ಇಂದು  ದೇಶದ 72 ಕ್ಷೇತ್ರಗಳಲ್ಲಿ 4ನೇ ಹಂತದ ಮತದಾನ

0
78

ನವದಹೆಲಿ: ದೇಶದಲ್ಲಿ ಸಾರ್ವತ್ರಿಕ ಲೋಕ ಸಭೆ ಚುನಾವಣೆ ರಂಗೇರುತ್ತಿದ್ದು, ಈಗಾಗಲೇ ಮೂರು ಹಂತಗಳಲ್ಲಿ ಚುನಾವಣೆ ಶಾಂತಿಯುತವಾಗಿ ಮುಗಿದಿದ್ದು, ಮತದಾನವು ನಡೆದಿದೆ, ಇನ್ನೂ 4 ಹಂತದ ಮತದಾನ ಬಾಕಿ ಉಳದಿದ್ದು ಎಲ್ಲಾ ರಾಜಕೀಯ ಪಕ್ಷಗಳು ಮತದಾರರಿಗೆ ಓಲೈಸುವ ಕಸರತ್ತಿನಲ್ಲಿ ಮುಳಗಿದ್ದಾರೆ. ಇನ್ನೂ ಒಳಿದ ನಾಲ್ಕು ಹಂತದ ಮತದಾನದಲ್ಲಿ ಇಂದು ದೇಶದ 9 ರಾಜ್ಯದ 72 ಕ್ಷೇತ್ರದಲ್ಲಿ 4ನೇ ಹಂತದ ಮತದಾನ ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾಗಿದೆ.

12.79 ಕೋಟಿ ಮತದಾರರು 945 ಅಭ್ಯರ್ಥಿಗಳ ರಾಜಕೀಯ ಜೀವನದ ದಿಕ್ಕನೂ ಬದಲಿಸಲು ಮುಂದಾಗಿದ್ದಾರೆ.

Contact Your\'s Advertisement; 9902492681

ಮತದಾನ ನಡೆಯುತ್ತಿರುವ ರಾಜ್ಯ ಹಾಗೂ ಕ್ಷೇತ್ರಗಳು

ಮಹಾರಾಷ್ಟ್ರದ 17, ರಾಜಸ್ಥಾನ 13, ಪಶ್ಚಿಮ ಬಂಗಳಾದ 8, ಮಧ್ಯಪ್ರದೇಶ ಮತ್ತು ಒಡಿಶಾ6, ಬಿಹಾರದ6, ಜಾರ್ಖಂಡ 3 ಜಮ್ಮು ಕಾಶ್ಮೀರ ಅನಂತನಾಗ್ ಒಂದು ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪ್ರಾರಂಭವಾಗಿದೆ.

ಮತದಾನದ ಕುರಿತು ಚುನಾವಣೆ ಆಯೋಗ ಸಕಲ ಸಿದ್ಧತೆಗಳು ಮಾಡಿಕೊಂಡು, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುನ್ನೆಚ್ಷರಿಕೆ ಕ್ರಮವಾಗಿ ಮತದಾನ ನಡೆಯುವ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here