ಬಿಸಿ ಬಿಸಿ ಸುದ್ದಿ

ಅಪ್ಪ ಮತ್ತು ರಾಜಕೀಯ: ವೈಜನಾಥ ಪುತ್ರಿ ಭಾರತಿ ಪಾಟೀಲ ನೆನಪಿನಾಳದಿಂದ

ರಾಜೀಯದಿಂದ  ಅಪ್ಪ ಎಷ್ಟು ಆಸ್ತಿಗಳಿಸಿದ್ದರು

ಎನ್ನುವುದಕ್ಕೆ ಅವರು ಇಂದು ಕಲಬುರಗಿಯ ಶಾಂತಿ ನಗರದಲ್ಲಿ ವಾಸಿಸುತ್ತಿರುವ ಮನೆಯೆ ಸಾಕ್ಷಿ. ಯಾವುದೇ ಮಧ್ಯಮ ವರ್ಗದ ಕುಟುಂಬ ಸ್ವಂತ ಗಳಿಕೆಯಿಂದ ಕಟ್ಟಿಸಬಹುದಾದಂತಹ ಒಂದು ಸಣ್ಣ ಕಟ್ಟಡದಲ್ಲಿ ಇಂದು ಪಾಟೀಲರು ವಾಸಿಸುತಿದ್ದಾರೆ.

ಇಂದು ತಮ್ಮ ತಂದೆಯವರು ವಾಸಿಸುತ್ತಿರುವ ಮನೆ ಹಲವಾರು ಮಧ್ಯಮ ವರ್ಗದ ಕುಟುಂಬಗಳು ಹೊಂದಿರಬಹುದಾದಂತಹ ಮನೆಯಾಗಿದ್ದಾಗ್ಯೂ, ಅದು ಅವರ ಪಾಲಿಗೆ ಉತ್ತಮವಾದದ್ದು. ಏಕೆಂದರೆ ಈ ಮನೆಯನ್ನು ೨೦೦೪ರಲ್ಲಿ ಪುನಃನಿರ್ಮಾಣ ಮಾಡುವ ಪೂರ್ವದಲ್ಲಿ ಅವರು ತೀರಾ ಚಿಕ್ಕದಾದ ಮನೆಗಳಲ್ಲಿ ವಾಸಿಸಿದ್ದರು.

“೧೯೯೪ರಲ್ಲಿ ಪಾಟೀಲರು ದೇವೇಗೌಡರ ಸಂಪುಟದಲ್ಲಿ ಸಚಿವರಾಗುವವರೆಗೆ ನಮ್ಮ ಕುಟುಂಬ ಚಿಂಚೋಳಿಯ ಸ್ವಂತ ಮನೆಯಲ್ಲಿ ವಾಸವಾಗಿದ್ದೆವು. ಅವರು ಸಚಿವರಾದ ಮೇಲೆ ಬೆಂಗಳೂರಿಗೆ ಶಿಫ್ಟ್ ಆದೆವು. ಆದರೆ ಕೆಲವೇ ತಿಂಗಳಲ್ಲಿ ಅವರು ಸಚಿವ ಸಂಪುಟದಿಂದ ಹೊರಗೆ ಉಳಿಯಬೇಕಾಯಿತು. ಕೆಲವು ಸಮಯದ ನಂತರ ನಾವು ಗುಲ್ಬರ್ಗಕ್ಕೆ ಶಿಫ್ಟ್ ಆದೆವು. ಆಗ ಶಾಂತಿನಗರದ ಹೌಸಿಂಗ್ ಬೋರ್ಡಿನ ನಮ್ಮ ಹಳೇ ಮನೆಯಲ್ಲಿ ಉಳಿದೆವು. ಆವಾಗ ಮನೆ ಪರಿಸ್ಥಿತಿ ಯಾವ ರೀತಿ ಇತ್ತೆಂದೆರೆ ಮಂಚದ ಒಂದು ಕಾಲು ಮುರಿದಿದ್ದಾಗ್ಯೂ, ಅದನ್ನು ರಿಪೇರಿ ಮಾಡಿಸದೆ ಅಥವಾ ಬದಲಾಯಿಸದೆ ಅದಕ್ಕೆ ಕಲ್ಲನ್ನು ಸಪೋರ್ಟಾಗಿ ಕೊಟ್ಟು ಉಪಯೋಗಿಸಲಾಗುತಿತ್ತು.

ಆ ಪರಿಸ್ಥಿತಿ ನಮ್ಮದಿತ್ತು”.”ಶಾಂತಿನಗರದ ಹೌಸಿಂಗ್ ಬೋರ್ಡಿನ ಮನೆ ತುಂಬಾ ಹಳೆಯದಾಗಿದ್ದುದರಿಂದ ಅದನ್ನು ಹೊಡೆದುಹಾಕಿ ೨೦೦೪ರಲ್ಲಿ ಹೊಸ ಮನೆ ಕಟ್ಟಬೇಕೆಂದಾಗ ನಾವು ರಾಮ ಮಂದಿರ ಹತ್ತಿರದ ಪಿ ಅಂಡ್ ಟಿ ಕಾಲೋನಿಯ ಒಂದು ಬಾಡಿಗೆ ಮನೆಗೆ ಹೋದೆವು. ಆ ಮನೆ ಮಾರುತ್ತಾರೆಂದು ಗೊತ್ತಾದಾಗ, ನಾವು ಯಾಕೆ ಖರೀದಿಸಬಾರದೆಂದು ಆಲೋಚಿಸಿದೆವು. ಆಗ ನಮ್ಮ ತಂದೆಯವರು ಎಲ್ಲಿಂದ ದುಡ್ಡು ತರ‍್ತೀರಿ? ಎಂದು ಪ್ರಶ್ನಿಸಿದರು. ನಾವು ಬೆಂಗಳೂರಿನ ಸೈಟ್ ಮಾರೋಣ ಮತ್ತು ಉಳಿದ ಹಣವನ್ನು ಲೋನ್ ತೆಗೆದುಕೊಳ್ಳೋಣ ಎಂದಾಗ ನಮ್ಮ ತಂದೆಯವರು ಅದಕ್ಕೆ ಸಮ್ಮತಿಸಲಿಲ್ಲ.

ನಮಗೆ ಚಿಂಚೋಳಿಯಲ್ಲಿ ಒಂದು ಮನೆ ಇರುವಾಗ ಇಲ್ಲಿ ನಮಗೆ ಮತ್ತೊಂದು ಮನೆ ಯಾಕೆ? ದೊಡ್ಡ ಮನೆ ತಗೊಂಡು ಇವರು ಸಾರ್ವಜನಿಕರ ದುಡ್ಡು ಹೊಡೆದು ಇಂಥ ಬಂಗ್ಲೋ ಕೊಂಡುಕೊಂಡಾರೆಂದು ಬದ್ಲಾಮ್ ಮಾಡಬೇಕೆಂದಿದ್ದಿರೇನು? ಎಂದು ಕೋಪದಿಂದ ನುಡಿದು ಒಪ್ಪಿಗೆ ಕೊಡಲಿಲ್ಲ. ಆ ಬಾಡಿಗೆ ಮನೆಯನ್ನು ಖಾಲಿ ಮಾಡಬೇಕಾದ ಪರಿಸ್ಥಿತಿ ಬಂದಾಗ ನಾವು ಮತ್ತೊಂದು ಚಿಕ್ಕ ಬಾಡಿಗೆ ಮನೆ ಹಿಡಿದೆವು. ಅದನ್ನೂ ಕೂಡ ಖಾಲಿ ಮಾಡಬೇಕಾದ ಪರಿಸ್ಥಿತಿ ಬಂದಾಗ, ನಮಗೆ ಬೇರೆ ದಾರಿ ಇಲ್ಲದೆ ಸಾಮಾನುಗಳನ್ನು ಮತ್ತೊಂದು ಚಿಕ್ಕ ಬಾಡಿಗೆ ಮನೆಯಲ್ಲಿ ಡಂಪ್ ಮಾಡಬೇಕಾಯಿತು.

ನಾವು ಕುಟುಂಬದವರು ಸೇರಿಕೊಂಡು ಗುಲ್ಬರ್ಗದಲ್ಲಿ ಚಿಕ್ಕದಾದರೂ ಪರವಾಗಿಲ್ಲ ಒಂದು ಸ್ವಂತ ಮನೆ ಇಲ್ಲದಿದ್ದರೆ ಹೇಗೆ? ಎಂದು ಪಪ್ಪ ಅವರಿಗೆ ಕನ್‌ವಿನ್ಸ್ ಮಾಡಿದ ಮೇಲೆ ಅವರು ಶಾಂತಿನಗರದ ಮನೆ ರಿನೋವೇಷನ್ ಮಾಡಲು ಒಪ್ಪಿಕೊಂಡರು. ಕೆಲವೊಮ್ಮೆ ನಮಗೆ ಬಹಳಷ್ಟು ದುಃಖ-ಅವಮಾನವಾಗುತಿತ್ತು. ಆದರೆ ಅವರಿಗೆ ಸ್ವಂತಕ್ಕೆ ವಾಸಿಸಲು ಒಂದು ಮನೆ ಇಲ್ಲ ಅಂತ ಎಂದೂ ನಮ್ಮ ತಂದೆಯವರು ಬೇಜಾರುಪಟ್ಟುಕೊಳ್ಳುತ್ತಿರಲಿಲ್ಲ”, ಎಂದು ಭಾರತಿ ಪಾಟೀಲ ತಮ್ಮ ಜೀವನದ ಘಟನೆಗಳನ್ನು ಮೆಲಕುಹಾಕುತ್ತಾರೆ.

emedialine

Recent Posts

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 hour ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

8 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

8 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

9 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

19 hours ago

ಬಡವರಿಗೆ ಹಣ್ಣು-ಹಂಪಲು ವಿತರಣೆ

ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ  ಜೈ ಕನ್ನಡಿಗರ…

19 hours ago