ಕಲಬುರಗಿ: ಜನಪರ ನಾಯಕ ವೈಜನಾಥ್ ಪಾಟೀಲರ ನಿಧನ ಕಲ್ಯಾಣ ಕರ್ನಾಟಕಕ್ಕೆ ತುಂಬಲಾಗದ ನಷ್ಠವಾಗಿದೆ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಶ್ರೀಯುತರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಪಾಟೀಲರು ತಮ್ಮ ನೇರ ಮಾತು ಹಾಗೂ ಜನಪರ ಹೋರಾಟಗಳ ಮೂಲಕ ಜನನಾಯಕರಾಗಿ ಬಹಳ ಎತ್ತರಕ್ಕೆ ಬೆಳೆದ ಈ ಭಾಗದ ರಾಜಕಾರಣಿಯಾಗಿದ್ದರು. ಸಚಿವರಾಗಿಯೂ ಕೂಡಾ ಸೇವೆ ಸಲ್ಲಿಸಿದ್ದ ವೈಜನಾಥ ಪಾಟೀಲರು ಸಂವಿಧಾನದ ಕಲಂ 371 ಕ್ಕೆ ತಿದ್ದುಪಡಿ ತಂದು ಈ ಭಾಗದ ಅಭಿವೃದ್ದಿಗೆ ಒತ್ತು ನೀಡಬೇಕೆಂದು ಆ ಸಂದರ್ಭದಲ್ಲಿಯೇ ಆಗ್ರಹಿಸಿದ್ದರು ಎಂದು ಗುಣಗಾಣ ಮಾಡಿದ್ದಾರೆ.
ವೈಜನಾಥ ಪಾಟೀಲರ ನಿಧನದಿಂದಾಗಿ ಈ ಭಾಗ ಹೋರಾಟಗಾರರೊಬ್ಬರನ್ನು ಕಳೆದುಕೊಂಡಂತಾಗಿದ್ದು ಕುಟುಂಬ ವರ್ಗದವರಿಗೆ ಮತ್ತು ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.