ಕಲಬುರಗಿ: ಅಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಜಿಲ್ಲಾ ಘಟಕ, ಕಲಬುರಗಿ ವತಿಯಿಂದ 26 ರಂದು ಮಂಗಳವಾರ ಬೆಳಗ್ಗೆ 11.00 ಗಂಟೆಗೆ ಸಂವಿಧಾನ ದಿನಾಚರಣೆ ಆಚರಿಸಲಾಗುವುದೆಂದು ಎ.ಐ.ಎಂ.ಸಿ ಉತ್ತರ ಕರ್ನಾಟಕ ಉಸ್ತುವಾರಿ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಅಧ್ಯಕ್ಷರಾದ ಡಾ. ಮಹ್ಮದ್ ಅಸಗರ್ ಚುಲಬುಲ್ ಅವರು ತಿಳಿಸಿದ್ದಾರೆ.
ನಾಳೆ ನಗರದ ಕೆ.ಬಿ.ಎನ್. ಆಸ್ಪತ್ರೆ ಎದುರುಗಡೆಯಲ್ಲಿರುವ ಅಂಜುಮನ್ ತರಕಿ ಉರ್ದು ಭವನದಲ್ಲಿ ಕಾರ್ಯಕ್ರಮ ಆಯೋಜಿಲಾಗಿದ್ದು, ಕರ್ನಾಟಕ ರಾಜ್ಯ ರೈತ ಸಂಘ ಉಪಾಧ್ಯಕ್ಷರಾದ ಮಾರುತಿ ಮಾನಪಡೆ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಹಿರಿಯ ನ್ಯಾಯವಾದಿ ಸಾದತ್ ಹುಸೇನ್ ಉಸ್ತಾದ, ಹೈಕೋರ್ಟ್ ನ್ಯಾಯವಾದಿ ಶಿವಕುಮಾರ ತೆಂಗಳಿ, ದಲಿತ ಸೇನಾ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ, ಬಾಂಸೆಫ್ ರಾಜ್ಯಾಧ್ಯಕ್ಷರಾದ ಸುಭಾಷ ಶೀಲವಂತ, ಕಲಬುರಗಿ ಎ.ಐ.ಎಂ.ಸಿ. ಅಧ್ಯಕ್ಷ ಮೌಲಾನಾ ಗೌಸೋದ್ದೀನ್ ಖಾಸ್ಮಿ, ನ್ಯಾಯವಾದಿ ಹಾಗೂ ಯತೀಮಖಾನಾ ಅಧ್ಯಕ್ಷರಾದ ಮಜರ್ ಹುಸೇನ್, ಪ್ರೀಸ್ಟ್, ಸೆಂಟ್ ಮೇರಿ ಚರ್ಚ್ ಫಾದರ ವಿಜಯರಾಜು ಪಾರಿಶ, ಹೈ.ಕ. ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ, ಎ.ಐ.ಎಂ.ಸಿ ಉಪಾಧ್ಯಕ್ಷ ಮೌಲಾನಾ ಜಾವೀದ ಆಲಂ ಖಾಸ್ಮಿ, ಮಾಜಿ ಮಹಾಪೌರರಾದ ಶರಣಕುಮಾರ ಮೋದಿ, ಗುರುನಾನಕ ಮಠ ಉಪಾಧ್ಯಕ್ಷರಾದ ಬಸವೀರ್‌ಸಿಂಗ್ ಛಾರ್ಬಾ, ಎಐಎಂಸಿ ಸದಸ್ಯ ಗುರುದ್ವಾರಾ, ಹಿರಿಯ ಪತ್ರಕರ್ತ ಹಾಗೂ ಕೆ.ಬಿ.ಎನ್ ಟೈಮ್ಸ್ ಸಂಪಾದಕ ಅಜೀಜುಲ್ಲಾ ಸರಮಸ್ತ, ಮಾಜಿ ಮಹಾಪೌರರಾದ ಮಹ್ಮದ್ ಜಾಹೇದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕಲಬುರಗಿ ಎವಿಎಂಸಿ ಪ್ರ.ಕಾರ್ಯದರ್ಶಿ ಶಫಿಕ್ ಅಕ್ಕದ ಬಾಸ್ತಿ, ಅಫಜಲಪೂರ ತಾಲ್ಲೂಕಿನ ಎವಿಎಂಸಿ ಅಧ್ಯಕ್ಷ ಮಸೂದ ಭಾದ ಜಾಗೀರದಾರ, ಚಿತ್ತಾಪೂರ ಎಐಎಂಸಿ. ಅಧ್ಯಕ್ಷ ಫಿರೋಜ್ ಖಾನ್, ಕಲಬುರಗಿ ಎಐಎಂಸಿ ಕಾರ್ಯದರ್ಶಿ ನಜೀರ್ ಅಹ್ಮದ ರಷಾದಿ, ಅಲ್ಲಾಭಕ್ತ ಜೇವರ್ಗಿ, ಮಹ್ಮದ ಇಬ್ರಾಹಿಂ ಚಿಂಚೋಳಿ, ಖಾತಿಂ ಜುನೇದಿ ಕಲಬುರಗಿ, ಸಾಜೀದ ಖಾನ್ ಸೇಡಂ, ಮಹ್ಮದ ಜಿಯಾಯೋದ್ದಿನ್ ಕಾಳಗಿ ಅವರು ಸ್ವಾಗತ ಸಮಿತಿಯ ಸದಸ್ಯರಾಗಿ ಉಪಸ್ಥಿತಿ ವಹಿಸಲಿದ್ದಾರೆಂದು ಪ್ರಕಟನೆಯಲ್ಲಿ ತಿಳಿಸಿದೆ.