ಕಲಬುರಗಿ; ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಜೇವರ್ಗಿ, ಯಡ್ರಾಮಿ, ಅಫಜಲಪೂರ, ಸೇಡಂ, ಆಳಂದ, ಚಿಂಚೋಳಿ ತಾಲೂಕಿನಲ್ಲಿ ಜಂಗಲ್ ಕಟಿಂಗ್ ಹಾಗೂ ಮೆಂಟನೆನ್ಸ್ ಕಾಮಗಾರಿ ಕಳಪೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ಅಮಾನತ್ತುಗೊಳಿಸಬೇಕೆಂದು ನಮ್ಮ ಕರ್ನಾಟಕ ಸೇನೆ ಜಿಲ್ಲಾ ಘಟಕದ ವತಿಯಿಂದ ಕಲಬುರಗಿ ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೋಳ್ಳಲಾಯಿತು.
ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ತಾಲೂಕುಗಳಲ್ಲಿ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನಲ್ಲಿ ಜಂಗಲ್ ಕಟಿಂಗ್ ಹಾಗೂ ಮೆಂಟೆನೆನ್ಸ್ ಕಾಮಗಾರಿ ಪ್ರತಿ ವರ್ಷದ ನೆಪದಲ್ಲಿ ಟೆಂಡರ್ ಕಾಮಗಾರಿ ಕರೆದು ನಿಯಮಗಳನ್ನು ಗಾಳಿಗೆ ತೂರಿ ಅಲ್ಪಸ್ವಲ್ಪ ಜೆಸಿಬಿ ಮತ್ತು ಟ್ಯಾಕ್ಟರಗಳನ್ನು ಹಚ್ಚಿ ಕಂಟಿಗಳನ್ನು ಕಿತ್ತದೆ ಹಾಗೂ ಮುರುಮ ಹಾಕದೆ ಕಾಮಗಾರಿಯನ್ನು ಮಾಡಿರುತ್ತಾರೆ. ಇಂತಹ ಭ್ರಷ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಅಮಾನತ್ತುಗೊಳಿಸಬೇಕೆಂದು ನ.5 ರಂದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಇಲ್ಲಿಯವರೆಗೆ ಯಾವುದೇ ಪ್ರಯೋಜನೆವಾಗಿರುವುದಿಲ್ಲ. ಭ್ರಷ್ಟಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಅವರನ್ನು ಅಮಾನತ್ತುಗೊಳಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಸೇನೆಯ ಜಿಲ್ಲಾ ಅಧ್ಯಕ್ಷ ಸುಧೀಂದ್ರ ಎಮ್ ಇಜೇರಿ, ಕಲಬುರಗಿ ರಾಜ್ಯ ಯುವ ಘಟಕ ಪ್ರಧಾನ ಕಾರ್ಯದರ್ಶಿ ಕಿರಣ ಹಂಪಳ್ಳಿ, ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗ ರಾಠೋಡ, ಶೀವುಕುಮಾರ ನಾಸಿ, ರಾಜು ಮಾಯಕ,ರಾಜು ಲಿಂಬಾಳಕರ್, ಶಿವಲಿಂಗ ಹಳ್ಳಿ, ಸುಧೀರ ವಳಕೇರಿ, ಶರಣು ಗೌರನಳ್ಳಿ, ಶಿವಶಂಕರ ಗೌಡಪಾಟೀಲ, ಲಿಂಗು ದೊಡ್ಡಮನಿ, ಸಿದ್ದು ಕಲ್ಲಬಂಡೆ, ಮಹೇಶ ಪಾಟೀಲ, ಅಪ್ಪುಗೌಡ ಮಾಲಿಪಾಟೀಲ ಸೇರಿದಂತೆ ಕಾರ್ಯಕರ್ತರು ಇದ್ದರು.
ಕಲಬುರಗಿ: ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸರ್ಕಾರಿ ಪದವಿ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಮಹಾನಗರ ಪಾಲಿಕೆ,ಸಮಾಜ ಕಲ್ಯಾಣ ಇಲಾಖೆ, ಕನ್ನಡ…
ಕಲಬುರಗಿ: ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿ ಹಾಗೂ ಸಿ.ಆರ್.ಸಿ ಸ್ನೇಹ ಬಳಗ ಕಲಬುರಗಿ ಮತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ…
ಕಲಬುರಗಿ: ಸುವರ್ಣ ಭವನ (ಕನ್ನಡ ಭವನ)ದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ…
ಕಲಬುರಗಿ : ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿಯಲ್ಲಿ ಎನ್.ಎಸ್.ಎಸ್, ರೆಡ್ಕ್ರಾಸ್, ಸ್ಕೌಟ್ಸ್ ಆಂಡ್ ಗೈಡ್ಸ್, ಐ.ಕ್ಯೂ.ಎ.ಸಿ ಮತ್ತು ಸಾಂಸ್ಕøತಿಕ ಘಟಕಗಳ…
ಕಲಬುರಗಿ; ಶಿಶು ಮಗುವಿಗೆ ಅಪಹರಣಕಾರರನ್ನು ಬಂಧಿಸಿದ ಕಲಬುರಗಿ ಪೆÇೀಲೀಸ್ ಇಲಾಖೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಅಭಿನಂದನೆ ವ್ಯಕ್ತಪಡಿಸಿದೆ.…
ಕಲಬುರಗಿ: ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಗ್ರಾಮದಲ್ಲಿ ದಲಿತ ಭೋವಿವಡ್ಡರ ಸಮಾಜದ ವಯೋವೃದ್ಧ ಮಹಿಳೆಯ ಮೇಲೆ ಹಲ್ಲೆಮಾಡಿ ಲೈಂಗಿಕ ದೌರ್ಜನ್ಯ ನಡೆಸಿದ…