ಬಿಸಿ ಬಿಸಿ ಸುದ್ದಿ

ನಡೆ-ನುಡಿ ಒಂದಾದರೆ ಪ್ರಯೋಜನಾ ಆಗಾಧವಾದುದು: ಶಿವರಾಜ ಅಂಡಗಿ

ಕಲಬುರಗಿ:  ನಡೆಯ ತಪ್ಪುಗಳನ್ನು ಜಾಣನುಡಿಗಳಲ್ಲಿ, ನುಡಿಯ ತಪ್ಪುಗಳನ್ನು ವಂಚನೆಯ ನಡೆಯಲ್ಲಿ ಮುಚ್ಚಿ ಹಾಕುವ ನಯ ವಂಚಕರ ಸಂತತಿ ಹಿಂದಿನಗಿಂತಲೂ ಇಂದು ಹೆಚ್ಚು ಸಕ್ರೀಯವಾಗಿರುವುದು. ನಾವು ನೋಡುತ್ತಿದ್ದೇವೆ ಎಂದು ವಚನೋತ್ಸವ ಪ್ರತಿಷ್ಠಾನ ಯುವ ಘಟಕದ ಅಧ್ಯಕ್ಷ ಶಿವರಾಜ ಎಸ್. ಅಂಡಗಿ ಕಳವಳ ವ್ಯಕ್ತಪಡಿಸಿದ್ದಾರೆ.

ರೊಟರಿ ಕ್ಲಬನಲ್ಲಿ ಸ್ವಚ್ಛ ಭಾರತ ಅಬಿಯಾನ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ವಚನೋತ್ಸವ ಪ್ರತಿಷ್ಠಾನ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ಮಾತನಾಡಿ, ಶರಣರು ತಮ್ಮ ನಡೆ-ನುಡಿ ಒಂದಾಗಿಸಿಕೊಂಡು ಇಡೀ ವಿಶ್ವಕ್ಕೆ ಮಾದರಿಯಾಗುವಂತಹ ಅನುಭವ ಮಂಟಪ ರಚಿಸಿ ಜಾತಿ, ಮತ, ಪಂಥ, ಎನ್ನದೆ ಸಮ-ಸಮಾಜ ಕಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಹಮ್ಮಿಕೊಂಡಿದ್ದು ಸಮಸ್ತ ಅಭಿವೃದ್ದಿಯ ಲಕ್ಷಣ ಎನ್ನುತ್ತಾ ಮೊಟ್ಟಮೊದಲು ನಮ್ಮ ದೇಶದ ಸೂನಾತನ ಯೋಗಾ ಪದ್ದತಿ ಅದರ ಮಹತ್ವ ಇಡೀ ವಿಶ್ವಕ್ಕೆ ಪರಿಚಯಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲು ಕೊಂಡೊಯಿದ್ದುದು ಆದ್ಯಾತ್ಮಿಕ ಕ್ಷೇತ್ರದಲ್ಲಿ ಮೊದಲ ಸ್ವಚ್ಛತೆ, ದೇಶದ ಸುತ್ತ-ಮುತ್ತಲಿನ ರಾಷ್ಟ್ರಗಳಲ್ಲಿ ಸೌಹಾರ್ದಯುತ ಸಂಬಂಧ ಬೆಳೆಸುವ ಮೂಲಕ ದೇಶ-ವಿದೇಶಗಳ ಕೆಟ್ಟ ಸಂಬಂಧಗಳ ಸ್ವಚ್ಛತೆ, ಕಪ್ಪು ಹಣ ನಿರ್ಮೂಲನೆಗಾಗಿ ನೋಟು ಅಮಾನ್ಯಕರಣ, ರೈತರಿಗೆ ಪ್ರೋತ್ಸಾಹ ಧನ ನೇರ ಖಾತೆಗೆ ಆರ್ಥಿಕ ಕ್ಷೇತ್ರದಲ್ಲಿ ಸ್ವಚ್ಛತೆ, ಬಡವರಿಗೆ ಕಡಿಮೆ ದರದಲ್ಲಿ ಔಷದಿ ಉಪಚಾರಕ್ಕಾಗಿ ಜನೌಷಧಿ ಕೇಂದ್ರದಿಂದ ಸಾಮಾಜಿಕ ಸ್ವಚ್ಛತೆ, ದೇಶಾದ್ಯಂತ ಜಿ.ಎಸ್.ಟಿ. ಮುಖಾಂತರ ಒಂದೇ ತೆರಿಗೆ ವಾಣಿಜ್ಯ ಕ್ಷೇತ್ರದ ಸ್ವಚ್ಛತೆ, ನ್ಯಾಯಲಯ ತೀರ್ಪು ಸ್ವೀಕರಿಸುವುದು ನ್ಯಾಯಾಂಗ ಕ್ಷೇತ್ರದ ಸ್ವಚ್ಛತೆ, ಹೀಗೆ ಅನೇಕ ಕ್ಷೇತ್ರಗಳಲ್ಲಿ ಸ್ವಚ್ಛತೆ ಮಾಡುತ್ತಾ ಸ್ವಚ್ಛವಾಗಿಟ್ಟುಕೊಳ್ಳುವುದು ಅವಶ್ಯಕವಾಗಿದೆ ಎಂದರು.

ರೋಟರಿ ಕ್ಲಬಿನ ಮಾಜಿ ಉಪಾದ್ಯಕ್ಷ ಚಂದ್ರಶೇಖರ ತಳ್ಳಳ್ಳಿ ಸ್ವಾಗತಿಸಿದರು ಕ್ಲಬಿನ ಅಧ್ಯಕ್ಷರಾದ ಸ್ಯಾಮುವೆಲ್ ಸಂಧ್ಯಾರಾಜ ಅನುಪಸ್ಥಿತಿಯಲ್ಲಿ ಡಾ. ರಮೇಶ ಯಳಸಂಗೀಕರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿಗಳಾದ ಸೈಯದ್ ಎಸ್. ವಂದಿಸಿದರು.

ಇದೇ ಸಂದರ್ಭದಲ್ಲಿ  ಪ್ರತಿ ವಾರದ ಸಭೆಯಲ್ಲಿ ನಡೆಯುವಂತೆ ಈ ವಾರ ದಿನಾಂಕ ನವೆಂಬರ ೦೯ರಿಂದ ೧೫ರವರೆಗಿನ ಕ್ಲಬಿನ ಸದಸ್ಯರ ಹುಟ್ಟುಹಬ್ಬಗಳಲ್ಲಿ ಒಬ್ಬರಾದ ಚಂದ್ರಶೇಖರ ತಳ್ಳಳ್ಳಿಯವರ ಹುಟ್ಟುಹಬ್ಬಕ್ಕೆ ಶುಭಕೋರಿದರು. ಕ್ಲಬಿನ ಹಿರಿಯ ಸದಸ್ಯರಾದ ಅನಂತ ಹರಸೂರ ಅವರವಿಂದ ಶಾಹ, ಅರವಿಂದ ಮಾಡಗಿ, ಚನಬಸಪ್ಪ ಸಮಾಣೆ, ರಮೇಶ ಪಾಟೀಲ್, ಕೆ.ಎಸ್. ವಿದ್ಯಾಸಾಗರ, ಚಂದ್ರಕಾಂತ ಪಾಟೀಲ, ಚೇತನಕುಮಾರ ಗಾಂಗಜೀ, ಡಾ. ಸದಾಶಿವ ಜಿಡಗೇಕರ, ಶಾಂತಪ್ಪ ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

8 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

10 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

17 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

17 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

17 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago