ನವೆಂಬರ್ ೩ಕ್ಕೆ ಗ್ರಂಥ ಸಮರ್ಪಣಾ ಸಮಾರಂಭ: ಕಲಬುರಗಿಗೆ ಜ್ಞಾನಪೀಠ ಪ್ರಶಸ್ತಿ ದಿಗ್ಗಜ ಡಾ. ಕಂಬಾರ್

0
66

ಕಲಬುರಗಿ: ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನವೆಂಬರ್ ೩ರಂದು ಬೆಳಿಗ್ಗೆ ೧೦-೩೦ಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಸತೀಶಕುಮಾರ್ ಎಸ್. ಹೊಸಮನಿ ಅವರ ಜನ್ಮದಿನ ಸುವರ್ಣ ಮಹೋತ್ಸವ ಹಾಗೂ ಕಲ್ಯಾಣ ಪ್ರಭೆ ಅಭಿನಂದನಾ ಗ್ರಂಥ ಸಮರ್ಪಣಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಅಭಿನಂದನಾ ಸಮಿತಿಯ ಪೋಷಕರು ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ. ಡಿ.ಜಿ. ಸಾಗರ್ ಅವರು ಇಲ್ಲಿ ಹೇಳಿದರು.

ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನೆಯನ್ನು ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕ್ಯಾಡೆಮಿ ಅಧ್ಯಕ್ಷ ಡಾ. ಚಂದ್ರಶೇಖರ್ ಕಂಬಾರ್ ಅವರು ನೆರವೇರಿಸುವರು ಎಂದರು.

Contact Your\'s Advertisement; 9902492681

ನೇತೃತ್ವವನ್ನು ಶ್ರೀಶೈಲಂ ಡಾ. ಸಾರಂಗಧರ್ ದೇಶಿಕೇಂದ್ರ ಮಹಾಸ್ವಾಮೀಜಿ, ದಿವ್ಯ ಸಾನಿಧ್ಯವನ್ನು ಹಾರಕೂಡದ ಚೆನ್ನವೀರ ಶಿವಾಚಾರ್ಯರು, ಸಮ್ಮುಖವನ್ನು ಅಣದೂರಿನ ಬುದ್ಧವಿಹಾರದ ಬಂತೆ ವರಜ್ಯೋತಿ, ಅಧ್ಯಕ್ಷತೆಯನ್ನು ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ವಹಿಸುವರು ಎಂದು ಅವರು ಹೇಳಿದರು.

ಅಭಿನಂದನಾ ಗ್ರಂಥವನ್ನು ನಾಡೋಜ ಡಾ. ಸಿದ್ದಲಿಂಗಯ್ಯ ಅವರು ಬಿಡುಗಡೆ ಮಾಡುವರು. ಹುಮ್ನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಅವರು ಸಾಕ್ಷ್ಯಚಿತ್ರಕ್ಕೆ ಚಾಲನೆ ನೀಡುವರು. ಮಾಜಿ ಸಚಿವ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅವರು ಡಿವಿಡಿ ಬಿಡುಗಡೆ ಮಾಡುವರು. ಶಂಭುಲಿಂಗ್ ಹೊಸಮನಿ, ಡಾ. ಸತೀಶಕುಮಾರ್ ಎಸ್. ಹೊಸಮನಿ, ಶ್ರೀಮತಿ ಸತ್ಯಭಾಮಾ ಎಸ್. ಹೊಸಮನಿ ಅವರು ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್.ಎಂ. ಮಹೇಶ್ವರಯ್ಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕ ಡಾ. ಬಸವರಾಜ್ ಗದಗೆ, ನಿವೃತ್ತ ಗ್ರಂಥಪಾಲಕ ಡಾ. ಎಸ್.ಆರ್. ಗುಂಜಾಳ್, ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಡಾ. ಪಿ.ವಿ. ಕೊಣ್ಣೂರ್, ಸಾಹಿತಿ ಶೂದ್ರ ಶ್ರೀನಿವಾಸ್, ನಿವೃತ್ತ ಅಧಿಕಾರಿಗಳಾದ ಟಿ. ಮಲ್ಲೇಶಪ್ಪ, ಡಾ. ಪಿ.ವೈ. ರಾಜೇಂದ್ರಕುಮಾರ್, ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ್, ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಡಾ. ಎಚ್.ಟಿ. ಪೋತೆ, ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ವಿ.ಟಿ. ಕಾಂಬಳೆ, ಮುಖ್ಯ ಗ್ರಂಥಪಾಲಕ ಡಾ. ಸುರೇಶ್ ಜಂಗೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ, ಡಾ. ಎಸ್.ಬಿ. ಕಿವುಡೆ ಮುಂತಾದವರು ಆಗಮಿಸುವರು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶಿವರಾಜ್ ಪಾಟೀಲ್, ಡಾ. ಗವಿಸಿದ್ದಪ್ಪ ಎಚ್. ಪಾಟೀಲ್, ಹಂಶಕವಿ, ಕೆ.ಎಸ್. ಬಂಧು, ಎಸ್.ಪಿ. ಸುಳ್ಳದ್ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here