ಇ-ಮೀಡಿಯಾ ಲೈನ್ ನ್ಯೂಸ್
ಕಲಬುರಗಿ: ೯ ದಿನಗಳ ಕಾಲ ಜಿಲ್ಲೆಯ ಸೇಡಮ್,ನ ಬೀರನಳ್ಳಿ ರಸ್ತೆಯಲ್ಲಿನ ಪ್ರಕೃತಿ ನಗರದಲ್ಲಿ ನಡೆಯಲಿರುವ ೭ನೇ ಭಾರತೀಯ ಸಂಸ್ಕೃತಿ ಉತ್ಸವವು ಸಮಾಜಕ್ಕೆ ಕೊಡುಗೆ ನೀಡುವ ಮಾದರಿ ಉತ್ಸವವಾಗಲಿದ್ದು,ಉತ್ಸವಕ್ಕೆ ದೇಶ ವಿದೇಶಗಳಿಂದ ೨೫ ಲಕ್ಷ ಜನ ಸಾಕ್ಷಿಯಾಗಲಿದ್ದಾರೆ ಎಂದು ಉತ್ಸವದ ಪ್ರಧಾನ ಸಂಯೋಜಕ ಬಸವರಾಜ ಪಾಟೀಲ್ ಸೇಡಮ್ ತಿಳಿಸಿದರು.
ಸೋಮವಾರ ಅವರು ಸೇಡಮ್ ರಸ್ತೆಯ ಬೀರನಳ್ಳಿಯ ಪ್ರಕೃತಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೀರನಳ್ಳಿಯ ರಸ್ತೆಯಲ್ಲಿನ ೨೪೦ ಎಕರೆ ಪ್ರದೇಶದಲ್ಲಿ ೯ ದಿನಗಳ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ೯ ವಿಶೇಷ ಪ್ರದರ್ಶಿಸಿನಿಗಳು, ೯೦ ಪ್ರಾಜ್ಞಾಯಕರು, ೯೦೦ ಮಳಿಗೆಗಳು, ೯೦೦೦ ಸ್ವಯಂಸೇವಕರು ಹಾಗೂ ೨೫ ಲಕ್ಷ ವೀಕ್ಷಕರು ಸಂಗಮವಾಗಲಿದ್ದು,ಇನ್ನೂ ೧೦ ದಿನಗಳಲ್ಲಿ ಕಾರ್ಯಕ್ರಮದ ಸಂಪೂರ್ಣ ಸಿದ್ಧತೆಗಳು ಮುಗಿಯಲಿವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಅನುರಾಧಾ ಪಾಟೀಲ್, ಮಾದ್ಯಮ ವಿಭಾಗದ ಪ್ರಭಾಕರ್ ಜೋಶಿ, ಸದಾನಂದ ಪೆರ್ಲ, ವಿಶ್ವನಾಥ ಕೋರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೇಂದ್ರ ಬಿಂದು:
೨೪ ಎಕರೆಯಲ್ಲಿ ಅನುಭವ ಮಂಟಪ ಎದ್ದು ನಿಲ್ಲಲಿದ್ದು,ಈ ಮಂಟಪವು ೭೦,೦೦೦ ಜನ ಕುಳಿತು ನೋಡುವ,ಕೇಳುವ ಅವಕಾಶ ನೀಡಲಿದೆ.ಅದೇ ರೀತಿ ೧೧ ಎಕರೆಯಲ್ಲಿ ಕೃಷಿ ಲೋಕ,೬ ಎಕರೆಯಲ್ಲಿ ವಿಜ್ಞಾನ ಲೋಕ, ೨ ಎಕರೆಯಲ್ಲಿ ದೃಶ್ಯಕಲಾ ಲೋಕ, ೨ ಎಕರೆಯಲ್ಲಿ ಸೇವಾ ಲೋಕ, ೨ ಎಕರೆಯಲ್ಲಿ ಕಾಯಕ ಲೋಕ, ಬಾಲ ಲೋಕ, ಪುಸ್ತಕ ಲೋಕ, ಗ್ರಾಮ ಲೋಕ,೪ ಎಕರೆಯಲ್ಲಿ ಸ್ವದೇಶಿ ಉದ್ಯಮ ಲೋಕ, ೪ ಎಕರೆಯಲ್ಲಿ ಉದ್ಯಮ ಲೋಕ, ಸಂಸ್ಕೃತಿ ಲೋಕ, ವಿಶೇಷ ಯೋಗ ಪ್ರದರ್ಶನ ಹಾಗೂ ಭಾರತೀಯ ಜ್ಞಾನ ಸೌರಭ ಸೇರಿದಂತೆ ಹತ್ತು ಹಲವು ವಿಶೇಷ ಕಾರ್ಯಕ್ರಮಗಳು ೯ ದಿನಗಳ ಕಾಲ ನಡೆಯಲಿವೆ ಎಂದು ಪ್ರಧಾನ ಸಂಯೋಜಕ ಬಸವರಾಜ ಪಾಟೀಲ ಸೇಡಮ್ ತಿಳಿಸಿದರು.
ಪ್ರಶಸ್ತಿ ಪ್ರದಾನ:
ಕ.ಕ.ಭಾಗದ ಏಳು ಜಿಲ್ಲೆಗಳ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರಧಾನ, ೫೧ ಪುರುಷ ಮತ್ತು ಮಹಿಳಾ ಸಾಧಕರಿಗೆ,೫೧ ಪದ್ಮಶ್ರೀ ಪುರಸ್ಕೃತರಿಗೆ ಸಮಿತಿಯ ೫೧ ಸಾಧಕರಿಗೆ, ೫೧ ರಾಷ್ಟ್ರೀಯ ಸಾಧಕರಿಗೆ,೫೧ ಆದಿ ವಾಸಿ ಭಾರತೀಯ ಸಾಧಕರಿಗೆ ಭಾರತ ಗೌರವ ಪುರಸ್ಕಾರ ಸೇರಿದಂತೆ ೯ ದಿನಗಳ ಕಾಲ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ ಎಂದು ಬಸವರಾಜ ಪಾಟೀಲ ಸೇಡಮ್ ಮಾಹಿತಿ ನೀಡಿದರು.
ಪ್ರಕೃತಿಯಿಂದ ಸಂಸ್ಕೃತಿಯೆಡೆಗೆ:
ಪ್ರಕೃತಿಯಿಂದ ಸಂಸ್ಕೃತಿಯೆಡೆಗೆ ಎಂಬ ಘೋಷಣೆಯೊಂದಿಗೆ ೭ನೇ ಭಾರತೀಯ ಸಂಸ್ಕೃತಿ ಉತ್ಸವವು ಸಂಪೂರ್ಣವಾಗಿ ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳಿಗೆ ಸಮರ್ಪಣೆಯಾಗಲಿದೆ. ಉತ್ಸವದ ಯಶಸ್ವಿಗೆ ಕಲ್ಯಾಣ ಕರ್ನಾಟಕದ ಭಾಗದ ಹಲವರು ಟೊಂಕಕಟ್ಟಿ ದಿನರಾತ್ರಿ ಕೆಲಸ ಮಾಡುತ್ತಿದ್ದು, ರಾಷ್ಟ್ರದ ಗಮನ ಸೆಳೆಯುವ ಅತೀ ದೊಡ್ಡ ಕಾರ್ಯಕ್ರಮ ಇದಾಗಲಿದೆ.
ಬಸವರಾಜ ಪಾಟೀಲ್ ಸೇಡಮ್
ಪ್ರಧಾನ ಸಂಯೋಜಕ.
ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನ ಅಶೋಕ ಪಾಟೀಲ ಮಹಿಳೆ ಅಥವಾ ಸ್ತ್ರೀ ಪದವು ಸಂಸ್ಕøತದ್ದು, ಕನ್ನಡದಲ್ಲಿ ಈ…
ಶಹಾಬಾದ:ನಗರದ ಹಳೆಶಹಾಬಾದನ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಭೀಮರಾವ.ಸಿ.ಸುಗೂರ (77) ಶನಿವಾರದಂದು ನಿಧನರಾಗಿದ್ದಾರೆ. ಇವರಿಗೆ ಇಬ್ಬರು ಸುಪುತ್ರರು, ಇಬ್ಬರು ಸುಪುತ್ರಿಯರು…
ಜೇವರ್ಗಿ: ಇಂದು ನೆಲೋಗಿ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಸೇವಾ ಚಾರಿಟೇಬಲ್ ಟ್ರಸ್ಟ್ ನೆಲೋಗಿವತಿಯಿಂದ ಡಾ. ಬಿ.ಆರ್.ಅಂಬೇಡ್ಕರ ಸಮುದಾಯ ಭವನದಲ್ಲಿ ಛತ್ರಪತಿ…
ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಮೂಢನಂಬಿಕೆ, ಅನಿಷ್ಟ ಪದ್ಧತಿ, ಸಂವಿಧಾನದ ಆಶಯ ಈಡೇಸುವ ನಿಟ್ಟಿನಲ್ಲಿ ಜನ್ಮ ತಾಳಿದ ಮಾನವ ಬಂಧುತ್ವ…
ಕಲಬುರಗಿ: ನಗರದ ಸೆಂಟ್ ಮೇರಿ ಶಾಲೆಯಲ್ಲಿ 5 ರಿಂದ 9 ನೇ ತರಗತಿಯ 200 ಶಾಲಾ ಮಕ್ಕಳಿಗೆ ಆನಾಪಾನ ಧ್ಯಾನ…
ಜೇವರ್ಗಿ: ತಾಲೂಕಿನ ಜನರ ಸೇವೆಗಾಗಿ ಕಲಬುರಗಿಯ ಇಸ್ಲಾಮಾಬಾದ ಕಾಲೋನಿಯ ಅಲ್ ಶಿಫಾ ಆಸ್ಪತ್ರೆಯ ಮುಖ್ಯಸ್ಥರು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು…