‘ಕಲ್ಯಾಣ ಪ್ರಭೆ’ ಅಭಿನಂದನಾ ಗ್ರಂಥ ಲೋಕಾರ್ಪಣೆ

0
131

ಕಲಬುರಗಿ: ರಾಜ್ಯದಲ್ಲಿ ೭೦೦ ಗ್ರಂಥಾಲಯ ಕಟ್ಟಡ ನಿರ್ಮಿಸಿ ಗ್ರಾಮಾಂತರ ಪ್ರದೇಶದಲ್ಲೂ ಓದುವ ಸಂಸ್ಕೃತಿ ಹೆಚ್ಚಿಸಿದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶಕುಮಾರ ಹೊಸಮನಿ ಅವರ ಕಾರ್ಯವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಶ್ಲಾಘಿಸಿದರು.

ನಗರದ ಎಸ್. ಎಂ. ಪಂಡಿತ ರಂಗಮಂದಿರದಲ್ಲಿ ಮಹಾಂತ ಜ್ಯೋತಿ ಪ್ರತಿಷ್ಠಾನ,ಕಲ್ಯಾಣ ಕರ್ನಾಟಕ ಗ್ರಂಥಪಾಲಕರ ಸಂಘ ಹಾಗೂ ಡಾ. ಸತೀಶಕುಮಾರ ಎಸ್. ಹೊಸಮನಿ ಅಭಿನಂದನಾ ಸಮಿತಿಯ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶಕುಮಾರ ಎಸ್. ಹೊಸಮನಿ ಅವರ ಜನ್ಮದಿನ ಸುವರ್ಣ ಮಹೋತ್ಸವ ಹಾಗೂ ‘ಕಲ್ಯಾಣ ಪ್ರಭೆ’ ಅಭಿನಂದನಾ ಗ್ರಂಥ ಸಮರ್ಪಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಗ್ರಂಥಾಲಯ ಜನಸ್ನೇಹಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಗ್ರಾಮೀಣ ಭಾಗದಲ್ಲಿ ಪುಸ್ತಕ ಸಂಸ್ಕೃತಿ, ಓದುವ ಅಭಿರುಚಿ ಬೆಳೆದಿದೆ. ಗ್ರಾಮ ಪಂಚಾಯತಿಯ ಗ್ರಂಥಾಲಯಗಳಲ್ಲಿ ಓದುಗರು ಕಿಕ್ಕಿರಿದು ತುಂಬಿರುವುದಕ್ಕೆ ಇದಕ್ಕೆ ಸಾಕ್ಷಿ ಎಂದು ಬಣ್ಣಿಸಿದರು. ನಾಡೋಜ ಡಾ. ಸಿದ್ದಲಿಂಗಯ್ಯ ಹಾಗೂ ಕೇಂದ್ರೀಯ ವಿವಿ ಕುಲಪತಿ ಪ್ರೊ ಎಚ್.ಎಂ. ಮಹೇಶ್ವರಯ್ಯ ಮೊದಲಾದವರು ಮಾತನಾಡಿದರು. ಶ್ರೀಶೈಲ್ ಜಗದ್ಗುರು ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಖೇಳಗಿ(ಬಿ)ಯ ಶಿವಲಿಂಗ ಸ್ವಾಮೀಜಿ, ಅಣದೂರಿನ ವರಜ್ಯೋತಿ ಬಂತೇಜಿ, ಬುದ್ಧ ವಿಹಾರದ ಸಂಘಾನಂದ ಬಂತೇಜಿ ಸಾನಿಧ್ಯವಹಿಸಿದ್ದರು. ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ್ ಅಧ್ಯಕ್ಷತೆವಹಿಸಿದ್ದರು. ಇದೇ ವೇಳೆಗೆ ಮಾಧವನ್ ರಚಿತ ಕಲ್ಯಾಣ ಪ್ರಭೆ ಸಾಕ್ಷ್ಯಚಿತ್ರ, ವಿಶೇಷ ಸಂಚಿಕೆಗಳು ಹಾಗೂ ಡಿವಿಡಿ ಬಿಡುಗಡೆ ಮಾಡಲಾಯಿತು.

ಗುಲಬರ್ಗಾ ವಿವಿ ಗ್ರಂಥಾಲಯ ವಿಭಾಗದ ಮುಖ್ಯಸ್ಥ ಡಾ. ವಿ.ಟಿ. ಕಾಂಬಳೆ,ವೇದಿಕೆ ಮೇಲೆ ವಿಧಾನಪರಿಷತ್ ಮಾಜಿ ಸದಸ್ಯ ಮಾರುತಿರಾವ್ ಡಿ. ಮಾಲೆ, ದಲಿತ ಮುಖಂಡ ಡಿ.ಜಿ. ಸಾಗರ್, ಬೆಂಗಳೂರಿನ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ ಡಾ. ಪಿ.ವಿ. ಕೊಣ್ಣೂರ್, ಕಲ್ಯಾಣ ಕರ್ನಾಟಕ ಗ್ರಂಥಪಾಲಕರ ಸಂಘದ ಅಧ್ಯಕ್ಷ ಡಾ. ಸುರೇಶ ಜಂಗೆ, ಅಭಿನಂದನಾ ಸಮಿತಿ ಗೌರವ ಅಧ್ಯಕ್ಷ ಬಸವರಾಜ್ ಕೊನೇಕ್, ಅಭಿನಂದನಾ ಸಮಿತಿ ಅಧ್ಯಕ್ಷ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ಡಾ. ಅಜಯಕುಮಾರ, ಸತೀಶಕುಮಾರ ತಂದೆಯವರಾದ ಶಂಭುಲಿಂಗ ಎಸ್. ಹೊಸಮನಿ ಸೇರಿದಂತೆ ಕುಟುಂಬಸ್ಥರು ಹಾಜರಿದ್ದರು. ಡಾ. ಶಿವರಾಜ್ ಪಾಟೀಲ್ ಅಭಿನಂದನ ಭಾಷಣ ಮಾಡಿದರು. ಅಭಿನಂದನಾ ಸಮಿತಿ ಸಂಚಾಲಕ ಡಾ. ಗವಿಸಿದ್ದಪ್ಪ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here