ಕಲಬುರಗಿ: ಚಿಂಚೋಳಿ ಕ್ಷೇತ್ರದ ಮಾಜಿ ಶಾಸಕ ಸುನಿಲ್ ವಲ್ಯಾಪುರಗೆ ಟಿಕೆಟ್ ಕೈ ತಪ್ಪಿರುವುದಕ್ಕೆ ವಲ್ಯಾಪುರ ಬೆಂಬಲಿಗರು ಬಿಜೆಪಿ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ನಗರದ ಸರದಾರ ವಲ್ಲಭಾಯಿ ಪಟೇಲ್ ವೃತದಲ್ಲಿ ಪ್ರತಿಭಟನೆಯ ನಡೆಸಿದ ಬೆಂಬಲಿಗರು, ಸುನಿಲ್ ವಲ್ಯಾಪುರ 2 ಬಾರಿ ಶಾಸಕರಾಗಿ ಆಯ್ಕೆ ಹಲವಾರು ಜನಪರ ಕೆಲಸವನ್ನು ಮಾಡುವ ಮೂಲಕ 30 ವರ್ಷಗಳಿಂದ ಪಕ್ಷವನ್ನು ಬಲಪಡಿಸಿದ್ದಾರೆ. ವಲ್ಯಾಪುರ ಅವರಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡದಿರುವುದರಿಂದ ಭೋವಿ (ವಡರ್) ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ವಲ್ಯಾಪುರೆ ಅವರ ಬೆಂಬಲಿಗರು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು.
ಪ್ರತಿಭಟನೆಯಲ್ಲಿ ಭೋವಿ ಸಮಾಜದ ಮುಖಂಡ ನಾಗೇಂದ್ರಪ್ಪ ನಂದಿಕುಮಾರ, ರಾಜು ಯಾಕಪೂರ, ದಶರಥ ಜಾಗಲೆ, ಮನೋಜ ಜಾಧವ, ಅರ್ಜುನ್ ಜಾಧವ್, ತೀಮ್ಮಯ್ಯಾ ಶಿರನೂರ, ಹಣಮಂತ ಜೇವರ್ಗಿ, ಸಿದ್ದಣ್ಣ ನಂದಿಕೂರ, ಸಂಜು ಮಂಜಳಕರ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.