ಕಾಯಕ ಕಾಲೇಜಿನಿಂದ 40 ವಿದ್ಯಾರ್ಥಿಗಳ ದತ್ತು

0
108

ಕಲಬುರಗಿ: ಇಲ್ಲಿನ ಪ್ರತಿಷ್ಠಿತ ಕಾಯಕ ಫೌಂಡೇಷನ್ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜು ಮತ್ತು ಕಾಯಕ ಫೌಂಡೇಷನ್ ಏಜುಕೇಷನಲ್ ಟ್ರಸ್ಟ್ ವತಿಯಿಂದ ಎಸ್‌ಎಸ್‌ಎಲ್‌ಸಿ (ರಾಜ್ಯ ಮತ್ತು ಸಿಬಿಎಸ್‌ಇ) ಪರೀಕ್ಷೆಯನ್ನು ಬರೆದಿರುವ ಗ್ರಾಮಾಂತರ ಭಾಗದ 40 ಜನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಓಡಿಸಲಾಗುವುದು ಎಂದು ಸಂಸ್ಥಾಪಕ ಶಿವರಾಜ ಟಿ.ಪಾಟೀಲ್ ಮತ್ತು  ಅಧ್ಯಕ್ಷರಾದ ಸಪ್ನಾರಡ್ಡಿ ಪಾಟೀಲ್ ತಿಳಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಗ್ರಾಮೀಣ ಮತ್ತು ನಗರದ ಪ್ರದೇಶದ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿದ್ದರೂ ಕೂಡಾ ಆರ್ಥಿಕ ಸ್ಥಿತಿ ಸರಿಯಾಗಿರದ ಕಾರಣ ಓದಿನಿಂದ ವಂಚಿತರಾಗುತ್ತಿರುವುದು ಗಮನಕ್ಕೆ ಬಂದಿರುವುದರಿಂದ ಪ್ರತಿಭೆಗಳು ಕಮರಿ ಹೋಗಬಾರದು ಎಂಬ ಕಾರಣದಿಂದ  ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ತೆಗೆದುಕೊಂಡು ಅವರಿಗೆ ಉಚಿತ ಪ್ರವೇಶ ಹಾಗೂ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

28ರಂದು ಕಾಯಕ ಟ್ಯಾಲೆಂಟ್ ಹಂಟ್ ಪರೀಕ್ಷೆ: ಎಸ್‌ಎಸ್‌ಎಲ್‌ಸಿಯನ್ನು ರಾಜ್ಯ ಮತ್ತು ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಓದಿ ಪರೀಕ್ಷೆಯನ್ನು ಬರೆದಿರುವ ವಿದ್ಯಾರ್ಥಿಗಳಿಗಾಗಿ ಕಾಯಕ ಟ್ಯಾಲೆಂಟ್ ಹಂಟ್ ಪರೀಕ್ಷೆಯನ್ನು ಏ.28 ರಂದು ಬೆಳಗ್ಗೆ 10 ಗಂಟೆಗೆ ಕಲಬುರಗಿ ನಗರದ  ಕೆಸರಟಗಿ ರಸ್ತೆಯಲ್ಲಿರುವ ಕಾಯಕ ಫೌಂಡೇಷನ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದವರೆಲ್ಲರು ಈ ಪರೀಕ್ಷೆಯನ್ನು ಬರೆಯಬಹುದಾಗಿದೆ. ಈ ಪರೀಕ್ಷೆ ಬರೆಯಲು ಆಸಕ್ತರು ಹೆಸರು ನೋಂದಾಯಿಸಿಕೊಳ್ಳಲು 8151981713, 9900434888 ಇಲ್ಲವೇ 9686569898ಅಥವಾ 9972571423 ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥಾಪಕ ಶಿವರಾಜ ಟಿ.ಪಾಟೀಲ್ ಮತ್ತು ಪ್ರಾಚಾರ್ಯ ಗುರುಬಸಯ್ಯ ಸಾಲಿಮಠ ತಿಳಿಸಿದ್ದಾರೆ.

ಗ್ರಾಮೀಣ ಭಾಗದ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಓದಿರುವ ಮಕ್ಕಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು. ಟ್ಯಾಲೆಂಟ್ ಹಂಟ್ ಪರೀಕ್ಷೆಯನ್ನು ನಡೆಸುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆದುಕೊಂಡ ಎಲ್ಲ ವಿದ್ಯಾರ್ಥಿಗಳಿಗೆ ಸುಮಾರು ೨೫ ಲಕ್ಷ ರೂ.ಗಳ ಸ್ಕಾಲರ್ ಶಿಫ್ ನೀಡುವ ಮೂಲಕ ಅವರ ಮುಂದಿನ ಉನ್ನತ ಶಿಕ್ಷಣ ಕಲಿಕೆಗೂ ಅನುವು ಮಾಡಿಕೊಡುವ ಕಾರ್ಯಯೋಜನೆ ಕಾಯಕ ಫೌಂಡೇಷನ್ ಮುಂದಿದೆ.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ೪೦ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳಲು ಉzಶಿಸಲಾಗಿದೆ. ಒಂದು ವೇಳೆ ಇನ್ನೂ ಹೆಚ್ಚಿನ ಅರ್ಹರು ಬಂದಲ್ಲಿ  ೫೦ ಜನರಿಗೆ ಅವಕಾಶ ನೀಡಲಾಗುವುದು ಎಂದು ಶಿವರಾಜ ಪಾಟೀಲ್ ತಿಳಿಸಿದ್ದಾರೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here