ಅಂಕಣ ಬರಹ

ಪ್ರಜಾಪ್ರಭುತ್ವ ಮತ್ತು  ಪ್ರಜೆಗಳ ಉಳಿವಿಗೆ ಬ್ಯಾಲೆಟ್ ಪೇಪರ್ ಮತದಾನ ಕಡ್ಡಾಯ ?

ಭಾರತದಲ್ಲಿ 2019 ರ ಲೋಕಸಭಾ ಚುನಾವಣೆ ಈಗಷ್ಟೇ ಪೂರ್ಣಗೊಂಡಿರುವುದು ಸರಿಯಷ್ಟೇ ಆದರೇ ಇವಿಎಂಗಳ ವಿರುದ್ಧ ಪ್ರಬಲವಾದ ಅಸಮಾಧಾನಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಆದರೆ ಅವೆಲ್ಲವೂ ಹ್ಯಾಕಿಂಗ್‌ನ ಸುತ್ತಲೂ ತಿರುಗುತ್ತಿವೆಯೇ ಹೊರತು, ಇವಿಎಂ ತಿರುಚುವಿಕೆಯ ಬಗ್ಗೆ ಅಲ್ಲ.

ಇತ್ತೀಚೆಗೆ ನಡೆದ 17ನೇ ಲೋಕಸಭಾ ಚುನಾವಣೆಯಲ್ಲಿ, ದೇಶದ ಹಲವೆಡೆ, ಇವಿಎಂಗಳಲ್ಲಿ ಎಣಿಕೆಯಾದ ಮತಗಳು ಚಲಾವಣೆಯಾದ ನೈಜ ಮತಗಳಿಗಿಂತ ಅಧಿಕವಾಗಿದ್ದವು. ಇಲ್ಲಿ ಉದ್ಭವಿಸುವ ಪ್ರಶ್ನೆಯೇನೆಂದರೆ ಈ ಹೆಚ್ಚುವರಿ ಮತಗಳು ಯಾರ ‘ಖಾತೆಗೆ’ ಹೋಗಿವೆಯೆಂಬುದಾಗಿದೆ. ಚುನಾವಣೆಗಳಿಗೆ ಸಂಬಂಧಿಸಿ ಸ್ಪಷ್ಟವಾದ ಅಂಕಿಸಂಖ್ಯೆಗಳನ್ನು ಪ್ರಕಟಿಸಲು ಭಾರತೀಯ ಚುನಾವಣಾ ಆಯೋಗಕ್ಕೆ ಯಾಕೆ ಈವರೆಗೆ ಸಾಧ್ಯವಾಗಿಲ್ಲ?. ಚುನಾವಣೆ ಫಲಿತಾಂಶ ಪ್ರಕಟವಾಗಿ  ಸುಮಾರು ದಿನಗಳೇ ಕಳೆದರೂ ಈ ವಿವರಗಳು ಲಭ್ಯವಾಗದಿರುವುದು ನಿಜಕ್ಕೂ ಆಘಾತಕಾರಿ. ದೇಶದ ಜನತೆಗೆ ಇನ್ನೂ ಈ ಆಘಾತದಿಂದ ಹೊರಬರಲು ಸಾಧ್ಯವಾಗಿಲ್ಲ. ಹಲವಾರು ಮಂದಿ ಈ ವಿಷಯವಾಗಿ ನ್ಯಾಯಾಲಯದ ಮೆಟ್ಟಲೇರಲೂ ಬಹುದು. ಆದರೆ ಈ ಬಗ್ಗೆ ನ್ಯಾಯಾಲಯವು ಯಾವುದೇ ಕ್ರಾಂತಿಕಾರಿ ಆದೇಶ ಹೊರಡಿಸಬಹುದೆಂದು ನಾನು ಭಾವಿಸಲಾರೆ.

ಸಂಸ್ಥೆಗಳು ಮತದಾರರನ್ನು ರಕ್ಷಿಸಲು ವಿಫಲವಾದಾಗ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು ಇವಿಎಂಗಳ ವಿರುದ್ಧ ಅಭಿಯಾನವನ್ನು ನಡೆಸುವುದು ಬಹಳ ಮುಖ್ಯವಾದುದಾಗಿದೆ. ಚುನಾವಣೆಗಳಿಗೆ ಸರಕಾರಿ ನಿಧಿ ಒದಗಿಸುವಿಕೆ, ಇಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಸಮಾನ ಸಮಯಾವಕಾಶ, ಚುನಾವಣೋತ್ತರ ಸಮೀಕ್ಷೆಗಳಿಗೆ ನಿಷೇಧ, ಜನಾಭಿಪ್ರಾಯ ಸಮೀಕ್ಷೆಗಳಿಗೆ ನಿಷೇಧ, ಒಂದು ವಾರದ ಅವಧಿಯೊಳಗೆ ಸಂಪೂರ್ಣ ಚುನಾವಣೆ, ಮಾರನೆಯ ದಿನ ಮತಎಣಿಕೆ ಆರಂಭಿಸುವುದು ಸೇರಿದಂತೆ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಚುನಾವಣಾ ಸುಧಾರಣೆಯಾಗಬೇಕಾದ ಅಗತ್ಯವಿದೆ. ಪ್ರಜಾಪ್ರಭುತ್ವವನ್ನು ಉಳಿಸಲು ನಾವು ‘ಮತಪತ್ರದ ಮೂಲಕ ಮತದಾನ’ ವ್ಯವಸ್ಥೆಗೆ ಮರಳಬೇಕಾದ ಅಗತ್ಯವಿದೆ. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಜನತೆಯ ವಿಶ್ವಾಸವು ಮರುಸ್ಥಾಪನೆಯಾಗಲಿದೆ. ಮತಪತ್ರದ ಮೂಲಕ ಮತದಾನ ವ್ಯವಸ್ಥೆಯಲ್ಲೂ ಮತಗಟ್ಟೆ ವಶಪಡಿಸಿಕೊಳ್ಳುವ ವಿದ್ಯಮಾನಗಳು ನಡೆಯಬಹುದಾಗಿದೆ. ಆದರೆ ಚುನಾವಣಾ ಆಯೋಗವು ಈಗ ತನ್ನದೇ ಆದ ಕಟ್ಟುನಿಟ್ಟಿನ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುತ್ತದೆ. ಇದಕ್ಕಾಗಿ ಟಿ.ಎನ್.ಶೇಷನ್ ಅವರಿಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ. ಅವರ ಅಧಿಕಾರಾವಧಿಯಲ್ಲಿ ಚುನಾವಣಾ ಆಯೋಗವು ಸ್ವತಂತ್ರ ಹಾಗೂ ದೃಢವಾದ ನಿರ್ಧಾರಗಳನ್ನು ಕೈಗೊಂಡಿತ್ತು.

ಶೇಷನ್‌ರ ಆನಂತರ ಬಂದ ಚುನಾವಣಾ ಆಯುಕ್ತರು ಕೂಡಾ ಸಂಸ್ಥೆಗಳ ಸ್ವಾತಂತ್ರ ಹಾಗೂ ದೃಢತೆಯನ್ನು ಕಾಪಾಡಿದರು. ಆದಾಗ್ಯೂ, ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ, ಚುನಾವಣಾ ಆಯೋಗಕ್ಕೆ ಆಡಳಿತ ಪಕ್ಷದ ಮುಖಂಡರಿಂದ ನಡೆದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಸ್ಪಷ್ಟವಾದ ನಿಲುವನ್ನು ಕೈಗೊಳ್ಳಲು ಸಾಧ್ಯವಾಗದೆ ಹೋದುದು ನಿಜಕ್ಕೂ ಖೇದನೀಯ.

ವಿವಿಪ್ಯಾಟ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮತ ಎಣಿಕೆಗೆ ಬಳಸಿ ಕೊಳ್ಳದಿದ್ದರೂ ಸರಕಾರವು ಅವುಗಳಿಗಾಗಿ 14,000 ಕೋಟಿ ರೂ. ಖರ್ಚು ಏಕೆ ಮಾಡುತ್ತಿದೆಯೆಂಬುದೇ ತಿಳಿಯುತ್ತಿಲ್ಲ. ಒಂದೋ ವಿವಿಪ್ಯಾಟ್ ಮತಗಳನ್ನು ಸಂಪೂರ್ಣವಾಗಿ ಎಣಿಕೆ ಮಾಡಬೇಕು ಹಾಗೂ ಅದನ್ನು ಆಧರಿಸಿ ಅಭ್ಯರ್ಥಿಯ ಗೆಲುವನ್ನು ಘೋಷಿಸಬೇಕು. ಮತಪತ್ರಗಳ ಬಳಕೆಯಿಂದ ಮತಏಣಿಕೆ ವಿಳಂಬಗೊಳ್ಳುವುದೆಂಬ ಆಕ್ಷೇಪವು, ಇವಿಎಂ ಬಳಕೆಯನ್ನು ಸಮರ್ಥಿಸುವ ವಾದವೆನಿಸದು. ನಮಗೆ ಸಂಪೂರ್ಣ ಸುರಕ್ಷತೆ ಹಾಗೂ ಭದ್ರತೆಯ ಅಗತ್ಯವಿದೆ. ಈ ಸಂದರ್ಭದಲ್ಲಿ ನಮಗೆ ಮತದಾನ ವ್ಯವಸ್ಥೆಯ ಬಗ್ಗೆ ಕಳೆದುಹೋಗಿರುವ ಜನತೆಯ ನಂಬಿಕೆಯನ್ನು ಮರಳಿ ಪಡೆಯಬೇಕಾದ ಅಗತ್ಯವಿದೆ.

ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಲು ಹಾಗೂ ಬಲಪಡಿಸಲು ಜನರು ಚುನಾವಣಾ ಫಲಿತಾಂಶಕ್ಕಾಗಿ ಮೂರು ದಿನಗಳ ಮತ ಎಣಿಕೆಗೆ ಕಾಯಲೂ ಸಿದ್ಧರಿದ್ದಾರೆ. ಬ್ಯಾಲೆಟ್‌ಪೇಪರ್ ಮತದಾನದಿಂದಾಗಿ, ಚುನಾವಣೆ ಫಲಿತಾಂಶದ ಬಗ್ಗೆ ಯಾರೂ ಸಂದೇಹಪಡಲಾರರು ಹಾಗೂ ಚುನಾವಣಾ ಫಲಿತಾಂಶದ ಬಗ್ಗೆ ನಮಗೆ ಸಂಪೂರ್ಣ ಗೌರವ ಮೂಡಲಿದೆ. ಎರಡು ಮೂರು ದಿನಗಳ ಮತ ಎಣಿಕೆಯ ಬ್ಯಾಲೆಟ್‌ಪೇಪರ್ ಯುಗದ ಆ ದಿನಗಳನ್ನು ಕಂಡವರು ಮತ ಎಣಿಕೆಯ ಕೌತುಕ, ರಹಸ್ಯವನ್ನು ಅನುಭವಿಸಿದ್ದಾರೆ. ವ್ಯವಸ್ಥೆಯ ಬಗ್ಗೆ ಜನತೆಯ ನಂಬಿಕೆಯು ಅಬಾಧಿತವಾಗಿ ಉಳಿಯಲು ಹಾಗೂ ಪ್ರಜಾಪ್ರಭುತ್ವವು ರಕ್ಷಣೆಯಾಗಲು ಸರಕಾರ, ಪ್ರತಿಪಕ್ಷಗಳು ಹಾಗೂ ಭಾರತೀಯ ಚುನಾವಣಾ ಆಯೋಗವು ಒಂದು ಹಂತದಲ್ಲಿ ಸಹಮತವನ್ನು ಕೊಡಬೇಕೆಂದು ಪ್ರಜ್ಞಾಪೂರ್ವಕವಾಗಿ ಮನವಿ.

ಜಾಕೀರ್ ಹುಸೇನ್, ಕ.ರಾ.ಹಿಂ.ವ.ಜಾಗೃತ ವೇದಿಕೆ

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

4 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

11 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

11 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

11 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

22 hours ago