ಸುರಪುರ: ತಾಲೂಕಿನ ಮಾಚಗುಂಡಾಳ ಗ್ರಾಮದಲ್ಲಿ ಶನಿವಾರದಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಗ್ರಾಮ ಶಾಖೆ ಉದ್ಘಾಟಿಸಿ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ವೇದಿಕೆಯ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಭೈರಿಮಡ್ಡಿ ಮಾತನಾಡಿ ಸಂಘಟನೆಯು ಕನ್ನಡ ಭಾಷೆ, ನೆಲ, ಜಲ ರಕ್ಷಣೆಯ ಕೆಲಸಗಳ್ಲಿ ತೊಡಗಿಸಿಕೊಂಡಿದ್ದು ಕನ್ನಡಿಗರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದು ನೂತನ ಪದಾಧಿಕಾರಿಗಳು ಕನ್ನಡ ಪರ ಹೋರಾಟಕ್ಕೆ ಮುಂದಾಗಬೇಕು ಎಂದು ಅವರು ಹೇಳಿದರು, ಗ್ರಾಮ ಶಾಖೆಯ ಪದಾಧಿಕಾರಿಗಳು ವೇದಿಕೆಯ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ನಡೆದುಕೊಳ್ಳಬೇಕು. ಸಂಘಟನೆಯ ಕನ್ನಡ ಪರ ಹೋರಾಟಗಳಲ್ಲಿ ಸದಾ ಸಿದ್ಧರಿರಬೇಕು ಎಂದು ಕರೆ ನೀಡಿದರು
ಈ ಸಂದರ್ಭದಲ್ಲಿ ಪ್ರಮುಖರಾದ ಹಣಮಗೌಡ ಶಖಾಪುರ, ಹಣಮಂತ ಹಾಲಗೇರಿ, ಕೃಷ್ಣ ಮಂಗಿಹಾಳ, ಆನಂದ ಮಾಚಗುಂಡಾಳ, ಶ್ರೀನಿವಾಸ ಭೈರಿಮಡ್ಡಿ, ಅಯ್ಯಪ್ಪ ವಗ್ಗಾಲಿ, ಶ್ರವಣಕುಮಾರ ನಾಯಕ, ಪ್ರಭು ಮಂಗಿಹಾಳ, ದೇವಪ್ಪ ಮಾಚಗುಂಢಾಳ, ಮಲ್ಲಿಕಾರ್ಜುನ ಭೈರಿಮಡ್ಡಿ, ರಂಗನಾಥ ಕವಡಿಮಟ್ಟಿ, ಭೀಮರಾಯ ಬಾದ್ಯಾಪುರ, ಚನ್ನಪ್ಪ ಹಾಲಗೇರಿ ಇದ್ದರು.
ಗ್ರಾಮ ಶಾಖೆ ಪದಾಧಿಕಾರಿಗಳು: ದೇವಿಂದ್ರಪ್ಪ ನಾಟೇಕಾರ (ಗೌರವಾಧ್ಯಕ್ಷ), ಭೀಮರಾಯ ಪೂಜಾರಿ (ಅಧ್ಯಕ್ಷ), ದೇವಿಂದ್ರಪ್ಪಗೌಡ (ಉಪಾಧ್ಯಕ್ಷ), ಕೃಷ್ಣಪ್ಪ ನಾಟೇಕಾರ (ಪ್ರಧಾನ ಕಾರ್ಯದರ್ಶಿ), ಬಸವರಾಜ ಪುಜಾರಿ (ಸಹ ಕಾರ್ಯದರ್ಶಿ), ಭೀಮನಗೌಡ, ರಾಘವೇಂದ್ರ ನಾಟೇಕಾರ (ಸಂಘಟನಾ ಕಾರ್ಯದರ್ಶಿಗಳು), ಭೀಮಣ್ಣ ರಾಮನಗೌಡ (ಸಹ ಸಂಘಟನಾ ಕಾರ್ಯದರ್ಶಿ), ಯಂಕಪ್ಪ ಚನ್ನೂರ (ಪ್ರಧಾನ ಸಂಚಾಲಕ), ದೇವಿಂದ್ರಪ್ಪ ಪುಜಾರಿ (ಸಂಚಾಲಕ), ಮಲ್ಲಪ್ಪ ನಾಟೇಕಾರ (ಖಜಾಂಚಿ) ಆಯ್ಕೆಗೊಳಿಸಲಾಯಿತು.