ಪ್ರತಿಯೊಬ್ಬರಲ್ಲಿ ಕನ್ನಡತನ ಪ್ರವೃತ್ತಿ ಮೈಗೂಡಲಿ: ಸುರೇಶ ಬಡಿಗೇರ

0
63

ಕಲಬುರಗಿ: ನಾಡಿನ ಪ್ರತಿಯೊಬ್ಬ ವ್ಯಕ್ತಿಯು ಕನ್ನಡ ಭಾಷೆ, ಸಾಹಿತ್ಯವನ್ನು ಉಳಿಸಿ,ಬೆಳೆಸುವಲ್ಲಿ ನಿರಂತರವಾಗಿ ಶ್ರಮಿಸಬೇಕು. ನಿರಂತರವಾಗಿ ಕನ್ನಡ ಕಟ್ಟುವ ಕಾರ್ಯ ಮಾಡಬೇಕು. ಅನ್ಯ ಭಾಷಿಗರನ್ನು ಮನವೊಲಿಸಿ ಕನ್ನಡತ್ತ ಮುಖ ಮಾಡುವಂತೆ ಮಾಡಬೇಕು. ಈ ನಿಟ್ಟನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆಯೆಂದು ರಾಜ್ಯ ಯುವ ಪ್ರಶಸ್ತಿ ಪುರುಷ್ಕೃತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೂತನ ಸದಸ್ಯ ಸುರೇಶ ಬಡಿಗೇರ ಹೇಳಿದರು.

ಅವರು ನಗರದ ತಿಮ್ಮಾಪೂರಿ ವೃತ್ತದ ಸಮೀಪದಲ್ಲಿರುವ ’ಸಿದ್ದರಾಮೇಶ್ವರ ಪದವಿ ಕಾಲೇಜ್’ನಲ್ಲಿ, ’ಕನ್ನಡ ಜಾನಪದ ಪರಿಷತ್’ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ’ಗೌರವ ಸತ್ಕಾರ ಸಮಾರಂಭ’ದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದ ಒಲವನ್ನು ಬೆಳೆಸಿಕೊಳ್ಳಬೇಕು. ನಿಮ್ಮಲ್ಲಿರುವ ಹಿಂಜರಿಕೆ ಮನೋಭಾವ ಕಿತ್ತೊಗಿಯಿರಿ. ಆಗ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯವಿದೆ. ಈ ಭಾಗದ ಕನ್ನಡ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಅದಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿಯನ್ನು ಮೂಡಿಸಲು ತಿರ್ಮಾನಿಸಲಾಗಿದೆಯೆಂದರು.

Contact Your\'s Advertisement; 9902492681

ಕರ್ನಾಟಕ ಜಾನಪದ ಆಕಾಡಮಿ ಸದಸ್ಯ ಪ್ರೊ. ರಾಜೇಂದ್ರ ಯರನಾಳೆ ಮಾತನಾಡಿ, ಪ್ರತಿಯೊಬ್ಬರಿಗೂ ಜೀವನದಲ್ಲಿ ಏನಾದರೂ ಉನ್ನತವಾದ ಸಾಧನೆ ಮಾಡಬೇಕೆಂಬ ಹುಚ್ಚಿರಬೇಕು. ಆಗ ಮಾತ್ರ ಸಾಧನೆಯಾಗುತ್ತದೆ. ಜನಪದ ಸಂಸ್ಕೃತಿ ದೇಶದ ಮೂಲ ಸಂಸ್ಕೃತಿಯಾಗಿದೆ. ನಮ್ಮ ಆಕಾಡೆಮಿಯಿಂದ ಜಾನಪದ ಚಟುವಟಿಕೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲು ನಿರಂತರವಾಗಿ ಪ್ರಯತ್ನಿಸುತ್ತೇನೆಂದು ನುಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಷತನ ಗೌರವ ಅಧ್ಯಕ್ಷ ಎಸ್.ಎಂ.ಪಟ್ಟಣಕರ್, ಜಾನಪದದಲ್ಲಿ ಸತ್ವವಿದೆ. ಅದರಲ್ಲಿರುವ ಅಮೃತವನ್ನು ಮುಂದಿನ ಪೀಳಿಗೆ ಸವಿಯಬೇಕಾದರೆ, ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕಾದದ್ದು ಪ್ರಸ್ತುತವಾಗಿ ಹೆಚ್ಚು ಅವಶ್ಯಕವಾಗಿದೆಯೆಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಪ್ರ್ರಾಂಶುಪಾಲ ರಮೇಶ ಹಣಕುಣಿ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ನಾಗೇಂದ್ರ ಬಿ.ಜೆ ಅಧ್ಯಕ್ಷತೆ ವಹಿಸಿದ್ದರು. ಶಿವಶಂಕರ ಬಿ., ದೇವೆಂದ್ರಪ್ಪ ವಿಶ್ವಕರ್ಮ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿ ಗಣೇಶ ರಾಠೋಡ ಪ್ರಾರ್ಥಿಸಿದರು. ಪರಿಷತ ಅಧ್ಯಕ್ಷ ಎಂ.ಬಿ.ನಿಂಗಪ್ಪ ಸ್ವಾಗತಿಸಿದರು. ಕಾರ್ಯದರ್ಶಿ ಪ್ರೊ.ಎಚ್.ಬಿ.ಪಾಟೀಲ ನಿರೂಪಣೆ ಮಾಡಿ, ಕೊನೆಯಲ್ಲಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here