ಕಲಬುರಗಿ: ಮಂಡ್ಯದಲ್ಲಿ ಡಿಸೆಂಬರ್ 22 ರಿಂದ ನಡೆಯಲಿರುವ 87 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ನಾಡೋಜ ಗೋ .ರು.ಚನ್ನಬಸಪ್ಪ ಅವರಿಗೆ ನವೆಂಬರ್ 29ರಂದು ಕಲ್ಬುರ್ಗಿ ದೂರದರ್ಶನ ಕೇಂದ್ರಕ್ಕೆ ಭೇಟಿ ನೀಡಿದಾಗ ಆತ್ಮೀಯ ಸನ್ಮಾನ್ಯ ಏರ್ಪಡಿಸಲಾಯಿತು.
ಕಲ್ಬುರ್ಗಿ ದೂರದರ್ಶನ ಕೇಂದ್ರದಲ್ಲಿ ವಿಶೇಷ ಸಂದರ್ಶನ ನಡೆಸಿದ ನಂತರ ಸನ್ಮಾನ ಕಾರ್ಯಕ್ರಮ ಇಟ್ಟುಕೊಳ್ಳಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಅಪ್ಪಾ ರಾವ್ ಅಕ್ಕೋಣೆ ಅವರ ನೇತೃತ್ವದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಕಲಬುರಗಿ ದೂರದರ್ಶನ ಕೇಂದ್ರದ ಅತಿಥಿ ನಿರೂಪಕರಾದ ಡಾ.ಸದಾನಂದ ಪೆರ್ಲ ,ಪ್ರಸಾರ ನಿರ್ವಾಹಕರಾದ ಸಂಗಮೇಶ್, ತಾಂತ್ರಿಕ ವಿಭಾಗದ ಅಸ್ಲಾಂ ಖಾಸ್ ದಾರ್, ದಶರಥ ಮರತೂರ್, ಮಲ್ಲಿಕಾರ್ಜುನ್, ಸಿದ್ಧರಾಮ, ಸೌಂದರ್ಯ ತಜ್ಞೆ ಮಹಾನಂದ ಅಣಕಲ್ ಇದ್ದರು.
ದೂರದರ್ಶನ ಕೇಂದ್ರ ನಮ್ಮ ಹೆಮ್ಮೆ: ಗೋ.ರು.ಚ ಕಲಬುರಗಿ ದೂರದರ್ಶನ ಕೇಂದ್ರವು ಅತ್ಯಂತ ಹಳೆಯದು ಮತ್ತು ನಮ್ಮ ಹೆಮ್ಮೆ ಎಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಗೋ.ರು. ಚೆನ್ನಬಸಪ್ಪ ಅಭಿಪ್ರಾಯ ಪಟ್ಟರು.
ದೂರದರ್ಶನ ಕೇಂದ್ರದ ಸಂದರ್ಶನ ನಂತರ ಮಾತನಾಡಿ ಹೈದರಾಬಾದಿನಲ್ಲಿ ಕಾರ್ಯಕ್ರಮ ಸಿದ್ದಪಡಿಸಿ ಕಲ್ಬುರ್ಗಿ ದೂರದರ್ಶನಕ್ಕೆ ನೀಡುತ್ತಿದ್ದ ವೇಳೆಯಲ್ಲಿ ಮಾಧ್ಯಮ ಕುರಿತಾದ ಸಂದರ್ಶನದಲ್ಲಿ ಪಾಲ್ಗೊಂಡ ಅನುಭವ ನೆನಪಿಸಿಕೊಂಡುಮಾತನಾಡಿ ಅತ್ಯಂತ ಹಳೆಯ ಕಲಬುರಗಿ ದೂರದರ್ಶನ ನಮಗೆ ಹೆಮ್ಮೆ ಮತ್ತು ಅದನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಸಲಹೆ ನೀಡಿದರು.
ಪ್ರಸ್ತುತ ನೂತನ ಕಾರ್ಯಕ್ರಮಗಳನ್ನು ವಿಸ್ತರಿಸಿ ಇದನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಇದಕ್ಕಾಗಿ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಸುಸಜ್ಜಿತ ಕಾರ್ಯಕ್ರಮ ಸಿದ್ಧಪಡಿಸುವ ಕೇಂದ್ರವಾಗಿ ಪರಿವರ್ತನೆ ಮಾಡಬೇಕಾಗಿದೆ ಎಂದು ಗೋ.ರು. ಚನ್ನಬಸಪ್ಪ ಹೇಳಿದರು.
ಶಹಾಪುರ, ಸುರಪುರ, ಯಾದಗಿರಿ ಹಾಗೂ ಗುರುಮಠಕಲ್ ಕ್ಷೇತ್ರವನ್ನೊಳಗೊಂಡ ಯಾದಗಿರಿ ಜಿಲ್ಲೆಯ ಶೈಕ್ಷಣಿಕ ದುಸ್ಥಿತಿ ಇದು. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಇಲ್ಲಿನ…
ಶಹಾಬಾದ: ಪುಸ್ತಕಗಳು ಮಾನವನ ಉತ್ತಮ ಸಂಗಾತಿಗಳಾಗಿದ್ದು, ಅದರ ಸದುಪಯೋಗಪಡಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಬರಬೇಕಿದೆ ಎಂದು ನಗರದ ಎಸ್.ಎಸ್.ಮರಗೋಳ…
ಕಲಬುರಗಿ; ಪ್ರಾದೇಶಿಕ ಅಸಮಾನತೆ, ಬದಲಾವಣೆ, ಪರಿಣಾಮಗಳ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರ ರಚಿಸಿರುವ ಪಗೋವಿಂದರಾವ ನೇತೃತ್ವದ ಅಧ್ಯಯನ ಸಮೀತಿಯು ಸದರಿ ವಿಷಯದ…
ಕಲಬುರಗಿ; ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ-II (ರದ್ದೆವಾಡ್ಗಿ) ಮತ್ತು ಂಇಇಅ, ನಾಲವಾರ ಸಹಯೋಗದಲ್ಲಿ ಮೆಣಸಿನಕಾಯಿ ಬೆಳೆ ಕ್ಷೇತ್ರೋತ್ಸವ ಮತ್ತು ತರಬೇತಿ…
ಕಲಬುರಗಿ: ಕಾಯಕ ಶರಣರ ಸಮಾಜಗಳ ಒಕ್ಕೂಟ ರಿಜಿಸ್ಟರ್ಡ್ ಕಲಬುರಗಿ ಮತ್ತು ಹೈದರಾಬಾದ್ ಕರ್ನಾಟಕ ಶರಣ ಡೋರ ಕಕ್ಕಯ್ಯ ಉಭಯ ಸಂಘದಿಂದ…
ಕಲಬುರಗಿ: ನಾಡು, ನುಡಿ, ನರ ನಾಡಿಗಳಲ್ಲಿ ಅವಿಕಂಪಿತ ಕನ್ನಡ ಪ್ರೇಮ ಹೊಂದಿರುವ ಹಿರಿಯ ಜಾನಪದ ಮತ್ತು ವಚನ ವಿದ್ವಾಂಸ ಗೊ.ರು.ಚನ್ನಬಸಪ್ಪ…