ಇ-ಮೀಡಿಯಾ ಲೈನ್ ನ್ಯೂಸ್
ಧಾರವಾಡ: ಧಾರವಾಡ ಜಿಲ್ಲಾ ೧೭ ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಡಾ. ಎಸ್ ಆರ್ ಗುಂಜಾಳ ಅವರಿಗೆ ಅವರ ಮನೆಯಲ್ಲಿ ಆಮಂತ್ರಣ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಡಾ ಎಸ್ ಆರ್ ಗುಂಜಾಳ ಮಾತನಾಡಿ, ಪುಸ್ತಕ ಓದುವ ಅಭಿರುಚಿ ಹೆಚ್ಚಿಸಲು ಯೋಜನೆ ಹಾಕಿಕೊಳ್ಳಬೇಕು ಮತ್ತು ಇಷ್ಟು ದಿನಗಳ ನಂತರ ಕಸಾಪದ ಪದಾಧಿಕಾರಿಗಳು ನನ್ನನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಸಂತಸದೊಂದಿಗೆ ಗ್ರಂಥಪಾಲಕರನ್ನು ಗೌರವಿಸಿದ್ದಂತಾಗಿದೆ ಎಂದು ಹೇಳಿದರು.
ಖ್ಯಾತ ವೈದ್ಯ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಹಾಗೂ ಹಿರಿಯ ಸಾಹಿತಿ ಡಾ. ಬಾಳಣ್ಣ ಶೀಗಿಹಳ್ಳಿ ಅವರು ಡಾ ಎಸ್ ಆರ್ ಗುಂಜಾಳ ಅವರ ವ್ಯಕ್ತಿತ್ವ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಶಂಕರ ಹಲಗತ್ತಿ, ಸಹ ಕಾರ್ಯದರ್ಶಿ ಶಂಕರ ಕುಂಬಿ, ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಜಿನದತ್ತ ಹಡಗಲಿ, ಕೋಶಾಧ್ಯಕ್ಷ ಡಾ. ಎಸ್ ಎಸ್ ದೊಡಮನಿ, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀ ಶಾಂತವೀರ ಬೆಟಗೇರಿ ಹಾಗೂ ಶ್ರೀ ಎಸ್ ಎಚ್ ಪ್ರತಾಪ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ಮಹಾಂತೇಶ ನರೇಗಲ್, ಗೌರವ ಕಾರ್ಯದರ್ಶಿ ಮಾರ್ತಾಂಡಪ್ಪಾ ಕತ್ತಿ , ವೀರಣ್ಣ ವಡ್ಡೀನ, ಪ್ರೇಮಾ ನಡುವಿನಮನಿ, ಮಧುಮತಿ ಸಣಕಲ್, ಚಂದ್ರಶೇಖರ ಮಟ್ಟಿ, ವೀರೇಶ ಜಾಲಿಕಟ್ಟಿ, ನವೀನ ಅಂಗಡಿ ಮುಂತಾದವರು ಉಪಸ್ಥಿತರಿದ್ದರು.
ಬರುವ ತಿಂಗಳು ಫೆಬ್ರವರಿ ೩ ಹಾಗೂ ೪ ರಂದು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜಿಲ್ಲಾ ಸಮ್ಮೇಳನ ಜರುಗುವುದು ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ತಿಳಿಸಿದ್ದಾರೆ.
ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಯಾವೊಂದು ವಿಶ್ವವಿದ್ಯಾಲಯವು ಕಲಿಸದ ಪಾಠವನ್ನು ಮನುಷ್ಯನಿಗೆ ಅನುಭವವನ್ನು ಕಲಿಸಿ ಕೊಡುತ್ತದೆ ಎಂದು ಕರ್ನಾಟಕ ಕೇಂದ್ರೀಯ…
ಇ-ಮೀಡಿಯಾ ಲೈನ್ ನ್ಯೂಸ್ ಜೇವರ್ಗಿ: ಬದಲಾದ ಕಾಲಘಟ್ಟದಲ್ಲಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಪತ್ರಕರ್ತ-…
ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ನಗರದ ಜಗತ್ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ನೇತೃತ್ವದಲ್ಲಿ ಕನ್ನಡ ಅಭಿಮಾನ…
ಇ-ಮೀಡಿಯಾ ಲೈನ್ ಕಲಬುರಗಿ: ನಗರದ ಸೂಪರ್ ಮಾರ್ಕೆಟ್ ಸಿಟಿ ಬಸ್ ನಿಲ್ದಾಣದ ಹತ್ತಿರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಭಗ್ನಗೊಳಿಸಿರುವುದು…
ಇ-ಮೀಡಿಯಾ ಲೈನ್ ನ್ಯೂಸ್ ಕಲಬುರ್ಗಿ: ಜಿಲ್ಲೆಯ ಮತ್ತು. ಕಮಲಾಪುರ ತಾಲೂಕ ಸಂಯುಕ್ತ ಆಶ್ರಯದಲ್ಲಿ. ಕಲ್ಬುರ್ಗಿ ತಾಲೂಕ ಸಭಾಂಗಣದಲ್ಲಿ. ಕಮಲಾಪುರ ತಾಲೂಕಿನ…
ವಚನ ವಿಜಯೋತ್ಸವ ಫೆ. 10, 11 ಹಾಗೂ 12ರಂದು ಇ- ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಬಸವ ಸೇವಾ ಪ್ರತಿಷ್ಠಾನದ…