ಕಲಬುರಗಿ; ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ-II (ರದ್ದೆವಾಡ್ಗಿ) ಮತ್ತು ಂಇಇಅ, ನಾಲವಾರ ಸಹಯೋಗದಲ್ಲಿ ಮೆಣಸಿನಕಾಯಿ ಬೆಳೆ ಕ್ಷೇತ್ರೋತ್ಸವ ಮತ್ತು ತರಬೇತಿ ಕಾರ್ಯಕ್ರಮ ಲಾಡ್ಲಾಪೂರ ಗ್ರಾಮದ ಕೃಷ್ಣನಾಯಕ್ ರವರು ತೋಟದಲ್ಲಿ ಹಮ್ಮಿಕೊಳ್ಳಲಾಯಿತು.
ಪ್ರಾರಂಭದಲ್ಲಿ ಡಾ.ಚಂದ್ರಕಾಂತ ರವರು ಅತಿಥಿ ಮತ್ತು ಗಣ್ಯರನ್ನು ವೇದಿಕೆಗೆ ಸ್ವಾಗತಿಸಿದರು, ನಂತರದಲ್ಲಿ ವಿಸ್ತರಣಾ ಮುಂದಾಳು ಡಾ. ಉಮೇಶ ಬಾರೆಕರ್ ರವರು ಅರ್ಕಾ ತನ್ವಿ ಮೆಣನಸಿನಕಾಯಿ ತಳಿಯ ಪ್ರಾತ್ಯಕ್ಷಿಕತೆಯಲ್ಲಿ ರೈತರ ಹೊಲದಲ್ಲಿ ಕೈಗೊಂಡಿರುವುದಾಗಿ ಮತ್ತು ಅದರ ವಿಶೇಷತೆಗಳನ್ನು ತಿಳಿಸಿದರು.
ತದನಂತರ, ಡಾ. ಚಂದ್ರಕಾಂತ (ವಿಜ್ಞಾನಿ) ಮಣ್ಣು ಪರಿಕ್ಷೇ ಮತ್ತು ಪೊಷಕಾಂಶಗಳ ಕುರಿತು ವಿವರಿಸಿದರು.
ತದನಂತರ, ಡಾ. ಚೇತನ್, ಟಿ. ತೋಟಗಾರಿಕೆ ವಿಜ್ಞಾನಿಗಳು, ಮೇಣಸಿಕಾಯಿ ಬೆಳೆಯ ಕುರಿತು ವಿವಿದ ಹಂತಗಳಲ್ಲಿ ತಗೆದುಕೊಳ್ಳಬೇಕಾದ ನಿರ್ವಹಣೆ ಕ್ರಮಗಳನ್ನು ವಿವರಿಸಿದರು ಹಾಗೂ ಕೇಂದ್ರದ ಕಾರ್ಯ ವೈಖರಿಯನ್ನು ರೈತರಿಗೆ ಮನದಟ್ಟು ಮಾಡಿದರು. ಅತಿಥಿಗಳಾಗಿ ಆಗಮಿಸಿದ ಜೈಸಿಂಗ ಜಾದವ್, ಗ್ರಾಮದ ಹಿರಿಯರು, ವಜ್ಞಾನಿಗಳು ಮತ್ತು ಅಧಿಕಾರಿಗಳ ಸಲಹೆ ಮೇರೆಗೆ ಬೆಳೆಗಳ ನಿರ್ವಹಣೆ ಮಾಡಬೇಕೆಂದು ಸಭಾಕರರಲ್ಲಿ ವಿನಂತಿಸಿದರು.
ಕಾರ್ಯಕ್ರಮದ ನಂತರ ಮೆಣಸಿನಕಾಯಿ ಬೆಳೆಯ ಕ್ಷೇತ್ರ ಭೇಟಿ ನೀಡಿ ಅರ್ಕಾ ತನ್ವಿ ತಳಿಯ ಬೆಳೆಯನ್ನು ವೀಕ್ಷಿಸಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಗ್ರಾ.ಪಂ ಸದಸ್ಯ ವಸಂತ ಪವಾರ್ ರವರು ಮತ್ತು ಗ್ರಾಮದ 62 ಯುವ ರೈತರು ಉಪಸ್ಥಿತರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.