ನಿನ್ನ ಜಾತಿ, ನಿನ್ನ ಧರ್ಮದ ಹಿನ್ನೆಲೆ ನಿನ್ನನ್ನು ಶೂರನಾಗಿಸಲಿಲ್ಲ. ನಿನ್ನಲ್ಲಿ ಕುದಿಯುತ್ತಿದ್ದ ನಿನ್ನ ರಕ್ತ ಸಾಮ್ರಾಜ್ಯಶಾಹಿಯ ವಿರುದ್ಧ ನಿನ್ನನ್ನ ಸಿಡಿದೆಬ್ಬಿಸಿತು. ನಿನ್ನ ರಕ್ತಕ್ಕೆ ಶೌರ್ಯ ತುಂಬಿದ್ದು ನಿನ್ನಲ್ಲಿದ್ದ ಅರಿವು. ರಕ್ತದ ಮೂಲಕ ಜಾತಿ-ಧರ್ಮಗಳನ್ನು ಕಂಡುಹಿಡಿಯುವ ಅತಿಮಾನುಷರು ಭೂಮಿಯ ಮೇಲಿನ್ನು ಉದಯಿಸಿಲ್ಲ. ಅದು ಸಾಧ್ಯವೂ ಇಲ್ಲ. ಪ್ರಾಣಿ ರಕ್ತ, ಮನುಷ್ಯ ರಕ್ತಗಳನ್ನು ಕಂಡುಹಿಡಿಯಬಹುದಷ್ಟೇ ಹೊರತು ಹಿಂದು, ಮಸ್ಲಿಂ, ಕ್ರೈಸ್ತ, ಪಾರಸಿ, ಬೌದ್ಧ ರಕ್ತಗಳನ್ನಲ್ಲ.
ಹುಲಿಯ ಜೊತೆ ಸರಸವಾಡಿದ ನಿನಗೆ ಪ್ರಾಣಿಗಳ ಅರಚಾಟದಿಂದ ಯಾವ ಕಳಂಕವೂ ಮೆತ್ತಿಕೊಳ್ಳಲಾಗದು. ರಾಕೆಟ್ ಬಗ್ಗೆ ಕುತೂಹಲಿಯಾಗಿದ್ದ ನಿನ್ನನ್ನು ಅಭಿವೃದ್ಧಿಯ ಹರಿಕಾರನೆಂದೂ ಜರೆಯನು, ನೀರಾವರಿಗೆ ಹಾತೊರೆದ ನಿನ್ನನ್ನು ಯಾವ ರೈತನು ಮರೆಯನು, ಮಕ್ಕಳನ್ನು ಅಡವಿಟ್ಟು ಸಾಮ್ರಾಜ್ಯಶಾಹಿಗೆ ಉತ್ತರ ಕೊಟ್ಟ ನಿನ್ನನ್ನು ಯಾವ ದೇಶಪ್ರೇಮಿಯು ಮತ್ತೊಮ್ಮೆ ಬಲಿಕೊಡನು, ಯುದ್ಧ ಭೂಮಿಯಲ್ಲಿ ಹುತಾತ್ಮನಾದ ನೀನು ಭಾರತದ ಹೆಮ್ಮೆಯ ಪುತ್ರ. ಈ ನೆಲದಲ್ಲಿ ಸಾಮ್ರಾಜ್ಯಶಾಹಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಧೀರ. ದೇಶ ಪ್ರೀತಿಸುವ ಎಲ್ಲರೆದೆಗಳಲ್ಲಿ ನೀನೆಂದೂ ಅಜರಾಮರ.
ನೀನು ಬ್ರಿಟಿಷರಿಗೆ ತಪ್ಪೊಪ್ಪಿಗೆ ಬರೆದು ದಾಸನಾಗಲಿಲ್ಲವಲ್ಲ, ಒಳ ಒಪ್ಪಂದಗಳ ಕುತಂತ್ರಿಯಾಗಲಿಲ್ಲವಲ್ಲ, ತಾಯ್ನಾಡ ಬೆನ್ನಿಗೆ ಚೂರಿ ಇರಿಯಲಿಲ್ಲವಲ್ಲ, ಬಿಳಿತೊಗಲಿಗರ ಬೂಟು ನೆಕ್ಕಲಿಲ್ಲವಲ್ಲ. ದೇಶಪ್ರೇಮಕ್ಕಿನ್ನೇನಿದೆ ಮಾನದಂಡ.
ನಿನ್ನ ನೆನೆಯದ, ನಿನ್ನ ಅರಿಯದ, ನಿನ್ನ ಗೌರವಿಸದ ಜನರಿದ್ದರೆ ಅವರೇ ನಿಜವಾದ ದೇಶದ್ರೋಹಿಗಳು. ನಿನಗಿದೋ ಧೀರವಂದನೆ. #ಟಿಪ್ಪು ನೀ ನಮ್ಮವ. ಅಪ್ಪಟ ಭಾರತೀಯ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…