ಬಸವೇಶ್ವರ ವೃತ್ತದಲ್ಲಿಯೇ ಬಸವೇಶ್ವರ ಪುತ್ಥಳಿಗೆ, ರೈಲು ನಿಲ್ದಾಣದ ಬಳಿ ಇರುವ ಸಂತ ಸೇವಾಲಾಲ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಪಟಾಕಿ ಸಿಡಿಸಿ, ಸಿಹಿ ಹಂಚಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here