ಪೂಜಾ ರಮೇಶ (88.50%) ಜ್ಯೋತಿ ನಾಗಣ್ಣ(79%) ರಾಧಿಕಾ (78.66%)
ರೇವಗ್ಗಿ: ಸರ್ಕಾರಿ ಪದವಿ ಪೂರ್ವ ಕಾಲೇಜು, ರೇವಗ್ಗಿಯ ದ್ವಿತೀಯ ಪಿಯುಸಿ ಪರೀಕ್ಷೆ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಒಟ್ಟು 68 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 40 ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆಂದು ಕಾಲೇಜು ಪ್ರಾಚಾರ್ಯ ಡಾ. ಚಂದ್ರಶೇಖರ ದೊಡ್ಡಮನಿ ಅವರು ತಿಳಿಸಿದ್ದಾರೆ.
ಕಲಾ ವಿಭಾಗದಲ್ಲಿ 1 ಡಿಸ್ಟಿಂಕ್ಸ್‌ನ, 14 ಪ್ರಥಮ ದರ್ಜೆ , 12 ದ್ವಿತೀಯ ದರ್ಜೆ ಮತ್ತು 5 ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 4 ಪ್ರಥಮ ದರ್ಜೆ , 2 ದ್ವಿತೀಯ ದರ್ಜೆ ಮತ್ತು 2 ತೃತೀಯ ದರ್ಜೆ ಉತ್ತೀರ್ಣರಾಗಿದ್ದಾರೆ. ಒಟ್ಟು ಶೇಕಡಾವಾರು ಫಲಿತಾಂಶ 58.82%.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕಾಗಿ ಕಾಲೇಜು ಪ್ರಾಚಾರ್ಯ ಮತ್ತು ಉಪನ್ಯಾಸಕರು ವಿಜಯಕುಮಾರ, ಸಿದ್ಧರಾಮ ಫುಲಾರ, ಕೃಷ್ಣಮೂರ್ತಿ ಕುಲಕರ್ಣಿ, ಕಾಶಿನಾಥ ಮುಖರ್ಜಿ, ಮನೋಹರ ಸುತಾರ, ಷರೀಫ ಎಮ್.ಎಫ್., ರಿಜ್ವಾನಾ ಬೇಗಂ, ಲೀಲಾವತಿ ಆರ.ಪಿ., ಲಕ್ಷ್ಮೀ ವೇಲುಸ್ವಾಮಿ ಮುಂತಾದವರು ವಿದ್ಯಾರ್ಥಿಗಳನ್ನು ಅಭಿನಂದನೆ ತಿಳಿಸಿ ಶುಭಕೋರಿದ್ದಾರೆ.