ಒಂಬತ್ತನೇ ದಿನಕ್ಕೆ ಕಾಲಿಟ್ಟ ಆಮ್ ಆದ್ಮಿ ಪಕ್ಷದ ಸತ್ಯಾಗ್ರಹ: ಕರವೇ ಹಾಗೂ ಶ್ರೀರಾಮ ಸೇನೆ ಬೆಂಬಲ

0
160

ಜೇವರ್ಗಿ: ಸರಕಾರಿ ಜಮೀನು ಒತ್ತುವರಿ ಸಂಬಂಧಿಸಿದಂತೆ ಕಳೆದ ಒಂಬತ್ತು ದಿನಗಳಿಂದ ಆಮ್ ಆದ್ಮಿ ಪಕ್ಷ ಜೇವರ್ಗಿ ತಾಲ್ಲೂಕು ಘಟಕದಿಂದ ಪಟ್ಟಣದಲ್ಲಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಮುಂದುವರಿದಿದೆ.

ತಾಲ್ಲೂಕಿನ ಬಾಬಾ ಸಹೇಬ್ ಅಂಬೇಡ್ಕರ್ ಮೂರ್ತಿಯ ಆವರಣದಲ್ಲಿ ಸರಕಾರಿ ಜಮೀನು ಒತ್ತುವರಿ ಮಾಡಿರುವ ಭೂಗಳ್ಳರ ವಿರುದ್ಧ ಪ್ರಕರಣ ದಾಖಲಿಸಿಬೆಂದು ಒತ್ತಾಯಿಸಿ, ಸತ್ಯಾಗ್ರಹ ನಡೆಸುತ್ತಿದ್ದು, ಅಧಿಕಾರಿಗಳು ಈ ಕುರಿತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ, ತಹಶೀಲ್ದಾರರು ಮತ್ತು ಪುರಸಭೆ ಅಧಿಕಾರಿಗಳು ಹೋರಾಟವನ್ನು ನಿರ್ಲಕ್ಷ್ಯಸುತ್ತಿದೆ ಎಂದು ಹೋರಾಟ ನಿರತ ಪಕ್ಷದ ಈರಣ್ಣಗೌಡ ಆರ್ ಪಾಟೀಲ ಗುಳ್ಯಾಳ ಅವರು ಆರೋಪಿಸಿದರು.

Contact Your\'s Advertisement; 9902492681

ಹೋರಾಟಕ್ಕೆ ಕರವೇ ಹಾಗೂ ಶ್ರೀರಾಮ ಸೇನೆ ಬೆಂಬಲ: ಕರ್ನಾಟಕ ರಕ್ಷಣ ವೇದಿಕೆ ಪ್ರಧಾನ ಕಾರ್ಯದರ್ಶಿ ಕಾಸಿನಾಥ ಮಂದೇವಾಲ. ತಾಲ್ಲೂಕು ಅದ್ಯಕ್ಷ ದೇವಿಂದ್ರ ಮಯೂರ, ಈಶ್ವರ ಹಿಪ್ಪರಗಿ, ಶ್ರೀ ರಾಮ್ ಸೇನೆ ಅದ್ಯಕ್ಷ. ನಿಂಗಣ್ಣಗೌಡ ರಾಸುಣಗಿ, ಅಶೋಕ ಸಿದ್ನಾಳ. ಪ್ರಕಾಶ ದೊಡ್ಡಮನಿ ರವರು ಭೇಟಿ ನೀಡಿ ಬೆಂಬಲ ಸೂಚಿಸಿದರು.

ಅಧಿಕಾರಿಗಳು ಹೋರಾಟ ಸ್ಥಳಕ್ಕೆ ಭೇಟಿ ನೀಡಿ ಸುಳ್ಳು ಆಸ್ವಾನೆ ನೀಡುವ ಮೂಲಕ ಹೋರಾಟದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ತಕ್ಷಣ ಉನ್ನತ ಅಧಿಕಾರಿಗಳು ಸ್ಪಂದಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವೆಕುಬುರಾವ ವಾಗಣಗೇರಿ, ಕರಣಪ್ಪಗೌಡ ಕೆಲ್ಲುರ.ಹಾಗೂ ಸಂಘಟನೆಯ ಸದಸ್ಯರಾದ ನೀಲಕಂಠಪ್ಪ ಜೇಟ್ಟೆಪ್ಪ ಮುತಕೋಡ, ನಾಗಣ್ಣಗೌಡ ಬಿರಾದಾರ ಮುತಕೊಡ ಭೇಟಿ ನೀಡಿ ಬೆಂಬಲ ಸೂಚಿಸಿದರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here