ಬಿಸಿ ಬಿಸಿ ಸುದ್ದಿ

ಮೆಣಸಿನಕಾಯಿ ಬೆಳೆಯಲ್ಲಿ ಕ್ಷೇತ್ರೋತ್ಸವ ತರಬೇತಿ

ಕಲಬುರಗಿ; ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ-II (ರದ್ದೆವಾಡ್ಗಿ) ಮತ್ತು ಂಇಇಅ, ನಾಲವಾರ ಸಹಯೋಗದಲ್ಲಿ ಮೆಣಸಿನಕಾಯಿ ಬೆಳೆ ಕ್ಷೇತ್ರೋತ್ಸವ ಮತ್ತು ತರಬೇತಿ ಕಾರ್ಯಕ್ರಮ ಲಾಡ್ಲಾಪೂರ ಗ್ರಾಮದ ಕೃಷ್ಣನಾಯಕ್ ರವರು ತೋಟದಲ್ಲಿ ಹಮ್ಮಿಕೊಳ್ಳಲಾಯಿತು.

ಪ್ರಾರಂಭದಲ್ಲಿ ಡಾ.ಚಂದ್ರಕಾಂತ ರವರು ಅತಿಥಿ ಮತ್ತು ಗಣ್ಯರನ್ನು ವೇದಿಕೆಗೆ ಸ್ವಾಗತಿಸಿದರು, ನಂತರದಲ್ಲಿ ವಿಸ್ತರಣಾ ಮುಂದಾಳು ಡಾ. ಉಮೇಶ ಬಾರೆಕರ್ ರವರು ಅರ್ಕಾ ತನ್ವಿ ಮೆಣನಸಿನಕಾಯಿ ತಳಿಯ ಪ್ರಾತ್ಯಕ್ಷಿಕತೆಯಲ್ಲಿ ರೈತರ ಹೊಲದಲ್ಲಿ ಕೈಗೊಂಡಿರುವುದಾಗಿ ಮತ್ತು ಅದರ ವಿಶೇಷತೆಗಳನ್ನು ತಿಳಿಸಿದರು.

ತದನಂತರ, ಡಾ. ಚಂದ್ರಕಾಂತ (ವಿಜ್ಞಾನಿ) ಮಣ್ಣು ಪರಿಕ್ಷೇ ಮತ್ತು ಪೊಷಕಾಂಶಗಳ ಕುರಿತು ವಿವರಿಸಿದರು.

ತದನಂತರ, ಡಾ. ಚೇತನ್, ಟಿ. ತೋಟಗಾರಿಕೆ ವಿಜ್ಞಾನಿಗಳು, ಮೇಣಸಿಕಾಯಿ ಬೆಳೆಯ ಕುರಿತು ವಿವಿದ ಹಂತಗಳಲ್ಲಿ ತಗೆದುಕೊಳ್ಳಬೇಕಾದ ನಿರ್ವಹಣೆ ಕ್ರಮಗಳನ್ನು ವಿವರಿಸಿದರು ಹಾಗೂ ಕೇಂದ್ರದ ಕಾರ್ಯ ವೈಖರಿಯನ್ನು ರೈತರಿಗೆ ಮನದಟ್ಟು ಮಾಡಿದರು. ಅತಿಥಿಗಳಾಗಿ ಆಗಮಿಸಿದ ಜೈಸಿಂಗ ಜಾದವ್, ಗ್ರಾಮದ ಹಿರಿಯರು, ವಜ್ಞಾನಿಗಳು ಮತ್ತು ಅಧಿಕಾರಿಗಳ ಸಲಹೆ ಮೇರೆಗೆ ಬೆಳೆಗಳ ನಿರ್ವಹಣೆ ಮಾಡಬೇಕೆಂದು ಸಭಾಕರರಲ್ಲಿ ವಿನಂತಿಸಿದರು.

ಕಾರ್ಯಕ್ರಮದ ನಂತರ ಮೆಣಸಿನಕಾಯಿ ಬೆಳೆಯ ಕ್ಷೇತ್ರ ಭೇಟಿ ನೀಡಿ ಅರ್ಕಾ ತನ್ವಿ ತಳಿಯ ಬೆಳೆಯನ್ನು ವೀಕ್ಷಿಸಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಗ್ರಾ.ಪಂ ಸದಸ್ಯ ವಸಂತ ಪವಾರ್ ರವರು ಮತ್ತು ಗ್ರಾಮದ 62 ಯುವ ರೈತರು ಉಪಸ್ಥಿತರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

emedialine

Recent Posts

ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಸುಧಾರಣೆ ಯಾವಾಗ?; ಯಾದಗಿರಿ ಜಿಲ್ಲೆಯಲ್ಲಿ ಅರ್ಧದಷ್ಟು ಶಿಕ್ಷಕರ ಕೊರತೆ!

ಶಹಾಪುರ, ಸುರಪುರ, ಯಾದಗಿರಿ ಹಾಗೂ ಗುರುಮಠಕಲ್ ಕ್ಷೇತ್ರವನ್ನೊಳಗೊಂಡ ಯಾದಗಿರಿ ಜಿಲ್ಲೆಯ ಶೈಕ್ಷಣಿಕ ದುಸ್ಥಿತಿ ಇದು. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಇಲ್ಲಿನ…

3 hours ago

ಕಲಬುರಗಿ ದೂರದರ್ಶನ ಕೇಂದ್ರದಿಂದ ಗೋ.ರು.ಚನ್ನಬಸಪ್ಪ ಸನ್ಮಾನ

ಕಲಬುರಗಿ: ಮಂಡ್ಯದಲ್ಲಿ ಡಿಸೆಂಬರ್ 22 ರಿಂದ ನಡೆಯಲಿರುವ 87 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ…

3 hours ago

ಪುಸ್ತಕಗಳು ಮಾನವನ ಉತ್ತಮ ಸಂಗಾತಿಗಳು; ಬಿಲ್ಲವ್

ಶಹಾಬಾದ: ಪುಸ್ತಕಗಳು ಮಾನವನ ಉತ್ತಮ ಸಂಗಾತಿಗಳಾಗಿದ್ದು, ಅದರ ಸದುಪಯೋಗಪಡಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಬರಬೇಕಿದೆ ಎಂದು ನಗರದ ಎಸ್.ಎಸ್.ಮರಗೋಳ…

3 hours ago

ಗೋವಿಂದರಾವ್ ಸಮಿತಿ ವರದಿಯನ್ನಾಧರಿಸಿ ಹೊಸ ಅಭಿವೃದ್ಧಿ ಸೂಚ್ಯಂಕ ರಚನೆ: ಡಾ. ಅಜಯ್ ಧರ್ಮಸಿಂಗ್

ಕಲಬುರಗಿ; ಪ್ರಾದೇಶಿಕ ಅಸಮಾನತೆ, ಬದಲಾವಣೆ, ಪರಿಣಾಮಗಳ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರ ರಚಿಸಿರುವ ಪಗೋವಿಂದರಾವ ನೇತೃತ್ವದ ಅಧ್ಯಯನ ಸಮೀತಿಯು ಸದರಿ ವಿಷಯದ…

3 hours ago

ಭೀಮಣ್ಣ ಬೋನಾಳಗೆ ಸನ್ಮಾನ

ಕಲಬುರಗಿ: ಕಾಯಕ ಶರಣರ ಸಮಾಜಗಳ ಒಕ್ಕೂಟ ರಿಜಿಸ್ಟರ್ಡ್ ಕಲಬುರಗಿ ಮತ್ತು ಹೈದರಾಬಾದ್ ಕರ್ನಾಟಕ ಶರಣ ಡೋರ ಕಕ್ಕಯ್ಯ ಉಭಯ ಸಂಘದಿಂದ…

3 hours ago

ಅವಿಕಂಪಿತ ಕನ್ನಡಪ್ರೇಮಿ ಗೊ.ರು.ಚನ್ನಬಸಪ್ಪ: ಡಾ. ದಂಡೆ

ಕಲಬುರಗಿ: ನಾಡು, ನುಡಿ, ನರ ನಾಡಿಗಳಲ್ಲಿ ಅವಿಕಂಪಿತ ಕನ್ನಡ ಪ್ರೇಮ ಹೊಂದಿರುವ ಹಿರಿಯ ಜಾನಪದ ಮತ್ತು ವಚನ ವಿದ್ವಾಂಸ ಗೊ.ರು.ಚನ್ನಬಸಪ್ಪ…

3 hours ago