ಬಿಸಿ ಬಿಸಿ ಸುದ್ದಿ

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

 

ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ ವಿವಿಧ ಬಡಾವಣೆಯ ಮಹಿಳೆಯರಿಗೆೆ ಒಟ್ಟು ಸಾವಿರ ಸೀರೆಗಳನ್ನು ಹಂಚವ ಮೂಲಕ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್, ಮತ್ತು ಐಟಿ/ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಕ್ ಖರ್ಗೆ ಅವರ ಜನ್ಮದಿನವನ್ನು ಆಚರಿಸಿದರು.
ಪಟ್ಟಣದ ಅಂಬೇಡ್ಕರ್ ಕಾಲೋನಿ, ಜಾಂಭವೀರ ಕಾಲೋನಿ, ಚೌಡೇಶ್ವರ ಕಾಲೋನಿ, ಸಿದ್ದಾರ್ಥ ನಗರ, ಭೀಮ ನಗರ ಹಾಗೂ ಗೌತಮ ನಗರದ ಮಹಿಳೆಯರಿಗೆ ಒಟ್ಟು ಒಂದು ಸಾವಿರ ಸೀರೆ ವಿತರಿಸಿದರು. ಜೊತೆಗೆ ಪಟ್ಟಣದ ಹಿರಿಯರನ್ನು ಗೌರವ ಸನ್ಮಾನ ಮಾಡಿ, ಸಾಯಂಕಾಲ ಬಡಾವಣೆಯ ಜನರಿಗೆ ಕೆಕ್ ಮತ್ತು ಊಟದ ವ್ಯವಸ್ಥೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೂರ್ಯಕಾಂತ ರದ್ದೇವಾಡಿ, ಅತೀ ಹಿಂದುಳಿದ ತಾಲೂಕು ಎಂದು ಕರೆ

ಸಿಕೊಳ್ಳುವ ಚಿತ್ತಾಪುರ ಮತಕ್ಷೇತ್ರದಿಂದ ಸಚಿವ ಪ್ರಿಯಾಂಕ್ ಖರ್ಗೆಯವರು ಆಯ್ಕೆಯಾದ ನಂತರ ತಾಲೂಕಿನ ಚಿತ್ರಣವೇ ಬದಲಾಗಿದೆ. ಚಿತ್ತಾಪುರ ಹಾಗೂ ವಾಡಿ ಪಟ್ಟಣದಲ್ಲಿ ವಿಶ್ವವಿದ್ಯಾಲಯದ ಮಾದರಿಯಲ್ಲಿ ಶೈಕ್ಷಣಿಕ ಸಂಕೀರ್ಣ ವಿರ್ಮಾಣ ಮಾಡಿದ್ದಾರೆ. ಚಿತ್ತಾಪುರ ಮತಕ್ಷೇತ್ರ ಒಂದರಲ್ಲಿಯೇ ಸುಮಾರು ೧೪ ವಸತಿ ಶಾಲೆಗಳನ್ನು ಆರಂಭಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ತಂದಿದ್ದಾರೆ. ಗ್ರಾಮೀಣ ರಸ್ತೆಗಳು, ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಚಿತ್ತಾಪುರ ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತೆ ಮತ್ತೆ ಚುನಾಯಿಸಬೇಕು ಎಂದು ಕರೆ ನೀಡಿದರು.

ವಾಡಿ ಪಿ.ಎಸ್.ಐ ತಿರುಮಲೇಶ. ಕೆ, ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪೂಜ್ಯ ಭಿಕ್ಖುಣಿ ಅರ್ಚಸ್ಮತಿ ಮಾತಾಜಿ ಸಾನಿದ್ಯ ವಹಿಸಿದ್ದರು. ಶರಣಬಸು ಸಿರೂರಕರ, ಅಮೃತ ಕೋಮಟೆ, ಮಲ್ಲಿಕಾರ್ಜುನ ಕಟ್ಟಿ, ಅಬ್ದುಲ್ ಖದೀರ್, ನಾಗೇಂದ್ರ ಬೊಮ್ಮನಳ್ಳಿ, ಅರೀಫ್ ಪಟೇಲ, ದೊಡ್ಡೇಶ ಬಡಿಗೇರ ಮಹಾದೇವ ಮಾಲಗತ್ತಿ, ಸಂಜಯ ಗೋಪಾಳೆ, ಬಾಬು ಕಾಂಬಳೆ, ಭೀಮಾ ನಾಟೇಕರ್, ಮಲ್ಲಿಕಾರ್ಜುನ ಮರತೂರ, ಹಣಮಂತ ಶಹಾಬಾದ, ವಿಜಯಕುಮಾರ ಅನ್ವರ ಇದ್ದರು. ಮರಲಿಂಗ ಮಾಲಗತ್ತಿ ನಿರೂಪಿಸಿ ವಂದಿಸಿದರು.

vikram

Recent Posts

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

5 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

12 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

12 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

12 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

23 hours ago

ಬಡವರಿಗೆ ಹಣ್ಣು-ಹಂಪಲು ವಿತರಣೆ

ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ  ಜೈ ಕನ್ನಡಿಗರ…

23 hours ago