ಬೆಂಗಳೂರು: ಮಾಜಿ ಸಚಿವ ವೈಜನಾಥ್ ಪಾಟೀಲ್(82) ನಿಧನರಾಗಿರೋ ಹಿನ್ನೆಲೆ, ಫೋರ್ಟಿಸ್ ಆಸ್ಪತ್ರೆಗೆ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ನೀಡಿ, ಅಂತಿಮ ದರ್ಶನ ಪಡೆದಿದ್ದಾರೆ.
ವೈಜನಾಥ್ ಪಾಟೀಲ್ ಪಾರ್ಥಿವ ಶರೀರ ತರಲು ವಿಮಾನದ ವ್ಯವಸ್ಥೆ ಮಾಡಿಕೊಡುವಂತೆ ಸರ್ಕಾರಕ್ಕೆ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಆಗ್ರಹಿಸಿದ್ದಾರೆ. ವಿಮಾನದ ವ್ಯವಸ್ಥೆ ಆಗದಿದ್ದಲ್ಲಿ, ಆ್ಯಂಬುಲೆನ್ಸ್ನಲ್ಲಿ ಪಾರ್ಥಿವ ಶರೀರ ತರಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ.
ಸ್ವಗ್ರಾಮ ಚಿಂಚೋಳಿ ಪಟ್ಟಣದಲ್ಲಿ ನಾಳೆ ಪಾಟೀಲ್ ಅಂತ್ಯಕ್ರಿಯೆ ನಡೆಯಲಿದೆ. ಇನ್ನು ಚಿಂಚೋಳಿ ಪಟ್ಟಣದಲ್ಲಿ ಖಾಸಗಿ ಶಾಲೆಗಳು ಸ್ವಯಂ ಪ್ರೇರಿತವಾಗಿ ರಜೆ ಘೋಷಣೆ ಮಾಡಲಾಗಿದೆ. ಖಾಸಗಿ ಶಾಲೆಯಲ್ಲಿ ಶೋಕಾಚರಣೆ ನಡೆಸಿ, ಮಕ್ಕಳು ಮನೆಗೆ ವಾಪಸ್ ತೆರಳಿದ್ದಾರೆ.
ವೈಜನಾಥ್ ಪಾಟೀಲ್, ಕಲ್ಯಾಣ ಕರ್ನಾಟಕದ ಕಲಂ 371(ಜೆ) ಜಾರಿಗಾಗಿ ಮೊದಲು ಹೋರಾಟ ಆರಂಭಿಸಿದವರು.