ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.
ಕೇಂದ್ರ ಸಾಹಿತ್ಯ ಅಕಾಡೆಮಿಯು ನೃಪತುಂಗ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ಸೇಡಂನಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯದಲ್ಲಿ ಮಹಿಳಾ ಅಸ್ಮಿತೆ ಕುರಿತ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಮಾತನಾಡಿ, ಸೃಷ್ಟಿಕ್ರಿಯೆ ಸಾಮರ್ಥ್ಯ ಹೆಣ್ಣಿಗಷ್ಟೇ ಇದೆ. ಗರ್ಭಾಶಯದಲಿಯೇ ಮೊಳೆತು ಪೂರ್ಣ ಜೀವವಾಗಿ ಹೊರ ಬರುವ ಗಂಡಿಗೆ ಸ್ತ್ರೀಶಕ್ತಿಯ ಅಗಾಧತೆಯ ಅರಿವಾಗಿದೆ. ಪುರುಷರು ಕೀಳರಿಮೆಯಿಂದ
ಆ ಶಕ್ತಿಯನ್ನು ನಿರ್ಭಂದಿಸುವ ಕುತಂತ್ರವನ್ನು ಅನಾದಿ ಕಾಲದಿಂದಲೂ ಮಾಡುತ್ತಲೇ ಬಂದಿದ್ದಾರೆ. ಸೃಷ್ಟಿ ಶೀಲತೆ, ಕ್ರಿಯಾಶೀಲತೆ ಮಹಿಳೆಯರ ಸಹಜ ಗುಣವಾಗಿದ್ದು, ಶೈಕ್ಷಣಿಕ ಕಾರಣವಾಗಿ ತನ್ನ ಅಸ್ಮಿತೆಯನ್ನು ಕಂಡುಕೊಳ್ಳುತ್ತಿದ್ದಾರೆ ಎಂದರು.
ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ನೃಪತುಂಗ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಜೋಶಿ ಅವರು, ಯುವತಿಯರು ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು, ಅಧ್ಯಯನ ಶೀಲರಾದರೆ, ಹೆಚ್ಚಿನ ಸಾಮರ್ಥ್ಯ ಹೊಂದಬಹುದು. ಇದೇ ಮೊದಲ ಬಾರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಸೇಡಂನಲ್ಲಿ ಮಹಿಳೆಯರ ಕುರಿತು ವಿಚಾರ ಸಂಕಿರಣ ಏರ್ಪಡಿಸಿದ್ದು, ಸ್ವಾಗತಾರ್ಹವಾಗಿದೆ ಎಂದರು.
ವಚನ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ ಕುರಿತು ಮಾತನಾಡಿದ ನರ್ಮದಾದೇವಿ ಗಿಲ್ಡಾ ಮಹಿಳಾ ಪದವಿ ಕಾಲೇಜಿನ ಉಪ ಪ್ರಾಚಾರ್ಯರಾದ ಆರತಿ ಕಡಗಂಚಿ ಅವರು, ವಚನಕಾರ್ತಿಯರು ಪುರುಷ ಮತ್ತು ಸಮಾಜ ಕುರಿತಾಗಿ ತಳೆದ ಧೋರಣೆಗಳು, ವ್ಯಕ್ತಿನಿಷ್ಠ ಆತ್ಮೋನ್ನತಿಯ ಸ್ವತಂತ್ರ ಮನೋಭಾವ ಬೆಳೆಯಲು ಕಾರಣವಾಗಿವೆ ಎಂದರು.
ದಾಸ ಸಾಹಿತ್ಯದಲ್ಲಿ ಮಹಿಳಾ ಅಸ್ಮಿತೆ ಕುರಿತು, ನೃಪತುಂಗ ಪದವಿ ಮಹಾ ವಿದ್ಯಾಲಯದ ಉಪನ್ಯಾಸಕಿ ಡಾ.ಸುವರ್ಣ ವಝೆ ಮಾತನಾಡಿ, ಅಶಾಶ್ವತವಾದ ದೇಹದ ಮೂಲಕ ಆತ್ಮೋನ್ನತಿ ಸಾಧಿಸುವ ಬಗೆಯನ್ನು ದಾಸ ಮಹಿಳೆಯರು ತೋರಿಸಿಕೊಟ್ಟಿದ್ದಾರೆ ಎಂದರು.
ವರ್ತಮಾನದ ಸಾಹಿತ್ಯದಲ್ಲಿ ಮಹಿಳಾ ಅಸ್ಮಿತೆ ಕುರಿತು ಮಾತನಾಡಿದ ಹಿರಿಯ ಲೇಖಕಿ, ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಮಾತನಾಡಿ, ಮಹಿಳೆಯರು ಅಂದರೇನೆ ಶೋಷಿತರು ಎಂಬಂತಹ ವಾತಾವರಣ ಇರುವಾಗ ಶೂದ್ರ ಮಹಿಳೆಯರು ತಮ್ಮ ಅಸ್ತಿತ್ವಕ್ಕಾಗಿ ತಡಕಾಡುವ ಸನ್ನಿವೇಶವಿದೆ. ಅಕ್ಷರ ಜಗತ್ತಿನಿಂದ ದೂರವಿರಿಸಲ್ಪಟ್ಟ ಮಹಿಳೆಯರು ಇನ್ನೂ ಅಂಧಕಾರದಲ್ಲೇ ಇದ್ದಾರೆ. ಮಾನವೀಯ ನೆಲೆಯಲ್ಲಿ ಪ್ರತಿ ಮಹಿಳೆ ತನ್ನ ಅಸ್ತಿತ್ವ ಕಂಡುಕೊಳ್ಳಬೇಕಿದೆ ಎಂದರು.
ಕನ್ನಡ ಜನಪದ ಸಾಹಿತ್ಯದಲ್ಲಿ ಮಹಿಳಾ ಅಸ್ಮಿತೆ ಕುರಿತು ಮಾತನಾಡಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಶಿವಗಂಗಾ ರುಮ್ಮಾ ಅವರು, ಪುರುಷ ಮೇಧಾ ಶಕ್ತಿಗಿಂತಲೂ ಮಹಿಳೆಯರ ಮೇಧಾ ಶಕ್ತಿ ಹೆಚ್ಚಿನದಾಗಿದ್ದು, ಅದರ ಬಳಕೆ ಮಾಡಲು ಪುರುಷ ಸಮಾಜ ಬಿಡದ ಕಾರಣ ಮಹಿಳೆ ಹಿಂದೆ ಬಿದ್ದಿದ್ದಾಳೆ. ನಮ್ಮ ಜನಪದ ಮಹಿಳೆಯರು ಪುರುಷರಕ್ಕಿಂತ ಮೇಲಿದ್ದರೆಂಬುದಕ್ಕೆ ಅನೇಕ ಜನಪದ ಕಥೆಗಳು ಸಿಗುತ್ತವೆ ಎಂದರು.
ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ ಎಂ.ಬಿ.ಪಾಟೀಲ,
ಹಿರಿಯ ಸಾಹಿತಿಗಳಾದ ಲಿಂಗಾರೆಡ್ಡಿ ಶೇರಿ, ಚನ್ನಬಸಪ್ಪ ಮಂಗಲಗಿ, ಡಾ.ಜಗನ್ನಾಥ ತರನಳ್ಳಿ, ಡಾ.ಬಿ.ಆರ್. ಅಣ್ಣಾಸಾಗರ, ಮಹಿಪಾಲರೆಡ್ಡಿ ಮುನ್ನೂರ, ಶ್ರೀಶೈಲ ಇನಾಂದಾರ, ಡಾ.ಕಮಲಾಕರ ಕುಲಕರ್ಣಿ ಮಳಖೇಡ, ಕವಿ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ, ಲೇಖಕಿ ರೂಪಾದೇವಿ ಬಂಗಾರ, ರೇಣುಕಾ ತಾಡೆಪಲ್ಲಿ ಇತರರು ಉಪಸ್ಥಿತರಿದ್ದರು.
ಡಾ.ಅಮರಮ್ಮ ಬ. ಮಮ್ಮಾಜಿ ಪ್ರಾರ್ಥಿಸಿದರು. ಡಾ.ಶೋಭಾದೇವಿ ಚೆಕ್ಕಿ ನಿರೂಪಿಸಿದರು. ನೃಪತುಂಗ ಅಧ್ಯಯನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಗದೀಶ ಕಡಬಗಾಂವ ವಂದಿಸಿದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…