ಯಾದಗಿರಿ/ಶಹಾಪುರ: ಸರಕಾರದ ಕ್ಷೀರ ಭಾಗ್ಯ ಯೋಜನೆಯ ಅಡಿಯಲ್ಲಿ ಶಾಲಾ ಮತ್ತು ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಸರಬರಾಜು ಮಾಡುವ ಹಾಲಿನ ಪುಡಿಯ ಪಾಕೇಟುಗಳನ್ನು ತಮ್ಮ ಸ್ವಂತ ಲಾಬಕ್ಕಾಗಿ ಹತ್ತಿಗೂಡೂರ ಪೆಟ್ರೋಲ್ ಬಂಕ್ ಹತ್ತಿರ ವ್ಯಕ್ತಿ ಓರ್ವ ಅಕ್ರಮವಾಗಿ 6.42 ಸಾವಿರ ಮೌಲ್ಯದ ಹಾಲಿನ ಪುಡಿಗಳು ಪೊಲೀಸರು ಕಾರ್ಯಾಚರಣೆ ನಡೆಸ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ರಂಗಂಪೇಟ ನಿವಾಸಿಯಾಗಿದ ಮಹೆಬೂಬ್ ಲಾಲಸಾಬ (32) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಇಂದು ಸಂಜೆ 9ಕ್ಕೆ ಹತ್ತಿಗೂಡೂರ ಪೆಟ್ರೋಲ್ ಬಂಕ್ ಹತ್ತಿರ ಅಕ್ರಮವಾಗಿ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಶಹಾಪುರ ಪೊಲೀಸ್ ಠಾಣೆಯ ಪಿ.ಎಸ್.ಐ ಚಂದ್ರಕಾಂತ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ 6,42,000 ರೂ. ಮೌಲ್ಯದ ಹಾಲಿನ ಪುಡಿ ಪಾಕಲೇಟುಗಳನ್ನು ವಶ ಪಡಿಸಿಕೊಂಡು, ಆರೋಪಿಯ ವಿರುದ್ಧ 9 ಕಲಂ: 3 ಮತ್ತು 7 ಕರ್ನಾಟಕ ಎಸೆನ್ಸಿಯಲ್ ಕಮಾಂಡೆಟೀಸ್ ಎಕ್ಸ್ 1992 ಮತ್ತು ಕರ್ನಾಟಕ ಎಸೆನ್ಸಿಯಲ್ ಡಸ್ಟಿಟ್ಯೂಷನ್ ಸಿಸ್ಟಮ್ ಪಬ್ಲಿಕ್ ಕಂಟ್ರೋಲ್ ಆರ್ಡರ್ ಅಡಿಯಲ್ಲಿ ಪ್ರಕರಣ ಧಾಖಲಿಸಿ ತನಿಖೆ ನಡೆಸಿದ್ದಾರೆ.