ಬಣಜಿಗರು ಎಂಬುದು ಲಿಂಗಾಯತ ಸಮುದಾಯದ ಒಂದು ಪಂಗಡ ವ್ಯಾಪಾರವೇ ಇವರ ಕುಲ ಕಸಬು. ಅತ್ತ ಶ್ರೀಮಂತರಲ್ಲ, ಇತ್ತ ತೀರಾ ಬಡವರೂ ಅಲ್ಲ, ಎಂಬಂತಹ ಸ್ಥತಿಯಲ್ಲಿ ಜೀವನ ನಡೆಸುತ್ತಿರುವ ಸಮುದಾಯವಿದು.
ಐಹೊಳೆಯ ವೀರಗಂದರ್ವ, ಆತನ ಪತ್ನಿ ಸಮತಾದೇವಿ, ಮಗಳು ಬಲಿ ದೇವಿ. ತನ್ನ ತಂದೆಯನ್ನು ಬಂಧಿಸಿದ ಗೋಮುಖಾಸುರರನ್ನು ವಧಿಸಲು ಕೈಗೊಂಡ ತಪಸ್ಸಿಗೆ ಮೆಚ್ಚಿ ಪರಮೇಶ್ವರನು ಪಂತಮುಖ ಗಣಾಧೀಶ್ವರರನ್ನು ಸೃಷ್ಠಿ ಮಾಡಿದ ಗೋಮುಖಾಸುರರನ್ನು ಕೊಂದ ಬಳಿಕ ಬಲಿದೇವಿಯನ್ನು ಗಣಾಧೀಶ್ವರ ವಿವಾಹವಾದ ಇವರ ಪುತ್ರ ಮಖಾರಿ. ಈತ ಭೂಲೋಕಕ್ಕೆ ಹೋಗಿ ನಾಗರಾಜನ ಮಗಳು ಪಣಾಮಣಿಯನ್ನು ಮದುವೆಯಾಗುವನು. ಈ ದಂಪತಿಗೆ ಐದು ಜನ ಮಕ್ಕಳಾದರು. ತಂದೆ ಇವರಿಗೆ ಒಂದೊಂದು ಹೊಣೆ ಹೊರಿಸಿದ.
ಕೃಷಿಕ ಮತ್ತು ರಾಜನ ನಡುವೆ ವ್ಯಾಜ್ಯಗಳನ್ನು ತೀರ್ಮಾನ ಮಾಡುತಿದ್ದ ಮೊದಲ ಶೆಟ್ಟಿಗೆ ನಾಡಶೆಟ್ಟಿ ಕೃಷಿಕರು ಮತ್ತು ಸಮಾಜದ ನಡುವೆ ಉಂಟಾಗುತಿದ್ದ ತಕರಾರನ್ನು ಬಗೆಹರಿಸುತಿದ್ದ ಎರಡನೇ ಶೆಟ್ಟಿಗೆ ಮಹಾಜನ ಶೆಟ್ಟಿ. ಕೃಷಿ ನಿರ್ಣಯ , ವಸೂಲಿ ಮತ್ತಿತರ ಹೊಣೆ ಹೊತ್ತಿದ್ದ ಮೂರನೆ ಶೆಟ್ಟಿ ಗುತ್ತ ಶೆಟ್ಟಿ, ಕೃಷಿ ಉತ್ಪನ್ನಗಳ ಮಾರಾಟದ ಜವಾಬ್ದಾರಿ ನೋಡಿಕೊಳ್ಳುತಿದ್ದ ನಾಲ್ಕನೇ ಶೆಟ್ಟಿ ಪಟ್ಟಣಶೆಟ್ಟಿ ಬೇಸಾಯದಲ್ಲಿ ತೊಡಗಿಕೊಂಡಿದ್ದ ಐದನೇ ಶೆಟ್ಟಿಗೆ ಮಿಂಡಗುದ್ದಲಿ ಶೆಟ್ಟಿ ಎಂಬ ಹೆಸರು ಬಂತು ಇವರ ಪ್ರಕಾರ ಬಣಜಿಗರು ಎಂದರೆ ಹಾಸಿಗೆ ಇದ್ದಷ್ಟು ಕಾಲು ಚಾಚುವ ಮಂದಿ ತಮ್ಮ ವ್ಯಾಪಾರ ವಹಿವಾಟದಿಂದ ಎಲ್ಲರಿಗೂ ಬೇಕಾದವರು.
ಬಣಜಿಗರ ಕುಟುಂಬಗಳು ಕರ್ನಾಟಕ, ಆಂದ್ರ ಮತ್ತು ಮಹಾರಾಷ್ಟ್ರದಲ್ಲಿವೆ ಇವರಲ್ಲಿ ಪಂಚಮ ಬಣಜಿಗರು ಜೈನ ಬಣಜಿಗರು ತೆಲಗು ಬಣಜಿಗರು ಎಂಬ ಪಂಗಡಗಳಿವೆ. ರಾಜ ಮಹಾರಾಜರ ಕಾಲದಲ್ಲಿ ಬಣಜಿಗರು ಅತ್ಯಂತ ಪ್ರಭಾವಶಾಲಿಗಳಾಗಿದ್ದರು ರಾಜನ ಆಸ್ಥಾನಗಳಿಗೆ ಇವರೇ ಆಧಾರ ಸ್ಥಂಭಗಳಾಗಿದ್ದರು ದೇಶದ ಸಮಸ್ತ ವ್ಯಪಾರ ಮತ್ತು ವಹಿವಾಟು ಇವರ ಕೈಯಲ್ಲಿದ್ದದ್ದರಿಂದ ರಾಜನ ಮೇಲೆ ಪ್ರಭಾವ ಬೀರುವರಾಗಿದ್ದರು ರಾಜನೊಂದಿಗೆ ಸ್ನೇಹದಿಂದಿದ್ದ ಇವರು ನಾಡಿನ ಏಳಿಗೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
ಮೋದಲೇ ಹೇಳಿದಂತೆ ವ್ಯಾಪಾರವೇ ಲಿಂಗಾಯತ ಬಣಜಿಗರ ಮೂಲ ಕಸಬು ಇವರು ಎತ್ತು ಕೋಣ ಕತ್ತೆಗಳ ಮೇಲೆ ಸರಕು ಹೊತ್ತೊಯ್ದು ಮಾರಾಟ ಮಾಡುತಿದ್ದರು ಸಂತೆ ಪಟ್ಟಣ ಪ್ರದೇಶಗಳು ಇವರ ವ್ಯಾಪಾರ ಪ್ರದೇಶಗಳಾಗಿದ್ದವು ಸರಕು ಹೇರಿಕೊಂಡು ಹೋಗುತ್ತಿರುವುದರಿಂದ ಹೇರುವ ಬಣಜಿಗ ಹೇರುವ ಶೆಟ್ಟಿ ಎಂದು ಈ ಸಮುದಾಯವನ್ನು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಕೆಲವುಕಡೆ ಎತ್ತಿನ ಬಣಜಿಗರು ಕೋಣದ ಶೆಟ್ಟರು ಕತ್ತೆಯ ಶೆಟ್ಟಿಯರು ಎಂದು ಪ್ರಸಿದ್ದರಾಗಿದ್ದರು ಇತ್ತೀಚಿಗೆ ವ್ಯಾಪಾರ ಬಿಟ್ಟು ಕೆಲವರು ಬೇಸಾಯ ಮತ್ತಿತರ ಚಟುವಟಿಕೆಗಳ ಕಡೆಗೆ ವಾಲಿದ್ದಾರೆ.
ನಾವು ಬಸವಣ್ಣನ ಸಂಪ್ರದಾಯದವರು ಬಸವೇಶ್ವರ ಸಂತತಿಯವರು ಎಂದು ಲಿಂಗಾಯತ ಬಣಜಿಗರು ಕರೆದುಕೊಳ್ಳುತ್ತಾರೆ ಹೀಗಾಗಿ ಬಸವ ಸಂಪ್ರದಾಯದ ವಿರಕ್ತ ಪೀಠಗಳಿಗೆ ಹೆಚ್ಚಾಗಿ ನಡೆದುಕೊಳ್ಳುತ್ತಾರೆ ಒಟ್ಟಾರೆ ಇವರು ಬಸವ ಆರಾಧಕರು ಈ ಸಮುದಾಯವನ್ನು ಗುರುತಿಸುವಲ್ಲಿ ಅಡ್ಡ ಹೆಸರು ಪ್ರಮುಖ ಪಾತ್ರ ವಹಿಸುತ್ತವೆ. ಈ ಅಡ್ಡ ಹಸರೇ ಮನೆತನದ ಹೆಸರುಗಳಾಗಿ ಬಳಕೆಯಲ್ಲಿವೆ. ಈ ಪದ್ದತಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿವೆ ಈ ಹೆಸರುಗಳಿಂದ ಜಾತಿ ಮತ್ತು ವೃತ್ತಿಯನ್ನು ಗುರುತಿಸಬಹುದು.
ಲಿಂಗಾಯತ ಬಣಿಜಿಗ ಸಮಾಜದಲ್ಲಿ ಅನೇಕ ಶರಣ ಶರಣೆಯರು ಮಠಾಧೀಶರು ಪವಾಡ ಪುರುಷರು ಸಾಹಿತಿಗಳು ಶಿಕ್ಷಣ ತಜ್ಞರು ವಿಜ್ಞಾನಿಗಳು ವೈಧ್ಯರು ರಾಜಕಾರಣಿಗಳು ಇದ್ದಾರೆ ಸುವರ್ಣ ವ್ಯಾಪಾರಿ ಸೌರಾಷ್ಟ್ರದ ಆದಯ್ಯ ನಿರ್ಮಲ ಶೆಟ್ಟಿಯ ಪುತ್ರಿ ಅಕ್ಕ ಮಹಾದೇವಿ ಎಡೆಯೂರ ಶ್ರೀ ಸಿದ್ದಲಿಂಗೇಶ್ವರ, ಕೊಡೆಕಲ್ ಬಸವಣ್ಣ, ಕಲಬುರಗಿಯ ಶ್ರೀ ಶರಣಬಸವೇಶ್ವರರು ಹುಬ್ಬಳ್ಳಿಯ ಮೂರು ಸಾವಿರ ಮಠದ ಕರ್ತೃ ಶ್ರೀ ಗುರುಸಿದ್ದೇಶ್ವರರು ಬೆಂಗಳೂರಿನ ಶ್ರೀ ಸರ್ಪಭೂಷಣ ಶಿವಯೋಗಿಗಳು ಅಥಣಿಯ ಗಚ್ಚಿನ ಮಠದ ಶ್ರೀ ಸಿದ್ದಲಿಂಗ ಅಪ್ಪರವರು ಮೈಲಾರದ ಬಸವಲಿಂಗ ಶರಣರು ಹುಬ್ಬಳ್ಳಿಯ ಶ್ರೀ ಸಿದ್ದಾರೂಡರು ಸೊಲ್ಲಾಪುರದ ಶ್ರೀ ಕೀರಿಟೇಶ್ವರ ಮಠದ ಶ್ರೀ ಚನ್ನಬಸವ ಸ್ವಾಮಿಗಳು ಸಿಂದಗಿಯ ಸಾರಂಗ ಮಠದ ಶ್ರೀ ಚನ್ನವೀರ ಸ್ವಾಮಿಗಳು, ಬಸವನ ಬಾಗೇವಾಡಿಯ ಶ್ರೀ ಗುರುಪಾದೇಶ್ವರ ಮಹಾರಾಜರು ಮುರಗೋಡ ಮಹಾದೇವಪ್ಪ ಮಹಾರಾಜರು ಮತ್ತು ನವಲಗುಂದದ ಶ್ರೀ ಹುರಕಡ್ಲಿ ಅಜ್ಜನವರು ಇನ್ನು ಮುಂತಾದವರು ಬಣಜಿಗ ಲಿಂಗಾಯತ ಪಂಗಡಕ್ಕೆ ಸೇರಿದ್ದರೂ ಆದ್ಯಾತ್ಮ ಸಾಧನೆ ಸಿದ್ದಿಗಳಿಂದ ಗುರುಗಳಾಗಿ ದೇವರಾಗಿ ಪೂಜೆಗೊಳ್ಳುತಿದ್ದಾರೆ.
ಸಮಾಜ ಸೇವಕರು ಮತ್ತು ಕೊಡುಗೈದಾನಿಗಳಾಗಿದ್ದ ಬೆಂಗಳೂರಿನ ಎಲೆ ಮಲ್ಲಪ್ಪ ಶೆಟ್ಟರು ಗುಬ್ಬಿ ತೋಟದಪ್ಪರವರು ಇದೇ ಸಮಾಜಕ್ಕೆ ಸೇರಿದವರೆಂಬುದು ಮತ್ತೊಂದು ವಿಶೇಷ. ಈ ಇಬ್ಬರು ದಾನಿಗಳ ಹೆಸರು ಇಂದಿಗೂ ಜನ ಮಾನಸದಲ್ಲಿ ಚಿರಪರಿಚಿತ ಎಂಬುದರಲ್ಲಿ ಎರಡು ಮಾತೇ ಇಲ್ಲ. ಎಸ್ ನಿಜಲಿಂಗಪ್ಪ, ಬಿ.ಡಿ.ಜತ್ತಿ,ಎಸ್. ಆರ್.ಕಂಠಿ, ವಿರೇಂದ್ರ ಪಾಟೀಲ,ಜೆ.ಎಚ್. ಪಟೇಲ್ ಬಿ.ಎಸ್.ಎಡಿಯೂರಪ್ಪ, ಜಗದೀಶ ಶೆಟ್ಟರ್ ಅವರುಗಳು ಮುಖ್ಯಮಂತ್ರಿಗಳಾಗಿ ರಾಜ್ಯಭಾರ ಮಾಡಿದ್ದಾರೆ.
ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ್ ಕೇಂದ್ರ ಮಾಜಿ ಸಚಿವ ಶಿವರಾಜ ಪಾಟೀಲ್ ಸಹ ಇದೇ ಸಮುದಾಯಕ್ಕೆ ಸೇರಿದವರು. ಅಲ್ಲಂ ವೀರಭದ್ರಪ್ಪ, ಶಿವಾನಂದ ಕೌಜಲಗಿ, ಉಮೇಶ ಕತ್ತಿ,ಪ್ರಕಾಶ ಹುಕ್ಕೇರಿ, ಕೆ.ಎಂ, ಪಟ್ಟಣಶೆಟ್ಟಿ, ಎಂ.ಕೆ. ಪಟ್ಟಣಶೆಟ್ಟಿ ಇತರ ಪ್ರಮುಖ ರಾಜಕಾರಣಿಗಳು ಹಲವಾರು ಪ್ರಮುಖರು ಸಮಾಜದಲ್ಲಿದ್ದಾರೆ. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹೇಳಿಕೊಳ್ಳುವಂತಹ ಅಭಿವೃದ್ದಿಯೇನು ಆಗಿಲ್ಲ ಜಾತಿ ಪಟ್ಟಿಯಲ್ಲಿ 2ಎ ವರ್ಗಕ್ಕೆ ಸೇರಿರುವ ಲಿಂಗಾಯತ ಬಣಜಿಗ ಸಮಾಜ ಶೇ.,70ರಷ್ಟು ಜನರು ಪರವಾಗಿಲ್ಲ 30 ರಷ್ಟು ಜನರು ಮಾತ್ರ ಮದ್ಯಮ ವರ್ಗಕ್ಕೆ ಸೇರಿದವರು ಮತ್ತು ಬಡವರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…