ಮಕರ ಸಂಕ್ರಾಂತಿ ಭಾರತದಲ್ಲಿ ಆಚರಿಸಲಾದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಇದು ಪ್ರತಿ ವರ್ಷ ಜನವರಿ 14 ರಂದು ಆಚರಿಸಲಾಗುತ್ತದೆ. ಸೂರ್ಯನು ಧನುಷ್ಚಕ್ರದಿಂದ ಮಕರಚಕ್ರಕ್ಕೆ ಹೋಗುವ ಸಮಯದಲ್ಲಿ ಮಕರ ಸಂಕ್ರಾಂತಿ ಹಬ್ಬ ಸರಿಯಾಗಿ ನಡೆಯುತ್ತದೆ. ಇದನ್ನು ಸನಾತನ ಧರ್ಮಗಳಲ್ಲಿ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಪ್ರಮುಖವಾಗಿ ಇದು ಕೃಷಿಕರ ಹಬ್ಬವೆಂದು ಪ್ರಸಿದ್ಧವಾಗಿದೆ. ಏಕೆಂದರೆ ಈ ಸಮಯದಲ್ಲಿ ಧಾನ್ಯದ ಬೆಳೆಯುವಿಕೆಯ ಪ್ರಾರಂಭವಾಗುತ್ತದೆ. ಮಕರ ಸಂಕ್ರಾಂತಿ ಹಬ್ಬವು ಸೂರ್ಯನ ಮಾಘಮಾಸದ ಆರಂಭವನ್ನು ಸೂಚಿಸುತ್ತದೆ.
ಈ ಹಬ್ಬವು ಸಮಾಜದಲ್ಲಿ ಆನಂದ ಮತ್ತು ಒಕ್ಕೂಟದ ಸಂಕೇತವಾಗಿದೆ. ಜ್ಞಾನ, ಸತ್ಯ, ಪ್ರೀತಿ ಮತ್ತು ಶಾಂತಿಗಳನ್ನು ಪ್ರತಿಬಿಂಬಿಸುವ ಹಬ್ಬವಾಗಿಯೂ ಇದನ್ನು ಗುರುತಿಸಲಾಗಿದೆ. ಮಕರ ಸಂಕ್ರಾಂತಿಯ ಆಚರಣೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಹಿಂದೂಗಳ ಧಾರ್ಮಿಕ ಆಚರಣೆಗಳಲ್ಲಿ ಇದಕ್ಕೆ ವಿಶಿಷ್ಟ ಸ್ಥಾನವಿದ್ದು, ಈ ಹಬ್ಬದಲ್ಲಿ ಹಲವು ಆಚರಣೆಗಳು ನಡೆಯುತ್ತವೆ. ಮನೆಯನ್ನು ಶುಚಿಗೊಳಿಸಿ, ಎಣ್ಣೆ ಸ್ನಾನ ಮಾಡಿಕೊಂಡು, ಹೊಸ ಬಟ್ಟೆಗಳನ್ನು ಧರಿಸಿ, ಗೋಧಿ ಮತ್ತು ಎಲೆಗಳ ಹೂವನ್ನು ಬಳಸಿಕೊಂಡು ಮನೆಗಳಿಗೆ ಅಲಂಕಾರ ಮಾಡಿ ಸಂಭ್ರಮಿಸಲಾಗುತ್ತದೆ.
ಅಂದಿನ ದಿನ ಸೂರ್ಯನು “ಮಕರ” ರಾಶಿಗೆ ಪ್ರವೇಶಿಸುವದರಿಂದ, ಈ ದಿನವನ್ನು ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ, ಪ್ರತಿಯೊಂದು ಮನೆಗಳಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ಹೊತ್ತಿಕೆಯಿಂದ ಅನ್ನವನ್ನು ದೇವರಿಗೆ ಅರ್ಪಿಸಿ ನೆವೇದ್ಯ ಮಾಡುವುದು ಸಂಪ್ರದಾಯ.
ಮಕರ ಸಂಕ್ರಾಂತಿ ಹಬ್ಬಕ್ಕೆ ಸಂಬಂಧಿಸಿದಂತೆ ವಿಶೇಷ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಎಳ್ಳು ಮತ್ತು ಬೆಲ್ಲ ಸಂಕ್ರಾಂತಿ ಸಮಯದಲ್ಲಿ ಸೇವಿಸಲಾಗುವ ಒಂದು ಪ್ರಮುಖ ಪದಾರ್ಥವಾಗಿದೆ. ಇದು ಸಂತೋಷ ಮತ್ತು ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಗೆಳೆಯರು ಮತ್ತು ಆಪ್ತರು ತಮ್ಮ ಮನೆಗಳಲ್ಲಿ ಬೇಟಿ ನೀಡಿ, ಒಬ್ಬರಿಗೊಬ್ಬರು ಪರಸ್ಪರ ಎಳ್ಳು ಬೆಲ್ಲ ಹಂಚಿಕೊಂಡು ಶುಭಾಶಯಗಳನ್ನು ತಿಳಿಸಿ, ಜೀವನ ಎಳ್ಳು ಬೆಲ್ಲದಂತೆ ಸಿಹಿಯಾಗಿರಲೆಂದು ಹಾರೈಸುತ್ತಾರೆ.
ಈ ಹಬ್ಬದ ದಿನದಂದು ಸೂರ್ಯನ ದಿಕ್ಕು ಬದಲಾಯಿಸುವುದು ಮತ್ತು ಹಗಲು ದಿನಗಳು ಹೆಚ್ಚಾಗುವ ಕಾಲವನ್ನು ಸಂಕೇತಿಸುತ್ತದೆ. ಈ ಹಬ್ಬವು ವಿಶೇಷವಾಗಿ ಸೂರ್ಯನ ಪ್ರವೇಶದ ಹಬ್ಬವಾಗಿ ಗುರುತಿಸಲಾಗಿದೆ. ಸಂಕ್ರಾಂತಿಯ ಮುಖ್ಯಭಾಗವೆಂದರೆ ಗಾಳಿಪಟ ಹಾರಿಸುವುದು. ಮಕ್ಕಳು, ಯುವಕರು ಹಾಗೂ ಹಿರಿಯರೆಲ್ಲರೂ ಇದರಲ್ಲಿ ಭಾಗವಹಿಸಿ, ಗಾಳಿಪಟ ಗಗನಕ್ಕೇರಿಸುವÀ ಮೂಲಕ ಸಂತೋಷವನ್ನು ಹಂಚಿಕೊಳ್ಳುತ್ತಾರೆ.
ಈ ಹಬ್ಬದಲ್ಲಿ ಸಿಹಿ ಆಹಾರವನ್ನು ಸಿದ್ಧಪಡಿಸುವುದು ಸಹ ಸಾಮಾನ್ಯವಾಗಿದೆ. ಸಂಕ್ರಾಂತಿ ಹಬ್ಬವು ಒಂದು ಪ್ರೇಮ, ಸಹಕಾರ ಮತ್ತು ಜಾತಿ-ಮತ ಪಂಥಗಳನ್ನು ಮೀರಿದ ಒಕ್ಕೂಟ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ. ಇದರಲ್ಲಿ ಹೊಸದಾದ ರೈತ ಉತ್ಪನ್ನಗಳು, ಹೊಸ ಜೀವನ ಹಾಗೂ ಸಂತೋಷವನ್ನು ನಾವು ಅನುಭವಿಸುತ್ತೇವೆ. ಈ ಹಬ್ಬವು ನಿರಂತರ ಬೆಳವಣಿಗೆಯ ಹಾಗೂ ಉತ್ತಮ ಜೀವನಕ್ಕಾಗಿ ನಾವು ದೇವರಲ್ಲಿ ಪ್ರಾರ್ಥನೆ ಮಾಡುವ ಸಮಯವಾಗಿದೆ. ಹμÉರ್ೂೀಲ್ಲಾಸದ ಜೊತೆಗೆ, ಸಂಕ್ರಾಂತಿಯ ಹಬ್ಬವು ನಾವು ನೀವೆಲ್ಲರೂ ಸೇರಿ ಆಚರಿಸೋಣ. ಇಡೀ ಮನುಕುಲಕ್ಕೆ ಒಳ್ಳೆಯದಾಗಲಿ.
ಈ ಸಂಕ್ರಾಂತಿ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಸಮೃದ್ಧಿ, ಶಾಂತಿ, ಆರೋಗ್ಯ ಹಾಗೂ ಯಶಸ್ಸಿನ ಹೊಸ ಆರಂಭ ತರಲಿ ಎಂದು ಹಾರೈಸುತ್ತೇನೆ. ಈ ಹಬ್ಬದ ಸೂರ್ಯನ ದಿವ್ಯ ಕಿರಣಗಳಿಂದ ನಿಮ್ಮ ಜೀವನವನ್ನು ಬೆಳಗಿಸಲಿ, ನಿಮ್ಮ ಎಲ್ಲಾ ಕನಸುಗಳು ನನಸಾಗಲಿ. ಕನಸುಗಳ ಸಾಧನೆಗೆ ಈ ಸಾಂಕ್ರಾಂತಿಯಲ್ಲಿ ಹೊಸ ಉತ್ಸಾಹ ಮತ್ತು ಚೈತನ್ಯ ಸಿಗಲಿ.
ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನ ಅಶೋಕ ಪಾಟೀಲ ಮಹಿಳೆ ಅಥವಾ ಸ್ತ್ರೀ ಪದವು ಸಂಸ್ಕøತದ್ದು, ಕನ್ನಡದಲ್ಲಿ ಈ…
ಶಹಾಬಾದ:ನಗರದ ಹಳೆಶಹಾಬಾದನ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಭೀಮರಾವ.ಸಿ.ಸುಗೂರ (77) ಶನಿವಾರದಂದು ನಿಧನರಾಗಿದ್ದಾರೆ. ಇವರಿಗೆ ಇಬ್ಬರು ಸುಪುತ್ರರು, ಇಬ್ಬರು ಸುಪುತ್ರಿಯರು…
ಜೇವರ್ಗಿ: ಇಂದು ನೆಲೋಗಿ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಸೇವಾ ಚಾರಿಟೇಬಲ್ ಟ್ರಸ್ಟ್ ನೆಲೋಗಿವತಿಯಿಂದ ಡಾ. ಬಿ.ಆರ್.ಅಂಬೇಡ್ಕರ ಸಮುದಾಯ ಭವನದಲ್ಲಿ ಛತ್ರಪತಿ…
ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಮೂಢನಂಬಿಕೆ, ಅನಿಷ್ಟ ಪದ್ಧತಿ, ಸಂವಿಧಾನದ ಆಶಯ ಈಡೇಸುವ ನಿಟ್ಟಿನಲ್ಲಿ ಜನ್ಮ ತಾಳಿದ ಮಾನವ ಬಂಧುತ್ವ…
ಕಲಬುರಗಿ: ನಗರದ ಸೆಂಟ್ ಮೇರಿ ಶಾಲೆಯಲ್ಲಿ 5 ರಿಂದ 9 ನೇ ತರಗತಿಯ 200 ಶಾಲಾ ಮಕ್ಕಳಿಗೆ ಆನಾಪಾನ ಧ್ಯಾನ…
ಜೇವರ್ಗಿ: ತಾಲೂಕಿನ ಜನರ ಸೇವೆಗಾಗಿ ಕಲಬುರಗಿಯ ಇಸ್ಲಾಮಾಬಾದ ಕಾಲೋನಿಯ ಅಲ್ ಶಿಫಾ ಆಸ್ಪತ್ರೆಯ ಮುಖ್ಯಸ್ಥರು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು…