ಬಸವಕಲ್ಯಾಣ: ನವೆಂಬರ 23 ಮತ್ತು 24ರಂದು ನಡೆಯುವ ಅನುಭವ ಮಂಟಪ ಉತ್ಸವದ ನಿಮಿತ್ಯವಾಗಿ ಪರಮಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಮುಲಕ ಪ್ರಸಾರ, ಪ್ರಚಾರ ಕಾರ್ಯ ನಡೆದಿವೆ.
ಪೂಜ್ಯರ ನೇತೃತ್ವದಲ್ಲಿ ಮುಂಜಾನೆ 7 ಗಂಟೆಗೆ ಪಟ್ಟಣದ ಜೈಶಂಕರ ಕಾಲೋನಿಯಲ್ಲಿ ಬಸವಪ್ರಭಾತ ಫೇರಿಯನ್ನು ನಡೆಸಲಾಯಿತು. ಓಂ ಶ್ರೀ ಗುರುಬಸವಲಿಂಗಾಯ ನಮಃ ಎಂಬ ಮಂತ್ರಘೋಷದಿಂದ ಮುಂಜಾನೆಯ ವಾತಾವರಣ ಪ್ರಸನ್ನವಾಗಿತ್ತು ಒಣಿಯ ಅನೇಕ ಸದ್ಭಕ್ತರು ಬಸವಪ್ರಭಾತ ಫೇರಿಯ ಸ್ವಾಗತ ಹರ್ಷಭರಿತವಾಗಿ ಮಾಡಿದರು, ಪ್ರತಿಒಬ್ಬರು ಮನೆಯಮುಂದೆ ರಂಗೋಲಿಯನ್ನು ಹಾಕಿ ಶರಣುಬನ್ನಿ ಎಂಬ ಸ್ವಾಗತದ ನುಡಿಯನ್ನು ಬರೆಸಿ ಪುಷ್ಪವೃಷ್ಠಿ ಮಾಡಿದರು. ಪೂಜ್ಯರ ಜೊತೆಗೆ ಅನೇಕ ಹರ-ಚರ ಮೂರ್ತಿಗಳು, ಬಸವಭಕ್ತರು ಪಾಲ್ಗೊಂಡಿದ್ದರು.
ಪ್ರಭಾತಫೇರಿಯ ಮೂಲಕ ಅನುಭವ ಮಂಟಪ ಉತ್ಸವದ ಆಮಂತ್ರಣವನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಿ 2ದಿನ ನಡೆಯುವ ಉತ್ಸವದಲ್ಲಿ ಪಾಲ್ಗೊಳ್ಳಲು ವಿನಂತಿಸಿಕೊಂಡರು. ಇದೆ ರೀತಿಯಲ್ಲಿ ಪಟ್ಟಣದ ಬೇರೆ ಬೇರೆ ಒಣಿಗಳಲ್ಲಿ 21 ತಾರಿಕಿನವರೆಗೆ ಬಸವಪ್ರಭಾತ ಫೇರಿಯನ್ನು ಮುಂಜಾನೆ 7 ಗಂಟೆಗೆ ಜರುಗುತ್ತದೆ. ಆಸಕ್ತರು ಈ ಬಸವಪ್ರಭಾತ ಫೇರಿಯಲ್ಲಿ ಭಾಗವಹಿಸಿಬೇಕೆಂದು ವಿನಂತಿಸಲಾಗಿದೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…