ಕಲಬುರಗಿ: ಮಾರ್ಕ್ಸವಾದಿ ಕಾಮ್ರೆಟ್ ಶಿವದಾಸ ಘೋಷ ಅವರು ಸ್ಥಾಪಿಸಿ ಎಸ್.ಯು.ಸಿ.ಐ ಪಕ್ಷ 7 ದಶಕಗಳು ಕಳೆದಿವೆ, ಬಂಡವಾಳಶಾಹಿ ವಿರೋಧ ಸಮಾಜವಾದಿ ಕ್ರಾಂತಿ ಚಿರಾಯುವಾಗಿರಲಿ ಸೋಷಿಯಲ್ ಯುನಿಟಿ ಆಫ್ ಇಂಡಿಯಾ ಪಕ್ಷವು ದಶಗಳಿಂದ ಶೋಷಿತ, ತುಳಿತಕ್ಕೊಳಗಾದ ಜನರ ಮುಲಭೂತ ಸೌಲಭ್ಯಗಳ ಕುರಿತು ಆದೋಲನೆಗಳು ನಡೆಸುತ್ತ ಬಂದಿದೆ ಎಂದು ಜಿಲ್ಲಾ ಸಮಿತಯ ಅಧ್ಯಕ್ಷ ಆರ್.ಕೆ ವಿರಭದ್ರಪ್ಪ ಅವರು ತಿಳಿಸಿದ್ದರು.
ಅವರು ನಗರದ ಹಳೆ ಜೀವರ್ಗಿಯಲ್ಲಿರುವ ತಮ್ಮ ಕಚೇರಿಯಲ್ಲಿ ನಡೆದ ಸಂಸ್ಥಾಪಕ ದಿನಾಚರಣೆಯ ಅಂಗವಾಗಿ ಮಾತನಾಡಿ, ಜನರು ದೇಶದಲ್ಲಿರುವ ರಾಷ್ಟ್ರೀಯ ಪಕ್ಷಗಳ ಬಗ್ಗೆ ಒಲವು ಕಮ್ಮಿಯಾವೆ. ನಮ್ಮ ಪಕ್ಷದ ಹೋರಾಟಗಳು ಜನರಿಗೆ ಮುಟ್ಟುತ್ತಿರುವದರಿಂದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಹೊರತು ಪಡಿಸಿ ಪರ್ಯಾಯ ರಾಜಕೀಯ ನೇತಾರರನ್ನು ಹುಡುಕುತ್ತಿವೆ, ನಮ್ಮ ಪಕ್ಷ ಜನರ ಸಮಸ್ಯೆಗಳು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದರಿಂದ ಪಕ್ಷಕ್ಕೆ ಬೆಲೆ ಸಿಗುತ್ತಿದೆ ಎಂದು ಹರ್ಷವ್ಯಕ್ತಪಡಿಸಿ ಶಿವದಾಸ ಅವರ ಕನಸು ನನಸು ಮಾಡುವುದಕ್ಕೆ ಶ್ರಮಿಸಬೇಕೆಂದು ತಮ್ಮ ಸಮಿತಿಯ ಕಾರ್ಯಕರ್ತರಿಗೆ ಕರೆ ನೀಡಿದ್ದರು.
ಈ ಸಂದರ್ಭದಲ್ಲಿ ಕಾಮ್ರೆಡ್ ಗಣಪತರಾವ್ ಅವರು ಸಭೆಯ ಅಧ್ಯಕ್ಷತೆವಹಿಸಿದ್ದರು, ಜಿಲ್ಲಾ ಸಮಿತಿಯ ಸದಸ್ಯ ನಾಗಮ್ಯಳ್, ರಾಮಣ ಎಸ್. ಇಬ್ರಾಹಿಂಪುರ. ಎಸ್.ಎಂ ಶರ್ಮಾ, ವಿ.ಜಿ ದೇಸಾಯಿ, ಜಗನ್ನಾಥ, ಮಹೇಶ್ ಗೌಡ, ನಿಂಗಣ್ಣ ಜಂಬಗಿ, ಸೀಮಾ ದೇಶಪಾಂಡೆ, ಮಹೇಶ್ ಎಸ್.ಬಿ. ಸಂತೋಷ ಕುಮಾರ, ಮಲ್ಲಿನಾಥ್ ಸಿಂಗೆ ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.