ಬಿಸಿ ಬಿಸಿ ಸುದ್ದಿ

ಉಡುತಡಿಯ “ಹೂ” ಅಕ್ಕನ ಉಗಮ

ಒಮ್ಮೆ ಲಿಂಗಮ್ಮ ತಮ್ಮ ಮನೆಯ ಅಂಗಳದಲ್ಲಿ ಚಿತ್ರ ಚಿತ್ತಾರದ ರಂಗೋಲಿ ಹಾಕುತ್ತಿರುವಾಗ ಇಂಪಾದ ಧ್ವನಿಯ ನಾದ-ನಿನಾದವೊಂದು ಕೇಳಿ ಬರುತ್ತಿತ್ತು.
ನಂಬರು ನೆಚ್ಚರು ಬರಿದೆ ಕರೆವರು
ನಂಬಲರಿಯರೀ ಲೋಕದ ಮನುಜರು
ನಂಬಿ ಕರೆದಡೆ ಓ ಎನ್ನನೆ ಶಿವನು
ನಂಬದೆ ನೆಚ್ಚದೆ ಬರಿದೆ ಕರೆವರ
ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ

ಈ ಹಾಡು ಕೇಳಿದ ಕ್ಷಣಾರ್ಧದಲ್ಲೇ ಆ ಧ್ವನಿ ಮತ್ತೆ ತನ್ನ ಮುಂದೆಯೇ ಬಂದು ನಿಂತು ಹಾಡಿದಂತೆ ಭಾಸವಾಯಿತು. ಕತ್ತೆತ್ತಿ ನೋಡಿದೊಡೆ ಅಲ್ಲಿ ನಾಲ್ಕಾರು ಜನ ಶುಚಿರ್ಭೂತರಾಗಿ ನಿಂತಿದ್ದರು. ಅವರ ಹಣೆಯ ಮೇಲೆ, ವಿಭೂತಿ, ಕೊರಳಲ್ಲಿ ರುದ್ರಾಕ್ಷಿ, ಕೈಯಲ್ಲಿ ಜೋಳಿಗೆ ಕಂಡಿತು. ಇದನ್ನು ಕಣ್ಣಾರೆ ಕಂಡು ಕೇಳಿದ ಆ ತಾಯಿಗೆ ಆನಂದ, ಸೆಳೆತ, ಎಳೆತ ಒಮ್ಮೆಲೆ ಉಂಟಾದವು. ಆನಂದತುಂದಿಲಳಾಗಿ ಅವರ ಪಾದಕ್ಕೆರಗಿ ತಾವು ಯಾರು? ಎಲ್ಲಿಂದ ಬಂದಿರುವಿರಿ? ಎಲ್ಲಿಗೆ ಹೋಗಬೇಕಿದೆ? ಈಗ ತಾವೆಲ್ಲ ಸೇರಿ ಹಾಡಿದ ಹಾಡು ಯಾರದು? ಎಂದು ಹತ್ತಾರು ಪ್ರಶ್ನೆ ಕೇಳುತ್ತಾಳೆ.
ಆಗ ಅವರು, ನಾವು ಕಲ್ಯಾಣದ ಚರ ಜಂಗಮರು. ಅನುಭವ ಮಂಟಪದಿಂದ ಬಂದಿದ್ದೇವೆ.

ಅಪ್ಪ ಬಸವಣ್ಣ ಮತ್ತು ಇತರ ಶರಣರು ರಚಿಸಿದ ವಚನಗಳನ್ನು ನಾಡಿನಾದ್ಯಂತ ಪಸರಿಸಲು ಈ ವಚನ ಜೋಳಿಗೆ ಹಿಡಿದು ಹೊರಟಿದ್ದೇವೆ ಎಂದು ಹೇಳಿದರು. ಕಲ್ಯಾಣ, ಬಸವಣ್ಣ, ವಚನ, ಅನುಭವ ಮಂಟಪ ಈ ಹೊಸ ಬಗೆಯ ಶಬ್ದ ಕೇಳಿದ ಅವಳು ಕುತೂಹಲದಿಂದ ಆ ಚರ ಜಂಗಮರನ್ನು ಮನೆಯೊಳಗೆ ಆಹ್ವಾನಿಸುತ್ತಾಳೆ. ಮನೆಯಲ್ಲಿದ್ದ ಪತಿ ಓಂಕಾರಶೆಟ್ಟಿ ವೇದ, ಶಾಸ್ತ್ರವಿಲ್ಲದ ಈ ಹಾಡುಗಳು ದೇವರ ಪೂಜೆಗೆ ಅದೇಗೆ ಯೋಗ್ಯ? ಈ ಪೂಜೆ, ಪ್ರಾರ್ಥನೆಯನ್ನು ನಮ್ಮ ದೇವರು ಸ್ವೀಕರಿಸಿಯಾನೆ? ಎಂದು ಕೇಳುತ್ತಾರೆ. ಆಗ ಅವರು, ಅಪ್ಪ ಬಸವಣ್ಣನವರು ಸರಳ, ಸುಂದರ, ಸ್ವಚ್ಛ ಕನ್ನಡದಲ್ಲಿ ರಚಿಸಿದ ಈ ವಚನಗಳು ಮೊಟ್ಟ ಮೊದಲು ದೇವರಿಗೆ ಕನ್ನಡ ಕಲಿಸಿದಂತಿವೆ ಎಂದು ಉತ್ತರಿಸುತ್ತಾರೆ. ಹಾಗಾದರೆ ಬಸವಣ್ಣನೆಂದರೆ ಯಾರು? ಎಂದು ಮರು ಪ್ರಶ್ನೆ ಹಾಕುತ್ತಾರೆ ಶೆಟ್ಟಿ ದಂಪತಿ.

ಬಸವಣ್ಣನೆಂದರೆ ಯಾರು? ಎಂದು ಕೇಳಿದ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಎಂದು ದಿಗಿಲುಗೊಂಡಂತಾದ ಆ ಜಂಗಮರು, “ಜಾತಿ, ವರ್ಗ, ವರ್ಣ, ಲಿಂಗಭೇದವಿಲ್ಲದ ಸರ್ವ ಸಮಾನತೆಯ ಲಿಂಗಾಯತ ಧರ್ಮ ಕೊಟ್ಟವರು ಗುರು ಬಸವಣ್ಣನವರು. ಅವರು ಕರುಣಿಸಿದ ಇಷ್ಟಲಿಂಗ ಸಾಧನೆಯ ಸೂತ್ರ. ಈ ಮೂಲಕ ಸಮಾಜದ ಎಲ್ಲರನ್ನು ಒಂದೇ ತೆಕ್ಕೆಯಲ್ಲಿ ಹಿಡಿದು ದೇವರ ಮನೆ ಬಾಗಿಲು ತೆರೆದ ಭಾಗ್ಯವಿಧಾತರು” ಎಂದು ಸೂಚ್ಯವಾಗಿ ಬಸವಣ್ಣನವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟರು.

ಬಳಿಕ ಎಲ್ಲರೂ ಸೇರಿ ಗುರುಲಿಂಗ ದೇವರ ಮಠಕ್ಕೆ ತೆರಳಿ ರಾತ್ರಿ ಅಲ್ಲಿ ಅನುಭಾವ ಗೋಷ್ಠಿ ನಡೆಸುತ್ತಾರೆ. “ಬಸವ ಸಾರಿದನು ಕುಶಲದಲಿ ವಚನಗಳ, ಮಸುಕಿರುಳು ಹರಿದು ನಸುಕಾಯಿತು, ಹೊಸ ಮತದ ಸೂರ್ಯನುದಯಿಸಿದನು”, “ಆಯತವು ಬಸವಣ್ಣ, ಸನ್ನಿಹಿತವು ಬಸವಣ್ಣ…,” “ಬಸವ ಮಾಡಿದಡಾಯಿತ್ತು ಭುವಿಗೆ ಭಕ್ತಿಯ ಬೆಳಕು” ಎಂಬಿತ್ಯಾದಿ ಹಾಡು, ವಚನಗಳನ್ನು ಹಾಡಿ ಬಸವಣ್ಣ ಮತ್ತು ಅವರ ಶರಣ ಸಂಕುಲದ ಸ್ಥೂಲ ಪರಿಚಯ ಮಾಡಿಕೊಡುತ್ತಾರೆ.

ಆಗ ಮಠದಲ್ಲಿದ್ದ ಗುರುಲಿಂಗ ದೇವರು ಸಹ ಈ ಜಂಗಮರು ಹೇಳುವಂತೆ, ಬಸವಣ್ಣನವರಿಂದ ಸಂಪ್ರದಾಯ, ಪರಂಪರೆ, ಮೂಢನಂಬಿಕೆ, ಶೂದ್ರ, ಹೆಣ್ಣು ಕೀಳು ಇವೆಲ್ಲವೂ ಮಾಯವಾಗಿ ಅರಿವು, ಆಚಾರ, ಸುಜ್ಞಾನ ಮೂಡುವಂತಾಗಿದೆ. ದೇವರ ಸಾಕ್ಷಾತ್ಕಾರಕ್ಕಾಗಿ ದಂದಣ, ದತ್ತಣ ಎಂದು ಒಲಿದಂತೆ ಹಾಡಲು ಧೈರ್ಯ ತುಂಬಿದ ಮಹಾನುಭಾವ ಅವರು ಎಂದು ಜಂಗಮರ ಮಾತಿಗೆ ಧ್ವನಿಗೂಡಿಸುತ್ತಾರೆ.  ಒಂದೊಮ್ಮೆ ತನಗೆ ಮಕ್ಕಳಿಲ್ಲ, ತಾನು ಬಂಜೆ, ಮಕ್ಕಳಾಗದಿದ್ದರೆ ಮುಕ್ತಿಯಿಲ್ಲ ಎಂದು ಲಿಂಗಮ್ಮ ಬಹಳ ದುಃಖಿಸುತ್ತಿರುವಾಗ, “ಹುಚ್ಚಿ ಅವರು ತಪ್ಪು ತಿಳಿದಿದ್ದಾರೆ. ನಮಗೆ ಮಕ್ಕಳಾಗದಿದ್ದರೆ ಮುಕ್ತಿಯಿಲ್ಲ ಎಂದಲ್ಲ ಅದು, ನಾವು ಮಕ್ಕಳಾಗದಿದ್ದರೆ ಮುಕ್ತಿಯಿಲ್ಲ. ಅಂದರೆ ನಾವು ಗುರುವಿನ ಪುತ್ರರಾಗಬೇಕು, ಈ ಎಮ್ಮೆ, ಆಕಳುಗಳಿಗೆ ಎಷ್ಟು ಮಕ್ಕಳಿವೆ? ಹಾಗಾದರೆ ಅವುಗಳಿಗೆ ಏನೆಂಥ ಮುಕ್ತಿಯಿದೆ? ಮೊದಲು ನೀನು ಚಿಂತೆ ಮಾಡುವುದನ್ನು ಬಿಡು ಎಂದು ಪತಿ ನಿರ್ಮಲಶೆಟ್ಟಿ ಲಿಂಗಮ್ಮನನ್ನು ಸಮಾಧಾನಪಡಿಸುತ್ತಾರೆ.

ಮುಂದೆ ಲಿಂಗಮ್ಮ ತ್ರಿಕಾಲ ಪೂಜೆಯಲ್ಲಿ ತೊಡಗುತ್ತಾಳೆ. ಒಂದೊಮ್ಮೆ ಗುರುಗಳು ವೃಕ್ಷದ ಕೆಳಗೆ ಧ್ಯಾನಮಗ್ನಾಗಿರುತ್ತಾರೆ. ಅವರ ಎದುರಿಗೆ ತಾನೂ ಸಹ ಧ್ಯಾನಾಸಕ್ತಳಾಗಿದ್ದಾಗ, ಗುರುಗಳು ಕಣ್ತರೆದು ಮುಗುಳ್ನಗುತ್ತಾರೆ. ಈ ಪ್ರಸಂಗವನ್ನು ಕಣ್ಣಾರೆ ಕಂಡ ಓಂಕಾರಶೆಟ್ಟಿಗೆ ಆಶ್ಚರ್ಯವಾಗುತ್ತದೆ. ಎಚ್ಚರಗೊಂಡ ಲಿಂಗಮ್ಮ, “ಗುರುಗಳೆ ನೀವು ಕೈಯಲ್ಲಿ ಲಿಂಗವಿಡಿದು ಕುಳಿತಾಗ ನಿಮ್ಮ ತಲೆಯಿಂದ ಹೂ ಜಾರಿ ನನ್ನ ಉಡಿಯಲ್ಲಿ ಬಿತ್ತು. ನೀವು ಅದನ್ನು ಕೊಡು ಎಂದು ಕೇಳಿದಿರಿ, ನಾ ಕೊಡೆ ಎಂದು ಅಂದೆ” ಎಂದು ಹೇಳುವಷ್ಟರಲ್ಲಿ ನನಗೆ ಎಚ್ಚರವಾಯಿತು ಎಂದು ತನ್ನ ಕನಸನ್ನು ಅವರೆದುರು ಅರುಹಿದಳು.

(ಸ್ಥಳ: ಖೂಬಾ ಪ್ಲಾಟ್, ಎಚ್.ಸಿ.ಜಿ. ಕ್ಯಾನ್ಸರ್ ಆಸ್ಪತ್ರೆ ಎದುರು, ಕಲಬುರಗಿ)

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

5 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

11 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

11 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

12 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

23 hours ago