ಕಲಬುರಗಿ: ನ.28 ಜಿಲ್ಲೆಯಾದ್ಯಂತ ಮಣ್ಣಿನಲ್ಲಿ ತೇವಾಂಶದ ಕೊರತೆ ಹಾಗೂ ಒಣ ಬೇರು ಕೊಳೆ ರೋಗದಿಂದ ತೊಗರಿ ಒಣಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ವಿವಿಧ ಗ್ರಾಮಕ್ಕೆ ತೆರಳಿ ತೊಗರಿ ಬೆಳೆ ಹಾನಿ ಪರಿಶೀಲಿಸಿದರು.
ಕಲಬುರಗಿ ತಾಲೂಕಿನ ಪಟ್ಟಣ, ಆಳಂದ ತಾಲೂಕಿನ ಕಡಗಂಚಿ ಹಾಗೂ ಅಫಜಲಪೂರ ತಾಲೂಕಿನ ನೀಲೂರು ಗ್ರಾಮಗಳ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿ ತೊಗರಿ ಬೆಳೆ ಒಣಗುತ್ತಿರುವ ಬಗ್ಗೆ ವೀಕ್ಷಿಸಿ ರೈತರಿಂದ ಬೆಳೆ ಹಾನಿ ಕುರಿತು ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಬೆಳೆ ವಿಮೆ (ಸ್ಥಳೀಯ ವಿಕೋಪ)ದ ಜಿಲ್ಲಾ ಮಟ್ಟದ ಸಮಿತಿ ಸಭೆ ಬುಧವಾರ ನಡೆಸಿದ್ದು,
ಪ್ರಸಕ್ತ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೊಗರಿ, ಉದ್ದು, ಹೆಸರು, ಹತ್ತಿ, ಸೋಯಾಬೀನ್ ಇತರೆ ಮುಂಗಾರು ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿರುವ ಅಂದಾಜು ಜಿಲ್ಲೆಯ 2.03 ಲಕ್ಷ ರೈತರಿಗೆ 76.94 ಕೋಟಿ ರೂ. ಸ್ಥಳೀಯ ವಿಕೋಪ ಘಟಕದಡಿ ಮಧ್ಯಂತರ ಪರಿಹಾರ ರೈತರ ಖಾತೆಗೆ ಜಮೆ ಮಾಡಲು ಇಫ್ಕೊ-ಟೋಕಿಯೋ ಫಸಲ್ ಬಿಮಾ ಸಂಸ್ಥೆಗೆ ಸೂಚಿಸಲಾಗಿದೆ ಎಂದು ನೆರೆದ ರೈತರಿಗೆ ಅಭಯ ನೀಡಿದರು.
ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ನೀರಾವರಿ ಸೌಲಭ್ಯವಿರುವ ರೈತರು ಕೂಡಲೇ ಒಂದು ಸಲ ನೀರನ್ನು ತೊಗರಿ ಬೆಳೆಗೆ ಹಾಯಿಸಲು ನೀರಾವರಿ ಸೌಲಭ್ಯ ಇಲ್ಲದಿದ್ದಲ್ಲಿ ಅಂತರ ಬೇಸಾಯ ಕೈಗೊಂಡು ಬಿರುಕುಗಳನ್ನು ಮುಚ್ಚಲು ಕ್ರಮವಹಿಸಬೇಕೆಂದು ರೈತರಿಗೆ ಸಲಹೆ ನೀಡಿದರು.
ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ, ಕೃಷಿ ಉಪನಿರ್ದೇಶಕ ಸೋಮಶೇಖರ್ ಬಿರಾದಾರ, ಕಲಬುರಗಿ ತಹಶೀಲ್ದಾರ ಆನಂದ ಕೆ., ಆಳಂದ ತಹಶೀಲ್ದಾರ ಅಣ್ಣಾರಾವ ಪಾಟೀಲ ಸೇರಿದಂತೆ ಮತ್ತಿತರು ಇದ್ದರು.
ಕರ್ಜಗಿ (ಕಲಬುರಗಿ): ನ.28 ಅಫಜಲಪುರ ತಾಲ್ಲೂಕಿನ ಸುಕ್ಷೇತ್ರ ಕುಬೇರ ಕರಜಗಿ ಗ್ರಾಮದ ಹಜರತ್ ಖ್ವಾಜಾ ಸೈಫನ್ ಮುಲ್ಕ 891 ಜಾತ್ರೆ…
ಕಲಬುರಗಿ, ನ.೨೮ - ಹಿರಿಯ ಚಿತ್ರನಟ ಮದನ್ ಪಟೇಲ್ ಅವರು ನಾಯಕ ನಟರಾಗಿರುವ ಕಾದಂಬರಿ ಆಧಾರಿತ `ತಮಟೆ’ ಸಿನಿಮಾ ನವೆಂಬರ್…
ಕಲಬುರಗಿ: ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸರ್ಕಾರಿ ಪದವಿ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಮಹಾನಗರ ಪಾಲಿಕೆ,ಸಮಾಜ ಕಲ್ಯಾಣ ಇಲಾಖೆ, ಕನ್ನಡ…
ಕಲಬುರಗಿ: ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿ ಹಾಗೂ ಸಿ.ಆರ್.ಸಿ ಸ್ನೇಹ ಬಳಗ ಕಲಬುರಗಿ ಮತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ…
ಕಲಬುರಗಿ: ಸುವರ್ಣ ಭವನ (ಕನ್ನಡ ಭವನ)ದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ…
ಕಲಬುರಗಿ : ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿಯಲ್ಲಿ ಎನ್.ಎಸ್.ಎಸ್, ರೆಡ್‍ಕ್ರಾಸ್, ಸ್ಕೌಟ್ಸ್ ಆಂಡ್ ಗೈಡ್ಸ್, ಐ.ಕ್ಯೂ.ಎ.ಸಿ ಮತ್ತು ಸಾಂಸ್ಕøತಿಕ ಘಟಕಗಳ…