ಸೇಡಂ; ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯರಾದ ಶ್ರೀ ಸದಾಶಿವ ಸ್ವಾಮಿಗಳವರು ಶೀಘ್ರ ಗುಣಮುಖರಾಗಲಿ ಎಂದು ಹೇಮ-ವೇಮ ದೇವಾಲಯದಲ್ಲಿ ಭಕ್ತಾದಿಗಳಿಂದ ಶುಕ್ರವಾರ ಪೂಜೆ ಸಲ್ಲಿಸಲಾಯಿತು.
ನಗರದ ಹೊರವಲಯದಲ್ಲಿರುವ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ದೇವಾಲಯದಲ್ಲಿ ಹೇಮ ವೇಮ ರೆಡ್ಡಿ ಮಹಿಳಾ ಬಳಗ ಹಾಗೂ ಸೇಡಂ ತಾಲೂಕಿನ ಭಕ್ತಾದಿಗಳು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಹೋಮ ಹವನ ಜಪ ಮಾಡಿ, ಸದಾಶಿವ ಸ್ವಾಮಿಗಳು ಕಳೆದ ವಾರದಿಂದ ಅನಾರೋಗ್ಯಕ್ಕೀಡಾಗಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಶೀಘ್ರ ಗುಣಮುಖರಾಗಿ ಮತ್ತೆ ಯಥಾವತ್ತಾಗಿ ಭಕ್ತಾದಿಗಳೊಂದಿಗೆ ಬೆರೆಯುವಂತಾಗಲಿ ಎಂದು ಕೋರಿದರು. ಪೂಜಾ ಕೈಂಕರ್ಯವನ್ನು ಅರ್ಚಕ ರಾಮಪ್ರಕಾಶ ಪಾಂಡೆ ಅವರು ನಡೆಸಿಕೊಟ್ಟರು.
ಹೋಮ ಹವನ ಜಪ ಪೂಜೆಯ ನೇತೃತ್ವವನ್ನು ಶ್ರೀಮತಿ ಅನುರಾಧ-ಅನಂತರೆಡ್ಡಿ ಪಾಟೀಲ ದಂಪತಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಹೇಮ ವೇಮ ಟ್ರಸ್ಟ್ ಅಧ್ಯಕ್ಷ ಶರಣರೆಡ್ಡಿ ಜಿಲ್ಲೇಡಪಲ್ಲಿ, ರೆಡ್ಡಿ ಸಮಾಜದ ಅಧ್ಯಕ್ಷ ನಾಗಭೂಷಣರೆಡ್ಡಿ ಪಾಟೀಲ, ರೆಡ್ಡಿ ಮಹಿಳಾ ಬಳಗದ ಅಧ್ಯಕ್ಷೆ ಲತಾ ಹೇಮರೆಡ್ಡಿ ಕಲಕಂ, ಬಾಲಮಣಿ ವೆಂಕಟರೆಡ್ಡಿ, ಕೃಷ್ಣವೇಣಿ ಹಾಶನಪಲ್ಲಿ, ಸರೋಜಾ ಶಕಲಾಸಪಲ್ಲಿ, ಶ್ರೀಲಕ್ಷ್ಮೀ ಮದಕಲ್, ಅನ್ನಪೂರ್ಣ ಕೋಟ್ರಿಕಿ, ಪಿಡಿಓ ರೇಣುಕಾ, ದುರ್ಗಮ್ಮ ಯಾನಾಗುಂದಿ, ಶೋಭಾ, ನಾಗಮಣಿ ಟಿ.ಮೋತಕಪಲ್ಲಿ ಮತ್ತು ಬಟಗೇರಾ (ಬಿ) ಗ್ರಾಮದ ಮಹಿಳಾ ಭಜನಾ ತಂಡದವರು ಇದ್ದರು. ನಂತರ ಪ್ರಸಾದ ವಿತರಣೆ ಮಾಡಲಾಯಿತು.
ಶಹಾಪುರ, ಸುರಪುರ, ಯಾದಗಿರಿ ಹಾಗೂ ಗುರುಮಠಕಲ್ ಕ್ಷೇತ್ರವನ್ನೊಳಗೊಂಡ ಯಾದಗಿರಿ ಜಿಲ್ಲೆಯ ಶೈಕ್ಷಣಿಕ ದುಸ್ಥಿತಿ ಇದು. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಇಲ್ಲಿನ…
ಕಲಬುರಗಿ: ಮಂಡ್ಯದಲ್ಲಿ ಡಿಸೆಂಬರ್ 22 ರಿಂದ ನಡೆಯಲಿರುವ 87 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ…
ಶಹಾಬಾದ: ಪುಸ್ತಕಗಳು ಮಾನವನ ಉತ್ತಮ ಸಂಗಾತಿಗಳಾಗಿದ್ದು, ಅದರ ಸದುಪಯೋಗಪಡಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಬರಬೇಕಿದೆ ಎಂದು ನಗರದ ಎಸ್.ಎಸ್.ಮರಗೋಳ…
ಕಲಬುರಗಿ; ಪ್ರಾದೇಶಿಕ ಅಸಮಾನತೆ, ಬದಲಾವಣೆ, ಪರಿಣಾಮಗಳ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರ ರಚಿಸಿರುವ ಪಗೋವಿಂದರಾವ ನೇತೃತ್ವದ ಅಧ್ಯಯನ ಸಮೀತಿಯು ಸದರಿ ವಿಷಯದ…
ಕಲಬುರಗಿ; ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ-II (ರದ್ದೆವಾಡ್ಗಿ) ಮತ್ತು ಂಇಇಅ, ನಾಲವಾರ ಸಹಯೋಗದಲ್ಲಿ ಮೆಣಸಿನಕಾಯಿ ಬೆಳೆ ಕ್ಷೇತ್ರೋತ್ಸವ ಮತ್ತು ತರಬೇತಿ…
ಕಲಬುರಗಿ: ಕಾಯಕ ಶರಣರ ಸಮಾಜಗಳ ಒಕ್ಕೂಟ ರಿಜಿಸ್ಟರ್ಡ್ ಕಲಬುರಗಿ ಮತ್ತು ಹೈದರಾಬಾದ್ ಕರ್ನಾಟಕ ಶರಣ ಡೋರ ಕಕ್ಕಯ್ಯ ಉಭಯ ಸಂಘದಿಂದ…