ವಾಡಿ: ಬೌದ್ಧರ ಪವಿತ್ರ ಐತಿಹಾಸಿಕ ಸ್ಥಳ ಹಾಗೂ ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಬೇಕಿದ್ದ ಸನ್ನತ್ತಿ ಹಾಳು ಬಿದ್ದಿದ್ದು, ಅದರ ರಕ್ಷಣೆಗೆ ‘ಸನ್ನತಿ ಬೌದ್ದ ಪ್ರಾಧಿಕಾರ ಸಂರಕ್ಷಣಾ ಸಮಿತಿ’ ರಚಿಸಲಾಗಿದೆ ಎಂದು ಸಾಯಿಬಣ್ಣ ಬನ್ನೆಟ್ಟಿ ತಿಳಿಸಿದರು.
ಇತ್ತೀಚೆಗೆ ನಡೆದ ಸಭೆಯಲ್ಲಿ ಸನ್ನತ್ತಿ, ಕನಗನಹಳ್ಳಿ, ಕೊಲ್ಲೂರ, ನಾಲವಾರ, ಸೂಗೂರ, ಮಾರಡಗಿ, ಬನ್ನೆಟ್ಟಿ, ಕುಲಕುಂದಾ, ಮಳಗ, ತುನ್ನೂರ ಹಾಗೂ ವಾಡಿ ಪಟ್ಟಣದ ಕಾರ್ಯಕರ್ತರನ್ನೊಳಗೊಂಡ ಸಮಿತಿ ರಚಿಸಲಾಗಿದ್ದು, ಸನ್ನತ್ತಿ ಅಭಿವೃದ್ಧಿ ಕುರಿತು ಸರ್ಕಾರದ ಮೇಲೆ ಒತ್ತಡ ಹೇರಿ ಸನ್ನತ್ತಿ ಬೌದ್ಧ ಸ್ಥಳ ಅಭಿವೃದ್ಧಿ ಪಡಿಸುವುದು ಸಂಘದ ಉದ್ದೇಶ ಎಂದರು.ನೂ
ತನ ಪದಾಧಿಕಾರಿಗಳು: ಸಾಯಿಬಣ್ಣ ಹೊಸಮನಿ (ಅಧ್ಯಕ್ಷರು) ಬಾಗಪ್ಪ ಯಾದಗಿರಿ ಕೊಲ್ಲೂರು (ಗೌರವಾಧ್ಯಕ್ಷರು), ಬಾಬು ಬಂದಳ್ಳಿ (ಉಪಾಧ್ಯಕ್ಷರು), ಮೋನಪ್ಪ ನಡಿಗೇರಿ (ಕಾರ್ಯದರ್ಶಿ), ಸಂದೀಪ ಕಟ್ಟಿ, ಶ್ರೀಮಂತ ಬಾವಿ (ಸಹಕಾರದರ್ಶಿಗಳು), ಸಂಜು ಕುಮಾರ್ ಹರಗಿ (ಖಜಾಂಚಿ) ಹಾಗೂ ಭಗವಾನ್ ಚಾಮನೂರ್, ಮಲ್ಲಿಕಾರ್ಜುನ ರಾವೂರ, ಮಲ್ಲಿಕಾರ್ಜುನ ಮದನಕರ, ಮಂಜುನಾಥ ಹೊನಗುಂಟಾ, ಸೋಮನಾಥ ಕಂಸೂರ, ಶಿವಕುಮಾರ ನೀಲೂರ, ಶಿವಯೋಗಿ ಜೆಡಿಯಾರ, ಮಳಗ. ಶಿವಕುಮಾರ ಬಂದಳ್ಳಿ, ಶಿವಯೋಗಿ ಕಾಗಿ, ಶರಬಣ್ಣ ನಾಟೇಕರ, ಮರಿಲಿಂಗ ಹೊಸಮನಿ, ನಾಗಪ್ಪ ಪೂಜಾರಿ, ಭೀಮಶಂಕರ ಹೊಸಮನಿ, ಬಸವರಾಜ ಯಾದಗಿರಿ, ಮಲ್ಲಿಕಾರ್ಜುನ ಯಾದಗಿರಿ, ಮರೆಪ್ಪ ಪ್ಯಾಟಿ, ಶಿವಶರಣಪ್ಪ ಕಡ್ಲೆಕ್ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…